ಮಲಯಾಳಂ ಬಿಗ್‌ಬಾಸ್‌ಗೆ ತಯಾರಿ: ಸ್ಪರ್ಧಿಗಳ ಬಗ್ಗೆ ಇದೆ ಗೊಂದಲ

ತೆಲುಗಿನ ಬಿಗ್‌ಬಾಸ್ ಈಗಷ್ಟೆ ಮುಗಿದಿದೆ. ತಮಿಳು ಹಾಗೂ ಹಿಂದಿ ಬಿಗ್‌ಬಾಸ್‌ಗಳು ಮುಗಿಯುವ ಹಂತದಲ್ಲಿದೆ. ಕನ್ನಡ ಬಿಗ್‌ಬಾಸ್‌ಗೆ ತಯಾರಿ ಆರಂಭವಾಗಿದೆ. ಈ ನಡುವೆ ಮಲಯಾಳಂ ನಲ್ಲೂ ಬಿಗ್‌ಬಾಸ್ ಗೆ ಸಿದ್ಧತೆ ನಡೆಯುತ್ತಿದೆ.

ಕೊರೊನಾ ಲಾಕ್‌ಡೌನ್ ಆದಾಗ ಮಲಯಾಳಂ ಬಿಗ್‌ಬಾಸ್ ಆರಂಭವಾಗಿ ಕೆಲವು ವಾರಗಳಾಗಿದ್ದವು. ಆದರೆ ಕೊರೊನಾ ಕಾರಣದಿಂದಾಗಿ ಬಿಗ್‌ಬಾಸ್ ಅನ್ನು ಮೊಟಕುಗೊಳಿಸಿ, ಸ್ಪರ್ಧಿಗಳನ್ನು ಹೊರಕ್ಕೆ ಬಿಡಲಾಗಿತ್ತು. ಈಗ ಮತ್ತೆ ಬಿಗ್‌ಬಾಸ್ ಶೋ ಪ್ರಾರಂಭಿಸಲು ಕ್ಕೆ ಸಿದ್ಧತೆ ನಡೆಯುತ್ತಿದೆ.

ಮಲಯಾಳಂ ಬಿಗ್‌ಬಾಸ್ 3 ನ ಪೋಸ್ಟರ್ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಜನವರಿ ಎರಡನೇ ವಾರದಲ್ಲಿ ಪ್ರೊಮೊ ಸಹ ಹೊರಬೀಳಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಶೋ ಪ್ರಾರಂಭವಾಗಲಿದೆ. ಈ ಬಾರಿಯೂ ಮೋಹನ್‌ಲಾಲ್ ಅವರೇ ಬಿಗ್‌ಬಾಸ್ ನಿರೂಪಕರಾಗಲಿದ್ದಾರೆ. ಆದರೆ ಸ್ಪರ್ಧಿಗಳು ಯಾರಾಗಲಿದ್ದಾರೆ ಎಂಬ ಗೊಂದಲ ಏರ್ಪಟ್ಟಿದೆ.

ಕೋವಿಡ್ ಕಾರಣಕ್ಕೆ ಅರ್ಧಕ್ಕೆ ರದ್ದಾಗಿದ್ದ ಬಿಗ್‌ಬಾಸ್

ಕೋವಿಡ್ ಕಾರಣಕ್ಕೆ ಅರ್ಧಕ್ಕೆ ರದ್ದಾಗಿದ್ದ ಬಿಗ್‌ಬಾಸ್

ಕೋವಿಡ್ ಕಾರಣಕ್ಕೆ ಬಿಗ್‌ಬಾಸ್ ಶೋ ಅನ್ನು ಮೊಟಕುಗೊಳಿಸಿದಾಗ ಬಿಗ್‌ಬಾಸ್ ಮನೆಯಲ್ಲಿ ಇನ್ನೂ ಹತ್ತು ಮಂದಿ ಸ್ಪರ್ಧಾಳುಗಳು ಇದ್ದರು. ಗ್ರ್ಯಾಂಡ್‌ ಫಿನಾಲೆಗೆ ನಾಲ್ಕು ವಾರಗಳಷ್ಟೆ ಇರುವಾಗ ಬಿಗ್‌ಬಾಸ್ ಅನ್ನು ರದ್ದು ಮಾಡಿ ಎಲ್ಲರನ್ನೂ ಮರಳಿ ಮನೆಗೆ ಕಳಿಸಲಾಗಿತ್ತು.

