ಯೂಟ್ಯೂಬಲ್ಲಿ ನೋಡಿ ಆನಂದಿಸಿ 'ಮಾಲ್ಗುಡಿ ಡೇಸ್'
ಎಂಬತ್ತರ ದಶಕದಲ್ಲಿ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದ ಧಾರಾವಾಹಿ 'ಮಾಲ್ಗುಡಿ ಡೇಸ್'. ಈ ಧಾರಾವಾಹಿಯನ್ನು ಕೀರ್ತಿಶೇಷರಾದ ಶಂಕರ್ ನಾಗ್ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯ ಎಲ್ಲಾ ಭಾಗಗಳನ್ನೂ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ.
ದೂರದರ್ಶನದಲ್ಲಿ ಮೂಡಿಬರುತ್ತಿದ್ದ ಈ ಧಾರಾವಾಹಿಯನ್ನು ನೋಡಲು ಈಗಲೂ ಕಿರುತೆರೆ ವೀಕ್ಷಕರು ತುದಿಗಾಲಲ್ಲಿ ನಿಲ್ಲುತ್ತಾರೆ. ಧಾರಾವಾಹಿಯನ್ನು ನೋಡುತ್ತಾ ನೋಡುತ್ತಾ ಮತ್ತೆಲ್ಲೋ ಕಳೆದುಹೊಗುತ್ತೇವೆ. ಅಷ್ಟೊಂದು ಪರಿಣಾಮಕಾರಿಯಾಗಿ ಧಾರಾವಾಹಿಯನ್ನು ಶಂಕರ್ ನಾಗ್ ಅವರು ತೆರೆಗೆ ತಂದಿದ್ದಾರೆ. [ಮಾಲ್ಗುಡಿ ಡೇಸ್ ಕನ್ನಡ ಡಬ್ಬಿಂಗ್ ಗೆ ಒಕ್ಕೊರಲ ಆಗ್ರಹ]

ಆಸಕ್ತರು ಯೂಟ್ಯೂಬ್ ಗೆ ಭೇಟಿ ನೀಡಿ ತಮ್ಮ ನೆಚ್ಚಿನ ಧಾರಾವಾಹಿಯನ್ನು ಮತ್ತೊಮ್ಮೆ ಸವಿಯಬಹುದು. ಧಾರಾವಾಹಿಗೆ ಎಲ್. ವೈದ್ಯನಾಥನ್ ಅವರು ಸಂಗೀತ ಇದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ಧಾರಾವಾಹಿಯ ಒಂದೊಂದು ಭಾಗವೂ ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.
ಈ ಎವರ್ ಗ್ರೀನ್ ಧಾರಾವಾಹಿಯಲ್ಲಿ ಮಾಸ್ಟರ್ ಮಂಜುನಾಥ್, ಅನಂತ್ ನಾಗ್, ವೈಶಾಲಿ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ವಿಷ್ಣುವರ್ಧನ್, ಶಂಕರ್ ನಾಗ್, ರಮೇಶ್ ಭಟ್, ಅರುಂಧತಿ ನಾಗ್ ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)
<center><iframe width="100%" height="360" src="//www.youtube.com/embed/8Jeok9Rcw0c?feature=player_detailpage" frameborder="0" allowfullscreen></iframe></center>


Click it and Unblock the Notifications











