ಪೊಲೀಸ್ ಪಾತ್ರಕ್ಕೆ ಮಾಲಾಶ್ರೀಯೇ ಸ್ಫೂರ್ತಿ; ಆಕ್ಷನ್ ಕ್ವೀನ್ ಆಗ್ತಾರಾ ತನಿಷಾ ಕುಪ್ಪಂಡ?
ಬಿಗ್ ಬಾಸ್ ಸೀಸನ್ 10 ಖ್ಯಾತಿಯ ನಟಿ ತನಿಷಾ ಕುಪ್ಪಂಡ ಈಗಂತೂ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ ಬಿಗ್ ಬಾಸ್ ಬೆಡಗಿ. ಹೌದು, ತನಿಷಾ ಕುಪ್ಪಂಡ ಮಾಲೀಕತ್ವದ ಕುಪ್ಪಂಡಾಸ್ ಜ್ಯುವೆಲ್ಲರ್ಸ್ ಕೂಡಾ ಇದೀಗ ಶುಭಾರಂಭಗೊಂಡಿದೆ.
ಇನ್ನು ಕೆರಿಯರ್‌ನತ್ತ ಮುಖ ಮಾಡುವುದಾದರೆ ಇದೀಗ ಅವರಿಗೆ ಹೆಚ್ಚಿನ ಸಿನಿಮಾಗಳಿಂದ ಅವಕಾಶಗಳು ಬರುತ್ತಿದೆ. ಜೊತೆಗೆ ಅವರ ಮುಂದಿನ ಪ್ರಾಜೆಕ್ಟ್ ಆದ 'ಶೇರ್' ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ನಿರ್ದೇಶಕ ಪ್ರಸಿದ್ಧ ವರ ನಿರ್ದೇಶನದಲ್ಲಿ ನಿರ್ಮಾಣ ಆಗುತ್ತಿರುವ ' ಶೇರ್' ಚಿತ್ರಕ್ಕೆ ನಟ ಕಿರಣ್ ರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ತನಿಷಾ ಕುಪ್ಪಂಡ ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ರೋಲ್‌ಗೆ ಬೇಕಾದಂತಹ ತಯಾರಿಗಳನ್ನು ಈಗಾಗಲೇ ಶುರು ಮಾಡಿದ್ದಾರಂತೆ.
"ಈ ಪಾತ್ರವನ್ನು ಕೈಗೆತ್ತಿಕೊಂಡ ಮೇಲೆ ನನಗೆ ಬಹಳಷ್ಟು ವಿಚಾರಗಳು ಸ್ಪಷ್ಟವಾಗಿದೆ. ಒಬ್ಬ ಲೇಡಿ ಪೊಲೀಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುವುದು ಖಂಡಿತ ಸುಲಭದ ಮಾತಲ್ಲ. ಹಗಲು ರಾತ್ರಿ ಎನ್ನದೆ ಈ ಸಮಾಜದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವುದು ಗಲಾಟೆಗಳನ್ನು ತಡೆಹಿಡಿಯುವುದು, ಹದ್ದು ಬಸ್ತಿನಲ್ಲಿ ಇಡುವುದು ಶಿಸ್ತು ಕಾಪಾಡುವುದು ಇತ್ಯಾದಿ ಬಹಳ ಚಾಲೆಂಜಿಂಗ್ ಕೆಲಸ ಇದು. ಇಂಥ ಎಲ್ಲಾ ವಿಚಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಎಲ್ಲಾ ಮಹಿಳಾ ಪೊಲೀಸ್ ಆಫೀಸರ್ಗಳಿಗೂ ನನ್ನದೊಂದು ಸಲಾಂ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದರು ನಟಿ ತನಿಷಾ ಕುಪ್ಪಂಡ.

ಇನ್ನು ಈ ಪಾತ್ರಕ್ಕೆ ನಟಿ ತನಿಷಾ ಕುಪ್ಪಂಡ ಅವರು ಹಿರಿಯ ನಟಿ ಮಾಲಾಶ್ರೀ ಅವರನ್ನು ತಮಗೆ ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರಂತೆ. "ಮಾಲಾಶ್ರೀ ಅವರನ್ನು ಲೇಡಿ ಪೊಲೀಸ್ ರೋಲ್ ನಲ್ಲಿ ನಾನು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಹಾಗಾಗಿವನನಗೆ ಅವರೇ ಸ್ಫೂರ್ತಿ. ಅವರಂತೆ ನನ್ನ ಹಾವಭಾವವನ್ನು ರೂಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ " ಎಂದು ಆಕೆ ಸಂದರ್ಶನದಲ್ಲಿ ಹಂಚಿಕೊಂಡಿದ್ದರು.
ಇನ್ನು ಸೀರಿಯಲ್ ವಿಚಾರ ಬಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ' ಮದುವೆ ಧಾರಾವಾಹಿಯಲ್ಲಿ ನಾಯಕ ರಾಜೀವನ ಅತ್ತಿಗೆ ಸೌಂದರ್ಯ ಆಗಿ ಈಕೆ ನಟಿಸಿದ್ದರು. ತದ ನಂತರ ಕಿರುತೆರೆಯಿಂದ ದೂರವಿದ್ದ ಈಕೆ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಬರೋಬ್ಬರಿ 102 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ತನಿಷಾ ಉಳಿದ ಸ್ಪರ್ಶಿಗಳಿಗೆ ಟಫ್ ಕಾಂಪಿಟೀಶನ್ ಕೂಡಾ ನೀಡಿದ್ದರು. ಸದ್ಯ ಕಿರುತೆರೆಯಿಂದ ದೂರವಿರುವ ಈಕೆ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











