Bhagyalakshmi: ಸಾಧನೆಯತ್ತ ಭಾಗ್ಯ ನಡೆ; ಹೀಗೆ ಸಾಗಲಿ ಎಂದ ವೀಕ್ಷಕರು!

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಧಾರಾವಾಹಿ ನೋಡಿದ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವನದ ರಿಪ್ಲೆಕ್ಷನ್ ಎಂದೇ ಭಾವಿಸುತ್ತಾರೆ. ಗಂಡನಿಂದ ಕಷ್ಟ ಅನುಭವಿಸಿದ್ದು, ಸಂಸಾರ ನಿಭಾಯಿಸುವ ಹೊಣೆ ಹೀಗೆ ಭಾಗ್ಯಾಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನ ರಿಯಲ್ ಲೈಫ್‌ನಲ್ಲೂ ಅದೆಷ್ಟೋ ಹೆಣ್ಣು ಮಕ್ಕಳು ಎದುರಿಸಿದ್ದಾರೆ. ಭಾಗ್ಯಾ ಒಮ್ಮೆ ಗಟ್ಟಿಯಾಗಿ ಎದ್ದು ನಿಂತಿದ್ದಳು. ಆದರೆ ಮತ್ತೆ ಮಕ್ಕಳು, ಮನೆ, ಅತ್ತೆ ಮಾವನಿಗಾಗಿ ಮತ್ತೆ ಸೋತು ಹೋದಳು. ಈಗ ಮತ್ತೆ ಪುಟಿದೆದ್ದಿದ್ದಾಳೆ. ಈ ಭಾಗ್ಯಾ ವೀಕ್ಷಕರಿಗೆ ಇಷ್ಟವಾಗಿದ್ದಾಳೆ.

ತಾಂಡವ್‌ಗೆ ಶ್ರೇಷ್ಠಾ ಎಂದರೆ ಅತಿಯಾದ ಪ್ರೀತಿನೋ ಅಲ್ವೋ ಗೊತ್ತಿಲ್ಲ. ಆದರೆ ಭಾಗ್ಯಾಳನ್ನು ಕಂಡರೆ ಅತಿಯಾದ ಬೇಸರ. ಶ್ರೇಷ್ಠಾಗೆ ಸತ್ಯಾಂಶ ಗೊತ್ತಾಗ್ತಾನೇ ಇಲ್ಲ. ಹಾಗಾಗ ತನಗೆ ಬೇಕಾದದ್ದು ಸಿಗದೆ ಹೋದಾಗ ತಾಂಡವ್, ಶ್ರೇಷ್ಠಾಳನ್ನು ದೂರ ತಳ್ಳಿ ಹೋಗಿದ್ದಾನೆ. ಆದರೂ ಮೊಂಡು ಹಠ ತಾಂಡವ್‌ದು. ಜವಾಬ್ದಾರಿಯುತ ಹೆಂಡತಿ ಬಿಟ್ಟು ಶೋಕಿ ಮಾತ್ರ ಬಯಸುವ ಹೆಣ್ಣಿನ ಹಿಂದೆ ಹೋಗಿರೋ ತಾಂಡವ್ ಮುಂದೆ ಕಷ್ಟದ ಸರಮಾಲೆಯಲ್ಲಿ ಸಿಲುಕದೆ ಇರಲಾರಾ..?

Major twist in colors kannada Bhagyalakshmi serial story

ಭಾಗ್ಯಾಗೆ ಒಲಿದ ಅದೃಷ್ಟ

ಭಾಗ್ಯಾ ತನ್ನಲ್ಲಿದ್ದ ಒಡವೆಯನ್ನು ಮಾರಿ ಮನೆ ಉಳಿಸಿಕೊಳ್ಳಬೇಕೆಂದು ಹೊರಟಾಗ ಅಡ್ಡ ಬಂದು ನಿಂತವನು ತಾಂಡವ್. ಆ ಒಡವೆಗಳನ್ನು ಕಿತ್ತುಕೊಂಡು ಹೊರಟ. ದಾರಿ ಕಾಣದೆ ದೇವಿಯ ಬಳಿ ಬೇಡಿಕೊಂಡಾಗ ಭಾಗ್ಯಾಗೆ ಆ ತಾಯಿಯೇ ದಾರಿ ತೋರಿದ್ದಾಳೆ. ದೇವಸ್ಥಾನದಲ್ಲಿ ಪ್ರಸಾದ ಮಾಡುವವರು ಕೈಕೊಟ್ಟಿದ್ದು, ಆ ಕೆಲಸ ಭಾಗ್ಯಾಗೆ ಸಿಕ್ಕಿದೆ. 50 ಸಾವಿರ ಸಂಬಳ.

