For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿ ಮಲಯಾಳಂ ಬಿಗ್‌ಬಾಸ್‌: ಆರು ಮಂದಿಗೆ ಕೊರೊನಾ ಪಾಸಿಟಿವ್

  |

  ಕೊರೊನಾ ಕಾರಣದಿಂದಾಗಿ ಕನ್ನಡ ಬಿಗ್‌ಬಾಸ್ ಸೀಸನ್ ಎಂಟು ಅರ್ಧಕ್ಕೆ ಮೊಟಕುಗೊಂಡಿದೆ. ಇದೀಗ ಮಲಯಾಳಂ ಬಿಗ್‌ಬಾಸ್‌ಗೆ ಮೇಲೆಯೂ ಕೊರೊನಾ ಕರಿನೆರಳು ಬಿದ್ದಿದೆ.

  ಮಲಯಾಳಂ ಬಿಗ್‌ಬಾಸ್ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಬಿಗ್‌ಬಾಸ್ ಶೋನ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುತ್ತಿರುವ ಆರು ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಶೋ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಉಲ್ಬಣಿಸಿದೆ.

  ಕಳೆದ ವರ್ಷ ಪ್ರಸಾರವಾಗಿದ್ದ ಮಲಯಾಳಂ ಬಿಗ್‌ಬಾಸ್ ಸೀಸನ್ 2 ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿತ್ತು. ಬಿಗ್‌ ಬಾಸ್ ಸೀಸನ್ 3 ಆರಂಭವಾದಾಗ 'ಈ ಬಾರಿ ಬಿಗ್‌ಬಾಸ್ ನಿಲ್ಲುವುದಿಲ್ಲ, ನಾವು ಸೂಕ್ತ ಮುನ್ನೆಚ್ಚರಿಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ' ಎಂದು ಶೋನ ನಿರೂಪಕ ಮೋಹನ್‌ಲಾಲ್ ಹೇಳಿದ್ದರು. ಆದರೆ ಈಗ ಆರು ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವುದಾಗಿ ವರದಿ ಆಗಿದ್ದು, ಶೋ ನಿಲ್ಲುವ ಸಾಧ್ಯತೆ ದಟ್ಟವಾಗಿದೆ.

  ಶೋನ ಸ್ಪರ್ಧಿಗಳು ಮತ್ತು ತಾಂತ್ರಿಕ ತಂಡದವರು ಪ್ರತಿ ವಾರ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂಬ ನಿಯಮವಿತ್ತು ಅಂತೆಯೇ ಈ ವಾರ ಪರೀಕ್ಷೆ ಮಾಡಿದಾಗ ಆರು ಮಂದಿಗೆ ಪಾಸಿಟಿವ್ ಬಂದಿದೆ. ಆದರೆ ಬಿಗ್‌ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳ್ಯಾರಿಗೂ ಕೊರೊನಾ ಪಾಸಿಟಿವ್ ಆಗಿಲ್ಲ.

  ಮಲಯಾಳಂ ಬಿಗ್‌ಬಾಸ್ 3 ಆರಂಭವಾದಾಗ 100 ದಿನಗಳ ಶೋ ಇದಾಗಿರಲಿದೆ ಎನ್ನಲಾಗಿತ್ತು. ಕೆಲವು ದಿನಗಳ ಹಿಂದಷ್ಟೆ ಶೋ ಅನ್ನು ಎರಡು ವಾರ ವಿಸ್ತರಿಸಲಾಗಿತ್ತು. ಆದರೆ ಈಗ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಶೋ ನಿಂತುಹೋಗಬಹುದು.

  ಮಲಯಾಳಂ ಬಿಗ್‌ಬಾಸ್ ನ ಚಿತ್ರೀಕರಣವನ್ನು ಚೆನ್ನೈನ ಇವಿಪಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಬಿಗ್‌ಬಾಸ್‌ ಶೋನಿಂದ ಈವರೆಗೆ ಹತ್ತು ಮಂದಿ ಸ್ಪರ್ಧಿಗಳು ಹೊರಗೆ ಬಂದಿದ್ದು ಎಲ್ಲರೂ ಆರಾಮವಾಗಿದ್ದಾರೆ. ಈಗ ಪಾಸಿಟಿವ್ ಆಗಿರುವ ತಾಂತ್ರಿಕ ತಂಡದ ಸಿಬ್ಬಂದಿ ಸ್ಪರ್ಧಿಗಳೊಂದಿಗೆ ನೇರ ಸಂಪರ್ಕದಲ್ಲಿರಲಿಲ್ಲ ಅಲ್ಲದೆ ಆ ಆರು ಮಂದಿ ಐಸೋಲೇಷನ್ ಆಗಿದ್ದಾರೆ. ಇದೀಗ ಸೆಟ್‌ನಲ್ಲಿ ಕೆಲವರಿಗೆ ಪಾಸಿಟಿವ್ ಬಂದಿರುವ ಕಾರಣ ಸ್ಪರ್ಧಿಗಳಿಗೆ ತುರ್ತಾಗಿ ಮತ್ತೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ಅದರ ವರದಿ ಆಧಾರದ ಮೇಲೆ ಶೋನ ರದ್ದತಿ ಅಥವಾ ಮುಂದುವರಿಕೆ ನಿರ್ಧಾರವಾಗಲಿದೆ.

  English summary
  Malayalam Bigg Boss season 3 technical crew tested positive. Show may cancel its airing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X