»   » ಬಿಗ್ ಬಾಸ್ ಮನೆಗೆ 'ಮಾಲಾಶ್ರೀ' ಎಂಟ್ರಿ: ಅತಿಥಿನಾ? ಸ್ವರ್ಧಿನಾ?

ಬಿಗ್ ಬಾಸ್ ಮನೆಗೆ 'ಮಾಲಾಶ್ರೀ' ಎಂಟ್ರಿ: ಅತಿಥಿನಾ? ಸ್ವರ್ಧಿನಾ?

Written By:
Subscribe to Filmibeat Kannada

''ಬಿಗ್ ಬಾಸ್ ಮನೆಯಲ್ಲಿ ಇನ್ಮುಂದೆ ಯಾರ ಕೈ ಮುರಿಯುತ್ತೋ ಅಥವಾ ಯಾರ ಕಾಲು ಮುರಿಯುತ್ತೋ ಗೊತ್ತಿಲ್ಲ''. ಹೀಗಂತಾ, ಬಿಗ್ ಬಾಸ್ ಮನೆಗೆ ಆಕ್ಷನ್ ಕ್ವೀನ್ ಮಾಲಾಶ್ರಿ ಎಂಟ್ರಿ ಕೊಟ್ಟಾಗ, ಜನರು ಅಂದುಕೊಂಡಿರುವುದಂತೂ ಸುಳ್ಳಾಲ್ಲ.

ಹೌದು, 'ಸೂಪರ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದಲ್ಲಿ, ಯಾರಾದರೂ ಸೆಲೆಬ್ರೀಟಿಗಳು ಬಿಗ್ ಬಾಸ್ ವೇದಿಕೆಗೆ ಬರಬೇಕಿತ್ತು. ಆದ್ರೆ, ಈ ವಾರದ ವಿಶೇಷ ಕಾರ್ಯಕ್ರಮದಲ್ಲಿ ದೊಡ್ಡ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್, 'ಕನಸಿನ ರಾಣಿ'ಯನ್ನ ಬಿಗ್ ಬಾಸ್ ವೇದಿಕೆಯ ಬದಲು ಬಿಗ್ ಬಾಸ್ ಮನೆಗೆ ಕಳುಹಿಸಿದ್ದರು.

ಲಗ್ಗೆಜ್ ಸಮೇತ ಮನೆ ಪ್ರವೇಶ ಮಾಡಿದ ಮಾಲಾಶ್ರೀಯನ್ನ ನೋಡಿ, ಕೇವಲ ಜನರು ಮಾತ್ರ ಅಲ್ಲ ಸ್ವರ್ಧಿಗಳು ಕೂಡ ಶಾಕ್ ಆದ್ರು. ಮಾಲಾಶ್ರೀ ಸ್ವರ್ಧಿಯಾಗಿ ಬಂದಿದ್ದಾರಾ ಅಥವಾ ಅತಿಥಿಯಾಗಿ ಬಂದಿದ್ದಾರಾ ಅಂತ ಪ್ರತಿಯೊಬ್ಬರು ತಲೆಕೆಡಿಸಿಕೊಂಡರು.[ಬಿಗ್ ಬಾಸ್ ಮನೆಯಲ್ಲಿ ದಾಖಲೆ: ಪ್ರಥಮ್ ಫಸ್ಟ್, ಸಂಜನಾ ನೆಕ್ಸ್ಟ್]

ಅಷ್ಟಕ್ಕೂ, ಮಾಲಾಶ್ರೀ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಯಾಕೆ ಅಂತ ಮುಂದೆ ಓದಿ....

ಬಿಗ್ ಬಾಸ್ ಮನೆಗೆ ಬಂದ 'ಚಾಮುಂಡಿ'

'ಸೂಪರ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಆಕ್ಷನ್ ಕ್ವೀನ್ ಮಾಲಾಶ್ರೀ, ಬಟ್ಟೆ ಬರೆ ಎಲ್ಲ ಪ್ಯಾಕ್ ಮಾಡ್ಕೊಂಡು, ಬಿಗ್ ಮನೆಗೆ ಪವರ್ ಪುಲ್ ಎಂಟ್ರಿ ಕೊಟ್ಟರು. 'ದುರ್ಗಿ' ಚಿತ್ರದ ಹಾಡಿನ ಮೂಲಕ ಮಾಲಾಶ್ರೀಯವರನ್ನ ಬಿಗ್ ಬಾಸ್ ಅದ್ದೂರಿಯಾಗಿ ಸ್ವಾಗತಿಸಿದರು.

ಕೆಲವರಿಗೆ ಜೋಶ್, ಕೆಲವರಿಗೆ ಶಾಕ್

ಮಾಲಾಶ್ರೀ ಎಂಟ್ರಿಯಿಂದ, ಕೆಲವರಿಗೆ ಜೋಶ್ ಹೆಚ್ಚಾದ್ರೆ, ಮತ್ತೆ ಕೆಲವರಿಗೆ ಭಯ ಶುರುವಾಗಿತ್ತು. ಹೇಗಾಪ್ಪಾ ಮಾಲಾಶ್ರೀ ಮೇಡಂನಾ ನಿಭಾಯಿಸುವುದು ಎಂಬ ಚಿಂತೆ ಮನೆಯ ಸದಸ್ಯರನ್ನ ಕಾಡಿತ್ತು.

