twitter
    For Quick Alerts
    ALLOW NOTIFICATIONS  
    For Daily Alerts

    ಯೂಟ್ಯೂಬಲ್ಲಿ ನೋಡಿ ಆನಂದಿಸಿ 'ಮಾಲ್ಗುಡಿ ಡೇಸ್'

    By Rajendra
    |

    ಎಂಬತ್ತರ ದಶಕದಲ್ಲಿ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದ ಧಾರಾವಾಹಿ 'ಮಾಲ್ಗುಡಿ ಡೇಸ್'. ಈ ಧಾರಾವಾಹಿಯನ್ನು ಕೀರ್ತಿಶೇಷರಾದ ಶಂಕರ್ ನಾಗ್ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯ ಎಲ್ಲಾ ಭಾಗಗಳನ್ನೂ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ.

    ದೂರದರ್ಶನದಲ್ಲಿ ಮೂಡಿಬರುತ್ತಿದ್ದ ಈ ಧಾರಾವಾಹಿಯನ್ನು ನೋಡಲು ಈಗಲೂ ಕಿರುತೆರೆ ವೀಕ್ಷಕರು ತುದಿಗಾಲಲ್ಲಿ ನಿಲ್ಲುತ್ತಾರೆ. ಧಾರಾವಾಹಿಯನ್ನು ನೋಡುತ್ತಾ ನೋಡುತ್ತಾ ಮತ್ತೆಲ್ಲೋ ಕಳೆದುಹೊಗುತ್ತೇವೆ. ಅಷ್ಟೊಂದು ಪರಿಣಾಮಕಾರಿಯಾಗಿ ಧಾರಾವಾಹಿಯನ್ನು ಶಂಕರ್ ನಾಗ್ ಅವರು ತೆರೆಗೆ ತಂದಿದ್ದಾರೆ. [ಮಾಲ್ಗುಡಿ ಡೇಸ್ ಕನ್ನಡ ಡಬ್ಬಿಂಗ್ ಗೆ ಒಕ್ಕೊರಲ ಆಗ್ರಹ]

    A still from Malgudi Days
    ಈ ಧಾರಾವಾಹಿಯ ಎಲ್ಲಾ ಕಂತುಗಳು ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಿ ಉಚಿತವಾಗಿ ಲಭ್ಯ. ಈ ಧಾರಾವಾಹಿಯ ಹಕ್ಕುಗಳನ್ನು ಪಡೆದಿರುವ ರಾಜಶ್ರೀ ಸಂಸ್ಥೆ ಅಷ್ಟೂ ಎಪಿಸೋಡ್ ಗಳನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು ಅಲ್ಲೂ ಸಾಕಷ್ಟು ಜನಪ್ರಿಯತೆ ಪಡೆದಿದೆ.

    ಆಸಕ್ತರು ಯೂಟ್ಯೂಬ್ ಗೆ ಭೇಟಿ ನೀಡಿ ತಮ್ಮ ನೆಚ್ಚಿನ ಧಾರಾವಾಹಿಯನ್ನು ಮತ್ತೊಮ್ಮೆ ಸವಿಯಬಹುದು. ಧಾರಾವಾಹಿಗೆ ಎಲ್. ವೈದ್ಯನಾಥನ್ ಅವರು ಸಂಗೀತ ಇದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ಧಾರಾವಾಹಿಯ ಒಂದೊಂದು ಭಾಗವೂ ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.

    ಈ ಎವರ್ ಗ್ರೀನ್ ಧಾರಾವಾಹಿಯಲ್ಲಿ ಮಾಸ್ಟರ್ ಮಂಜುನಾಥ್, ಅನಂತ್ ನಾಗ್, ವೈಶಾಲಿ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ವಿಷ್ಣುವರ್ಧನ್, ಶಂಕರ್ ನಾಗ್, ರಮೇಶ್ ಭಟ್, ಅರುಂಧತಿ ನಾಗ್ ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)
    <center><iframe width="100%" height="360" src="//www.youtube.com/embed/8Jeok9Rcw0c?feature=player_detailpage" frameborder="0" allowfullscreen></iframe></center>

    English summary
    Critically Acclaimed TV Series ‘Malgudi Days’ Is Now Available For Online Viewing. For Free. Rajshri, the company that bought the rights of this series, has now put this entire series up on YouTube! So you can now revisit the charming world of Malgudi once again.
    Tuesday, June 10, 2014, 10:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X