ಮಲಯಾಳಂ ಖ್ಯಾತ ಕಿರುತೆರೆ ನಟ ಅನುಮಾನಾಸ್ಪದ ಸಾವು

By ಫಿಲ್ಮಿಬೀಟ್ ಡೆಸ್ಕ್

ಮಲಯಾಳಂ ಸಿನಿಮಾರಂಗದ ಖ್ಯಾತ ಕಿರುತೆರೆ ನಟ ರಮೇಶ್ ವಲಿಯಾಸಲ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ರಮೇಶ್ ವಲಿಯಾಸಲ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದೆ. ಆದರೆ ಇದು ಆತ್ಮಹತ್ಯೆ ಅಲ್ಲ ಎಂದು ಅವರ ಆಪ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಮೇಶ್ ವಲಿಯಸಾಲ ಮಲಯಾಳಂ ಟಿವಿ ಉದ್ಯಮದ ಬಹಳ ಜನಪ್ರಿಯ ಹಾಗೂ ಬ್ಯುಸಿ ನಟ. ಎರಡು ದಿನಗಳ ಹಿಂದಷ್ಟೆ ಚಿತ್ರೀಕರಣದಿಂದ ಮನೆಗೆ ವಾಪಸ್ಸಾಗಿದ್ದ ರಮೇಶ್ ಆರಾಮವಾಗಿಯೇ ಇದ್ದರು. ಆದರೆ ಇಂದು ಬೆಳಿಗ್ಗೆ ಮನೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

Malayalam Famous TV Actor Ramesh Valiyasala Passed Away

ಧಾರಾವಾಹಿಗಳಲ್ಲಿ ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿಯೂ ರಮೇಶ್ ನಟಿಸಿದ್ದಾರೆ. ಬಹಳ ಸಣ್ಣ ವಯಸ್ಸಿನಿಂದಲೇ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ರಮೇಶ್ ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಪ್ರಮುಖ ನಟರಾಗಿ ಗುರುತಿಸಿಕೊಂಡರು. ರಮೇಶ್ ಕೊನೆಯದಾಗಿ 'ವರಲ್' ಸಿನಿಮಾದಲ್ಲಿ ನಟಿಸಿದ್ದರು.

ಎರಡು ದಿನಗಳ ಹಿಂದಷ್ಟೆ 'ಪೌರ್ಣಮಿ ತಿಂಕಲ್' ಹೆಸರಿನ ಮಲಯಾಳಂ ಧಾರಾವಾಹಿಯಲ್ಲಿ ನಟಿಸಿ ಮನೆಗೆ ವಾಪಸ್ಸಾಗಿದ್ದರು. ರಮೇಶ್ ನಿಧನಕ್ಕೆ ಆಪ್ತರು, ಧಾರಾವಾಹಿ ಉದ್ಯಮ ಹಾಗೂ ಸಿನಿಮಾ ಉದ್ಯಮದವರು ತೀವ್ರ ಸಂತಾಪಗಳನ್ನು ಅರ್ಪಿಸಿದ್ದಾರೆ. ರಮೇಶ್ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಹ ಹೊಂದಿದ್ದರು.

ರಮೇಶ್ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದೂರಿನಲ್ಲಿ ಅಸಹಜ ಸಾವು ಎಂದು ನಮೂದಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ರಮೇಶ್ ಸಾವಿನ ಬಗ್ಗೆ ಕೇರಳದ ಪ್ರಮುಖ ಸಿನಿ ತಾರೆಗಳು, ಟಿವಿ ತಾರೆಯರು, ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

More from Filmibeat

English summary
Malayalam famous Tv and movie actor Ramesh Valiyasala found dead in his house. His body was found in hanging state.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X