ಮಸ್ತ್ ಮನರಂಜನೆ

ಮಾಲಾಶ್ರೀ ಎಂಟ್ರಿಯಿಂದ ಮನೆಯಲ್ಲಿ ಮನರಂಜನೆ ಹೆಚ್ಚಾಗಿತ್ತು. ಕನಸಿನ ರಾಣಿಯ ಎವರ್ ಗ್ರೀನ್ ಸಾಂಗ್ 'ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು' ಹಾಡಿಗೆ ಭುವನ್ ಗೌಡ, ಸಂಜನಾ, ನಿರಂಜನ್ ಸೇರಿದಂತೆ ಹಲವರು ಡ್ಯಾನ್ಸ್ ಮಾಡಿದರು.

ಮಾಲಾಶ್ರೀ ಕೊಟ್ಟ ಹೆಸರು

ಸುದೀಪ್ ಅವರ ಸೂಚನೆ ಮೆರೆಗೆ ಮನೆಯ ಸದಸ್ಯರಿಗೆ ತಮ್ಮ ಚಿತ್ರಗಳ ಹೆಸರನ್ನ ಹೋಲುವಂತೆ ಹೆಸರು ಕೊಡಬೇಕಿತ್ತು. ಹೀಗೆ, ಮಾಲಾಶ್ರೀ ಕೊಟ್ಟ ಟೈಟಲ್ ಇಲ್ಲಿದೆ ನೋಡಿ. ‘ರೆಡಿಮೆಡ್ ಗಂಡ'- ಭುವನ್, ‘ಲೇಡಿ ಪೊಲೀಸ್- ಮಾಳವಿಕಾ, ‘ಹಠಮಾರಿ ಹೆಣ್ಣು' -ಸಂಜನಾ, ಕಿಲಾಡಿಗಂಡು-ನಿರಂಜನ್, ‘ಪೊಲೀಸನ ಹೆಂಡ್ತಿ'-ಕಾವ್ಯ, ‘ಗಡಿಬಿಡಿ ಅಳಿಯ'- ಮೋಹನ್, ‘ಮನಮೆಚ್ಚಿದ ಸೊಸೆ'- ರೇಖಾ, ‘ಲೇಡಿ ಕಮೀಷನರ್' -ಶೀತಲ್, ‘ಮುತ್ತಿನಂಥ ಹೆಂಡ್ತಿ' -ಕಾರುಣ್ಯ, ‘ರಾಮಾಚಾರಿ' -ನಿರಂಜನ್, 'ದುರ್ಗಿ'-ಕಿರಿಕ್ ಕೀರ್ತಿ.

ಸೈಲಾಂಟ್ ಆದ ಪ್ರಥಮ್

ಬಿಗ್ ಬಾಸ್ ಮನೆಯಲ್ಲಿ ಸದಾ ಸೌಂಡ್ ಮಾಡುವ ಪ್ರಥಮ್, ಮಾಲಾಶ್ರೀ ಆಗಮನದಿಂದ ಫುಲ್ ಸೈಲಾಂಟ್ ಆಗಿದ್ರು. ಮಾತನಾಡುವುದಕ್ಕೂ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಪ್ರಥಮ್ ಆಗಿತ್ತು. ಆದರೂ, ಪ್ರಥಮ್ ಮಾಡಿದ ಹುಡುಗಾಟವನ್ನ ನೋಡಿದ ಮಾಲಾಶ್ರೀ, ಎರಡು ಮೂರು ಬಾರಿ ಪ್ರಥಮ್ ಗೆ ವಾರ್ನ್ ಮಾಡಿದ ಸನ್ನಿವೇಶ ಕೂಡ ನಡೆಯಿತು.

ಸ್ವರ್ಧಿನಾ? ಅತಿಥಿನಾ?

ದಿನದ ಕೊನೆಯವರೆಗೂ ಮಾಲಾಶ್ರೀಯವರು ಅತಿಥಿನಾ ಅಥವಾ ಸ್ವರ್ಧಿನಾ ಅಂತ ಯಾರಿಗೂ ಗೊತ್ತಾಗಲಿಲ್ಲ. ಕಿಚ್ಚ ಸುದೀಪ್ ಕೂಡ ಅವರು ಯಾಕೆ ಬಂದ್ದೀದ್ದಾರೆ ಅಂತ ಕನ್ ಫರ್ಮ್ ಮಾಡಲೇ ಇಲ್ಲ. ಇದು ಸದಸ್ಯರಿಗೆ ಮತ್ತಷ್ಟು ತಲೆ ಬಿಸಿ ಮಾಡಿತ್ತು.

ಹೀಗೆ ಬಂದು ಹಾಗೆ ಹೋದ್ರು

ಸ್ಟೋರ್ ರೂಮ್ ನಲ್ಲಿ ಏನೋ ಇದೆ ಮಾಲಾಶ್ರೀಯವರು ತಗೊಂಡು ಬನ್ನಿ ಅಂತ ಸುದೀಪ್ ಹೇಳಿದಾಗ, ಎದ್ದು ಹೋದ ಮಾಲಾಶ್ರಿಯವರು ವಾಪಸ್ ಬರಲೆ ಇಲ್ಲ.

ಈ ವಾರದ ಅತಿಥಿ

ಆಗಲೇ ಗೊತ್ತಾಗಿದ್ದು, 'ಸೂಪರ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದ ಅತಿಥಿಯಾಗಿ ಮಾಲಾಶ್ರೀಯವರು ಬಂದಿದ್ದು ಅಂತ.

English summary
Kannada Actress Malashree Enter's to Bigg Boss House For One Day special in 'Super Sunday With Sudeep' special Episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada