ರೀಲ್ ಅಲ್ಲ, ರಿಯಲ್‌ನಲ್ಲೂ ಸತಿ-ಪತಿಯಾದ 'ಮಜಾಭಾರತ' ಖ್ಯಾತಿಯ ಸುಶ್ಮಿತಾ-ಜಗಪ್ಪ

ಕಾಮಿಡಿ ರಿಯಾಲಿಟಿ ಶೋ ಮಜಾಭಾರತ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಗಪ್ಪ ಹಾಗೂ ಸುಶ್ಮಿತಾ ಭಾನುವಾರ (ನವೆಂಬರ್ 19) ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರವಷ್ಟೇ (ನವೆಂಬರ್ 18 ರಂದು) ಈ ಜೋಡಿಯ ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.

ಮಜಾ ಭಾರತ ಶೋ ಮೂಲಕ ಪರಿಚಯವಾದ ಈ ಜೋಡಿ ಭಾನುವಾರ (ನವೆಂಬರ್ 19) ಬೆಂಗಳೂರಿನ ಜೆಪಿ ನಗರದ ಸಿಂಧೂರ ಕನ್ವೆಷನ್ ಹಾಲ್‌ನಲ್ಲಿ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತ ಈ ಜೋಡಿ ಸತಿ ಪತಿಗಳಾಗಿದ್ದಾರೆ. ಮದುವೆಗೆ ಕಿರುತೆರೆ, ಹಿರಿತೆರೆ ಕಲಾವಿದರು ಸಾಕ್ಷಿಯಾಗಿದ್ದರು.

Majabharatha Reality Show Fame Jagappa and Sushmita Got Married

ಜಗಪ್ಪ ಹಾಗೂ ಸುಶ್ಮಿತಾ ಜೋಡಿಯ ಮದುವೆಗೆ ಕಿರುತೆರೆಯ ಹಲವು ನಟ, ನಟಿಯರು ಆಗಮಿಸಿ ಶುಭ ಹಾರೈಸಿದ್ದಾರೆ. ಮದುವೆಗೆ ನಿರಂಜನ್ ದೇಶಪಾಂಡೆ ದಂಪತಿ, ನಟಿ ಶ್ರುತಿ ಮಗಳು ಗೌರಿ, ನಟಿ ಶ್ರುತಿ ರಮೇಶ್, ಪಾವಗಡ ಮಂಜು, ಸಿತಾರಾ ಮಜ ಭಾರತ ರಿಯಾಲಿಟಿ ಶೋ ತಂಡ ಬಂದಿತ್ತು. ಇದಲ್ಲದೆ ನಟ ರವಿಚಂದ್ರನ್, ಪ್ರಜ್ವಲ್ ದೇವರಾಜ್ ಸೇರಿ ಕೆಲವು ಸಿನಿಮಾ ತಾರೆಯರು ನವಜೋಡಿಗೆ ಶುಭಹಾರೈಸಿದ್ದಾರೆ.

ಸತಿ ಪತಿಯಾದ ರೀಲ್ ಜೋಡಿ

ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದರು. ಹಾಗೆಯೇ ಒಂದೇ ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಅಭಿನಯಿಸಿದ್ದಾರೆ. ಸುಶ್ಮಿತಾ ಹಾಗೂ ಜಗಪ್ಪ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ತಿಳಿದಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿ ಬಗ್ಗೆ ಈ ಜೋಡಿ ರಿವೀಲ್ ಮಾಡಿದ್ದರು.

ಇತ್ತೀಚೆಗೆ ಕುಟುಂಬಸ್ಥರು ಮತ್ತು ಗುರು ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಜಗಪ್ಪ 5 ಗುಲಾಬಿಗಳನ್ನು ಹಿಡಿದುಕೊಂಡು ಒಂದೊಂದಾಗಿ ಸುಶ್ಮಿತಾಗೆ ಕೊಡುತ್ತಾ ಪ್ರಪೋಸ್ ಮಾಡಿದ್ದರು. ಈಗ ಈ ರೀಲ್ ಜೋಡಿ ರಿಯಲ್ ಲೈಫ್‌ನಲ್ಲಿ ಸತಿ ಪತಿಯಾಗಿದ್ದಾರೆ.

Majabharatha Reality Show Fame Jagappa and Sushmita Got Married

ರಿಯಾಲಿಟಿ ಶೋ ಕಲಾವಿದರಾದ ಸುಶ್ಮಿತಾ - ಜಗಪ್ಪ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆ ಪ್ರೀತಿ ಇದೀಗ ಮದುವೆಯಲ್ಲಿ ಮತ್ತೆ ಪುನರಾರಂಭವಾಗಿದೆ. ಜಗಪ್ಪ ಹಾಗೂ ಸುಶ್ಮಿತಾ ಜೋಡಿಯನ್ನು ನೋಡಿದ ಅಭಿಮಾನಿಗಳು ಕೂಡ ಇಬ್ಬರು ನಿಜ ಜೀವನದಲ್ಲಿ ಒಂದಾದರೇ ಚೆನ್ನಾಗಿರುತ್ತದೆ ಎಂದು ಆಶಿಸಿದ್ದರು. ಅವರ ಆಸೆ ಸಾಕಾರವಾಗಿದೆ.

More from Filmibeat

English summary
Television stars Jagappa and Sushmita got married.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X