ಕನ್ನಡ 'ಬಿಗ್ ಬಾಸ್' ಮನೆಯನ್ನು ನಡುಗಿಸಿದ ಪ್ರಮುಖ ವಿವಾದಗಳಿವು
ಕಿರುತೆರೆ ಲೋಕದ ದೊಡ್ಡ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿಗಳಿಸಿದೆ ಬಿಗ್ ಬಾಸ್. ಕನ್ನಡದಲ್ಲಿ ಈಗಾಗಲೇ 7 ಸೀಸನ್ ಯಶಸ್ವಿಯಾಗಿ ನಡೆದಿದೆ. ಇದೀಗ ಬಿಗ್ ಬಾಸ್ ಸೀಸನ್-8 ಪ್ರಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
Recommended Video
ಈಗಾಗಲೇ ಸೀಸನ್ 8ರ ಪ್ರೋಮೋ ರಿಲೀಸ್ ಆಗಿದ್ದು, ಕಿಚ್ಚನ ಪ್ರೋಮೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಾರಿಯ ಬಿಗ್ ಬಾಸ್ ಪ್ರಾರಂಭವಾಗುವ ಮೊದಲು ಈ ಹಿಂದಿನ ಬಿಗ್ ಬಾಸ್ ಸೀಸನ್ ಗಳ ಬಗ್ಗೆ ಒಮ್ಮೆ ಮೆಲುಕು ಹಾಕೋಣ. ಕಳೆದ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಪ್ರಮುಖ ವಿವಾದಗಳ ಮೇಲೆ ಕಣ್ಣಾಡಿಸುವುದಾದರೆ, ಮೂರು ಪ್ರಮುಖ ವಿವಾದಾತ್ಮಕ ಘಟನೆಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಬಿಗ್ ಮನೆಯಲ್ಲಿ ಗಲಾಟೆ, ಕಿರುಚಾಟ, ಸ್ಪರ್ಧಿಗಳ ನಡುವೆ ವಾಗ್ವಾದ ಎಲ್ಲಾ ಪ್ರತಿಸೀಸನ್ ನಲ್ಲಿ ಇರುವುದು ಸರ್ವೇ ಸಾಮಾನ್ಯ. ಬಿಗ್ ಮನೆಯಲ್ಲಿ ದೊಡ್ಡ ಮಟ್ಟದ ಗಲಾಟೆಗಳಾಗಿದೆ ಬಳಿಕ ವೀಕೆಂಡ್ ನಲ್ಲಿ ಕಿಚ್ಚ ಬಂದು ನ್ಯಾಯ ಹೇಳಿ ಮನೆಯ ಪರಿಸ್ಥಿತಿಯನ್ನು ತಿಳಿಗೊಳಿಸಿದ ಉದಾಹರಣೆಗಳು ಸಾಕಷ್ಟಿದೆ. ಆದರೆ ಈ ಮೂರು ಘಟನೆಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಹುಚ್ಚ ವೆಂಕಟ್ ಹಲ್ಲೆ ಪ್ರಕರಣ
ಚಿಕ್ಕ-ಪುಟ್ಟ ವಿವಾದಗಳು, ಗಲಾಟೆಗಳನ್ನು ಮೀರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಪ್ರಮುಖ ಮೂರು ವಿವಾದಗಳು ಬಿಗ್ ಮನೆಯನ್ನೇ ನಡುಗಿಸಿದೆ. ಬಿಗ್ ಬಾಸ್ ಸೀಸನ್ 3ನಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಹುಚ್ಚ ವೆಂಕಟ್, ಸಹ ಸ್ಪರ್ಧಿ ಮೇಲೆ ಹಲ್ಲೆ ಮಾಡಿ, ದೊಡ್ಡ ರದ್ದಾಂತವನ್ನೇ ಮಾಡಿದ್ದರು.

ರವಿ ಮೂರೂರು ಮೇಲೆ ಹಲ್ಲೆ
ಸಹ ಸ್ಪರ್ಧಿ ರವಿ ಮೂರೂರು ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದರು. ಕನ್ನಡ ಬಾಗ್ ಬಾಸ್ ಮನೆಯಲ್ಲೇ ನಡೆದ ಮೊದಲ ಹಲ್ಲೆ ಪ್ರಕರಣವಿದು. ಅಷ್ಟಕೂ ಇದು ಸುದೀಪ್ ಮುಂದೆಯೇ ನಡೆದ ಘಟನೆ. ಹುಚ್ಚ ವೆಂಕಟ್ ಹೊಡೆತಕ್ಕೆ ರವಿ ಮೂರೂರು ಮುಖದಲ್ಲಿ ರಕ್ತ ಸುರಿದಿತ್ತು. ಬಳಿಕ ಹುಚ್ಚ ವೆಂಕಟ್ ಅವರನ್ನು ಬೌನ್ಸರ್ ಬಂದು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದರು.

ಪ್ರಥಮ್ ಮೇಲೆ ವೆಂಕಟ್ ಹಲ್ಲೆ
ಹುಚ್ಚ ವೆಂಕಟ್ ಸೀಸನ್ 3ರಲ್ಲಿ ರಾದ್ದಾಂತ ಮಾಡಿದ್ದಲ್ಲದೆ ಸೀಸನ್ 4ರಲ್ಲೂ ಮತ್ತೆ ಹಲ್ಲೆ ಮಾಡಿ ಸುದ್ದಿಯಾಗಿದ್ದರು. ಬಿಗ್ ಬಾಸ್ ಮನೆಯೊಳಗೆ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದ ಹುಚ್ಚ ವೆಂಕಟ್ ಮನೆಯೊಳಗೆ ಹೋಗುತ್ತಿದ್ದಂತೆ ಪ್ರಥಮ್ ನೋಡಿ ಕೆರಳಿದ್ದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಹುಚ್ಚ ವೆಂಕಟ್ ಪ್ರಥಮ್ ಮೇಲೆ ಹಲ್ಲೆ ಮಾಡಿ ಎಗರಾಡಿದ್ದರು. ತಕ್ಷಣ ಬೌನ್ಸರ್ ಹುಚ್ಚ ವೆಂಕಟ್ ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋದರು.

ಸಂಯುಕ್ತ ಹೆಗ್ಡೆ ವಿವಾದ
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸಂಯುಕ್ತ ಹೆಗ್ಡೆ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ದೊಡ್ಡ ಸುದ್ದಿಯಾಗಿದ್ದರು. ಬಿಗ್ ಬಾಸ್ ಸೀಸನ್ 5ರಲ್ಲಿ ಗೆಸ್ಟ್ ಆಗಿ ಸಂಯುಕ್ತ ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಸಹ ಸ್ಪರ್ಧಿ ಸಮೀರ್ ಆಚಾರ್ಯ ಅನುಚಿತವಾಗಿ ನೆಡೆದುಕೊಂಡರು ಎಂದು ಸಂಯುಕ್ತ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಸಂಯುಕ್ತ ಸಮೀರ್ ಆಚಾರ್ಯ ಬಳಿ ಕ್ಷಮೆಯಾಚಿಸಿದ್ದರು. ಸಂಯುಕ್ತ ಅವರನ್ನು ಮನೆಯಿಂದ ಹೊರ ಕಳುಹಿಸಲಾಯಿತು.
ಈ ಮೂರು ಪ್ರಮುಖ ಘಟನೆಗಳು ಕನ್ನಡ ಬಿಗ್ ಬಾಸ್ ವಿವಾದಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಘಟನೆಗಳು ಬಿಟ್ಟರೆ ಕನ್ನಡದಲ್ಲಿ ದೊಡ್ಡ ಮಟ್ಟದ ವಿವಾದ ಮಾಡಿದ ಘಟನೆಗಳು ವಿರಳ.


Click it and Unblock the Notifications