ಸೊಸೆ ಸಹಾಯಕ್ಕೆ ಬಂದ ಅತ್ತೆ

ಅಂತೂ ದೇವರು ದಯೆ ತೋರಿದ ಎಂಬ ನೆಮ್ಮದಿ. ತಕ್ಷಣ ಅತ್ತೆಗೆ ಕರೆ ಮಾಡಿ ತಿಳಿಸಿದಳು ಭಾಗ್ಯಾ. ಅತ್ತೆ ಕುಸುಮಾ ಕೂಡ ಸೊಸೆಯ ಸಹಾಯಕ್ಕೆಂದು ಪೂಜಾಳನ್ನು ಎಳೆದುಕೊಂಡು ಬಂದರು. ಭಾಗ್ಯಾ ಒಬ್ಬಳಿಂದಾನೇ ಅಷ್ಟು ಜನಕ್ಕೆ ಪ್ರಸಾದ ಮಾಡಲು ಕಷ್ಟ ಎಂಬುದಕ್ಕಾಗಿ ಸಹಾಯಕ್ಕೆ ಧಾವಿಸಿದಳು. ಅತ್ತೆ ಸೊಸೆ ಸೇರಿ‌ ಮಾಡುವ ಪ್ರಸಾದ ತಿಂದರೆ ನಿಜಕ್ಕೂ ಮತ್ತೆ ಮತ್ತೆ ಬೇಕೆನ್ನುತ್ತಾರೆ ಭಕ್ತರು.

ಅತ್ತೆ ಎಂದರೆ ಹೀಗಿರೋದಕ್ಕೆ ಸಾಧ್ಯನಾ..?

ಕುಸುಮಾ ಯೋಚನೆಗೂ ನಿಲುಕದ ಅತ್ತೆ

ಕುಸುಮಾರನ್ನ ನೋಡ್ತಾ ಇದ್ದರೆ ಎಂಥ ಸೊಸೆಗೆ ಆದರೂ ಹೊಟ್ಟೆಕಿಚ್ಚು ಆಗದೇ ಇರುವುದಿಲ್ಲ. ಆದರೆ ನಿಜ ಜೀವನದಲ್ಲಿ ಇಷ್ಟೊಂದು ಒಳ್ಳೆಯ ಅತ್ತೆ ಸಿಗುವುದಕ್ಕೆ ಸಾಧ್ಯವಿದೆಯಾ ಎಂಬುದೇ ಎಲ್ಲರ ಅನುಮಾನ. ಸೊಸೆಯ ಪರವಾಗಿ ನಿಲ್ಲಬಹುದು. ಆದರೆ ಏನು ಇಲ್ಲದೆಯೂ ಬೀದಿಗೆ ಬರುವ ಪರಿಸ್ಥಿತಿ ಇದ್ದರು ಸೊಸೆಯೇ ನನ್ನ ಪಾಲಿಗೆ ಎಲ್ಲಾ ಎಂದು ಅವಳ ಪರ ನಿಲ್ಲೋದು ಸುಲಭದ ಮಾತಲ್ಲ. ಕುಸುಮಾ ಅದನ್ನ ಮಾಡಿದ್ದಾರೆ.

ಭಾಗ್ಯಾ ಮತ್ತೆ ಸೋಲಬಾರದು

ಭಾಗ್ಯಾಗೆ ಈ ಮೊದಲೇ ಗಟ್ಟಿ ಧೈರ್ಯ ಕೊಟ್ಟು, ಡಿವೋರ್ಸ್ ಕೊಡಿಸಿ, ನಾನು ಭಾಗ್ಯಾ ಎಂಬ ಅಭಿಯಾನ ಶುರು ಮಾಡಿದ್ದರು. ಆದರೆ ಅದ್ಯಾಕೋ ಸರಿಯಾಗಿ ಟರ್ನ್ ತೆಗೆದುಕೊಳ್ಳಲಿಲ್ಲ. ಈಗ ಮತ್ತೊಮ್ಮೆ ಭಾಗ್ಯಾ ಬಂದ ಕಷ್ಟಗಳನ್ನ ಎದುರಿಸುವ ಶಕ್ತಿ ಪಡೆದಿದ್ದಾಳೆ. ಇನ್ಮೇಲೆ ಭಾಗ್ಯಾ ಇಷ್ಟೇ ಧೈರ್ಯವಂತ ಹೆಣ್ಣಾಗಿ ಕಾಣಿಸಲಿ, ಸಕ್ಸಸ್ ಸಿಗುತ್ತಲೇ ಸಾಗಲಿ, ಮತ್ತೆ ಶ್ರೇಷ್ಠಾ ಹಾಗೂ ತಾಂಡವ್ ಮುಂದೆ ಬೀಳುವುದು ಬೇಡ ಎಂದೇ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣಾ ಇನ್ಮುಂದೆ ನಾನು ಭಾಗ್ಯಾ ಅಭಿಯಾನಕ್ಕೂ ಒಂದು ಕಳೆ ಬರುವ ಮುನ್ಸೂಚನೆ ಇಂದಿನಿಂದ ಸಿಕ್ಕಿದೆ.

More from Filmibeat

English summary
Bhagyalakshmi serial; Here is the details about Happy days are coming back to Bhagya life;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X