ಬಿಗ್‌ಬಾಸ್ 3 ಸ್ಪರ್ಧಿಗಳು ಯಾರಾಗಲಿದ್ದಾರೆ?

ಬಿಗ್‌ಬಾಸ್ 3 ಸ್ಪರ್ಧಿಗಳು ಯಾರಾಗಲಿದ್ದಾರೆ?

ಈಗ ಬಿಗ್‌ಬಾಸ್ 3 ಆರಂಭವಾಗುತ್ತಿದ್ದು, ಬಿಗ್‌ಬಾಸ್ 2 ರದ್ದಾದಾಗ ಉಳಿದಿದ್ದ ಸ್ಪರ್ಧಿಗಳನ್ನೇ ಮರಳಿ ಮನೆಗೆ ಕಳಿಸುತ್ತಾರೆಯೇ ಅಥವಾ ಹೊಸ ಸ್ಪರ್ಧಿಗಳ ಆಯ್ಕೆ ಮಾಡುತ್ತಾರೆಯೇ ಎಂಬ ಬಗ್ಗೆ ಅನುಮಾನ ಎದ್ದಿದೆ. ಕಳೆದ ಬಾರಿ ಮನೆಯಲ್ಲಿದ್ದ ಸ್ಪರ್ಧಿಗಳನ್ನೇ ವಾಪಸ್ ಕರೆತನ್ನಿ ಎನ್ನುವ ಒತ್ತಡ ಪ್ರೇಕ್ಷಕರಿಂದ ಇದೆ.

ಚೆನ್ನೈನ ಫಿಲಂ ಸಿಟಿಯಲ್ಲಿ ಸೆಟ್‌

ಚೆನ್ನೈನ ಫಿಲಂ ಸಿಟಿಯಲ್ಲಿ ಸೆಟ್‌

ಚೆನ್ನೈನ ಇವಿಪಿ ಫಿಲಂ ಸಿಟಿಯಲ್ಲಿ ಮಲಯಾಳಂ ಬಿಗ್‌ಬಾಸ್ 2 ನ ಸೆಟ್ ಹಾಕಲಾಗಿತ್ತು. ಈ ಬಾರಿಯೂ ಅಲ್ಲೇ ಸೆಟ್ ಹಾಕಲಿದ್ದಾರೆ. ಕಳೆದ ಬಾರಿ ಆರ್ಯಾ, ಪಶನಂ ಶಾಜಿ, ಅಲಾಸಂದ್ರ ಜಾನ್‌ಸನ್, ಸುಜೊ ಮ್ಯಾಥಿವ್, ಅಮೃತಾ ಸುರೇಶ್, ಅಭಿರಾಮಿ ಸುರೇಶ್, ಕೃಷ್ಣಜೀವ್ ಅಲಿಯಾಸ್ ಫಕ್ರು, ದಯಾ ಅಶ್ವಥ್ಯಾ, ಆರ್‌ಜೆ ರಘು ಮತ್ತು ಅನಿಲಾ ಪಡಿಕಲ್ ಅವರುಗಳು ಬಿಗ್‌ಬಾಸ್ ಮನೆಯಲ್ಲಿದ್ದರು.

ಶೀಘ್ರದಲ್ಲೇ ಆರಂಭವಾಗಲಿದೆ ಕನ್ನಡ ಬಿಗ್‌ಬಾಸ್

ಶೀಘ್ರದಲ್ಲೇ ಆರಂಭವಾಗಲಿದೆ ಕನ್ನಡ ಬಿಗ್‌ಬಾಸ್

ಇನ್ನು ಕನ್ನಡದ ಬಿಗ್‌ಬಾಸ್ ಸಹ ಶೀಘ್ರದಲ್ಲೇ ಶುರುವಾಗಲಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಗೌಪ್ಯವಾಗಿ ಪ್ರಾರಂಭವಾಗಿದೆ. ಕೆಲವೇ ದಿನಗಳಲ್ಲಿ ಕನ್ನಡ ಬಿಗ್‌ಬಾಸ್ 8 ರ ಪ್ರೊಮೊ ಬಿಡುಗಡೆ ಆಗಲಿದ್ದು, ರಿಯಾಲಿಟಿ ಶೋ ಜನವರಿ ಕೊನೆಯ ವಾರದಿಂದ ಪ್ರಸಾರವಾಗಲಿದೆ.

More from Filmibeat

English summary
Malayalam Bigg Boss 3 will go air by February first week. Poster already released. Malayalam Bigg Boss 2 canceled before Finale due to COVID 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X