ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಮಜಾ ಭಾರತ ಖ್ಯಾತಿಯ ಜಗ್ಗಪ್ಪ, ಸುಶ್ಮಿತಾ: ಫೋಟೋಸ್ ನೋಡಿ

By Poorva

ಮಜಾ ಭಾರತದ ಮೂಲಕ ಎಲ್ಲರ ಗಮನ ಸೆಳೆದ ಜೋಡಿ ಸುಶ್ಮಿತಾ ಹಾಗೂ ಜಗಪ್ಪ ಅವರದ್ದು. ಆ ಬಳಿಕ ಗಿಚ್ಚಿ ಗಿಚ್ಚಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಮಜಾ ಭಾರತದ ಮೂಲಕ ಪರಿಚಯವಾದ ಈ ಜೋಡಿ ಇದೀಗ ಹಸೆಮಣೆ ಏರಲು ಸಿದ್ಧವಾಗಿದೆ. ಈಗಾಗಲೇ ಮೆಹಂದಿ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಮಾಡಿರುವ ಜೋಡಿಗೆ ಇದೀಗ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಇದೀಗ ಸುಶ್ಮಿತಾ ಮೆಹಂದಿ ಶಾಸ್ತ್ರದ ದಿನ ತೆಗೆದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮತ್ತಷ್ಟು ಸಂಭ್ರಮ ಪಟ್ಟುಕೊಂಡು ಈ ಜೋಡಿಗೆ ಶುಭ ಹಾರೈಸುತ್ತಾ ಇದ್ದಾರೆ. ಇದೀಗ ಸ್ಟೈಲಿಶ್ ಆಗಿ ಫೋಟೋ ತೆಗೆಸಿಕೊಂಡು ಇರುವ ಜಗಪ್ಪ ಹಾಗೂ ಸುಶ್ಮಿತಾ ಫೋಟೋ ವೈರಲ್ ಆಗುತ್ತಿದೆ..ಅದ್ದೂರಿಯಾಗಿ ಮೆಹೆಂದಿ ಶಾಸ್ತ್ರವನ್ನು ಆಚರಣೆ ಮಾಡಿಕೊಂಡಿರುವ ಈ ನವ ಜೋಡಿಗೆ ಹಿರಿಯರು ಆಶಿರ್ವಾದ ಮಾಡುತ್ತಿದ್ದಾರೆ..

jagappa-and-sushmita-mehendi-ceremony

ಮೆಹೆಂದಿ ಶಾಸ್ತ್ರದ ಫೋಟೋಗಳಿಗೆ 60 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು , ಸಾಕಷ್ಟು ಮಂದಿ ಲೈಕ್ ಕಾಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ಸುಶ್ಮಿತಾ ಹಾಗೂ ಜಗಪ್ಪ ಆರೆಂಜ್ ಮತ್ತು ಪಿಂಕ್ ಕಲರ್ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸುಶ್ಮಿತಾ ಲೆಹೆಂಗಾದಲ್ಲೀ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದು ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದ್ದಾರೆ. ಇಬ್ಬರೂ ಜೋಡಿಯಾಗಿ ಹಾರ್ಟ್ ಎಮೋಜಿಯನ್ನು ಕೈಯಲ್ಲಿ ತೋರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ.

ಸುಶ್ಮಿತಾ- ಜಗಪ್ಪ ಅದ್ದೂರಿ ಮೆಹೆಂದಿ ಶಾಸ್ತ್ರ

ಹಾಗೆಯೇ ಮೆಹಂದಿ ಶಾಸ್ತ್ರ ಮಾಡಿಕೊಂಡ ಬಳಿಕ ಹಲವಾರು ಜನ ಮದುವೆ ಯಾವಾಗ ಎಂದೆಲ್ಲ ಕಾಮೆಂಟ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ . ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದರು. ಹಾಗೆಯೇ ಒಂದೇ ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ಸುಶ್ಮಿತಾ ಹಾಗೂ ಜಗಪ್ಪ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ತಿಳಿದಿತ್ತು.

jagappa-and-sushmita-mehendi-ceremony

ಆರು ವರುಷದ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ ಜೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿ ಬಗ್ಗೆ ಈ ಜೋಡಿ ರಿವೀಲ್ ಮಾಡಿದ್ದರು. ಅಲ್ಲದೆ ಗುರು ಹಿರಿಯ ಮುಂದೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಜಗಪ್ಪ 5 ಗುಲಾಬಿಗಳನ್ನು ಹಿಡಿದುಕೊಂಡು ಒಂದೊಂದಾಗಿ ಸುಶ್ಮಿತಾಗೆ ಕೊಡುತ್ತಾ ಪ್ರಪೋಸ್ ಮಾಡಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

ಮಹಾಭಾರತದಿಂದ ಒಂದಾದ ಮುದ್ದು ಜೋಡಿ

ಸುಶ್ಮಿತಾ - ಜಗಪ್ಪ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆ ಪ್ರೀತಿ ಇದೀಗ ಮದುವೆಯ ತನಕ ಬಂದು ತಲುಪಿದೆ. ಮೊದಲೆಲ್ಲ ಜಗಪ್ಪ ಹಾಗೂ ಸುಶ್ಮಿತಾ ಜೋಡಿಯನ್ನು ನೋಡಿದ ಅಭಿಮಾನಿಗಳು ಇವರು ನಿಜ ಜೀವನದಲ್ಲಿ ಕೂಡ ಒಂದಾಗಲಿ ಎಂದು ಹಾರೈಸಿದ್ದರು. ಅವರ ಹಾರೈಕೆ ಫಲಿಸಿದ್ದು, ಇದೀಗ ಇಬ್ಬರು ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

More from Filmibeat

English summary
Jagappa and sushmita mehendi ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X