ಡಿವೋರ್ಸ್ ಆದ 20 ದಿನಕ್ಕೆ 60 ಲಕ್ಷದ ಕಾರು ಖರೀದಿಸಿದ ನಟಿ ; ಮಾಜಿ ಗಂಡ ಹೇಳಿದ್ದೇನು ?
ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಒದ್ದಾಡಿದ್ದು ಇದೆ. ದೇವದಾಸರಾಗಿದ್ದು ಇದೆ. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.
ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಯಾವ ಲವಲೇಶವೂ ಕೂಡ ಮುಖದಲ್ಲಿ ಕಾಣಿಸುವುದಿಲ್ಲ. ಉದಾಹರಣೆಗೆ ಮಹಿ ವಿಜ್ ಅವರ ವ್ಯೆಯಕ್ತಿಕ ಜೀವನವನ್ನೇ ತೆಗೆದುಕೊಳ್ಳಿ.

ಹೌದು, ಮಹಿ ವಿಜ್ ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.
ಇಂಥಾ ಮಹಿ ವಿಜ್ ಮನಸಾರೆ ಮೆಚ್ಚಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ ಜೈ ಭಾನುಶಾಲಿ ಅವರನ್ನು ಮದುವೆಯಾಗಿದ್ದರು. 2010-11ರ ಆಸು ಪಾಸು ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ ವರ್ಷದವರೆಗೆ ಇಬ್ಬರು ಅನೋನ್ಯವಾಗಿಯೇ ಇದ್ದರು. ಇವರ ಇಬ್ಬರ ಅಭಿಮಾನಿಗಳು ಕೂಡ ಆದರ್ಶ ದಂಪತಿಗಳೆಂದೇ ಕರೆಯುತ್ತಿದ್ದರು.
ಆದರೆ, ಅದೇನಾಯ್ತೋ..? ಈ ವರ್ಷದ ಆರಂಭದಲ್ಲಿಯೇ ಇಬ್ಬರು ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಇನ್ಮುಂದೆ ನಾವು ಇಬ್ಬರು ದೂರ ಎಂಬ ಸಂದೇಶವನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ರವಾನೆ ಮಾಡಿದರು. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದರು.
ಜೈ ಭಾನುಶಾಲಿ ಅವರಿಂದ ದೂರವಾದ ಮಹಿ ವಿಜ್ ವಿಚ್ಛೇದನ ಪಡೆದ ಒಂದು ವಾರದಲ್ಲೇ ಸಲ್ಮಾನ್ ಖಾನ್ ಆಪ್ತ ನದೀಮ್ ಅವರ ಜೊತೆ ಫೋಟೊ ಹಂಚಿಕೊಂಡಿದ್ದರು. ಐ ಲವ್ ಯೂ ನದೀಮ್ ಎಂದು ಹೇಳಿದ್ದರು. ನನ್ನ ಮಗಳು ನದೀಮ್‌ಗೆ ಅಬ್ಬಾ ಎಂದು ಕರೆಯುತ್ತಾಳೆ ಎಂದು ಹೇಳಿದ್ದರು. ಮಹಿ ವಿಜ್ ಅವರ ಈ ನಡೆಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿತ್ತು. ಆ ನಂತರ ನೀವು ನೋಡುವ ದೃಷ್ಟಿಯೇ ಸರಿ ಇಲ್ಲ ಎಂದು ಮಹಿ ವಿಜ್ ತಮ್ಮ ಬಗ್ಗೆ ಮಾತನಾಡಿದವರ ವಿರುದ್ಧ ಕೆಂಡ ಕಾರಿದ್ದರು.

ಹೀಗೆ ಕಳೆದ 15-20 ದಿನಗಳಿಂದ ನಿರಂತರವಾಗಿ ಸದ್ದು ಮಾಡುತ್ತಾ ಬಂದ ಮಹಿ ವಿಜ್ ಈಗ ವಿಚ್ಚೇದನ ಪಡೆದು 20 ದಿನಗಳ ನಂತರ ದುಬಾರಿ ಕಾರನ್ನು ಖರೀದಿಸಿದ್ದಾರೆ. ಹತ್ತಲ್ಲ, ಇಪ್ಪತ್ತಲ್ಲ, 60 ಲಕ್ಷ ಹಣ ನೀಡಿ ಮಿನಿ ಕೂಪರ್ ಕಾರು ಖರೀದಿಸಿ ತಮ್ಮ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮಗಳು ಕೇವಲ ನಾಲ್ಕು ವರ್ಷದವಳಿದ್ದಾಗ, ಅವಳು ಮಿನಿ ಕೂಪರ್ ಕಾರು ನೋಡಿ, ಅಮ್ಮಾ, ಒಂದು ದಿನ ನನಗೆ ಈ ಕಾರು ಬೇಕು ಎಂದು ಹೇಳಿದಳು ಎಂದು ಹೇಳಿರುವ ಮಹಿ ವಿಜ್, ಆ ಸಮಯದಲ್ಲಿ ನನಗೆ ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ನನ್ನ ಮಗಳಿಗೆ ಇಂತಹ ಐಷಾರಾಮಿ ಸೌಲಭ್ಯವನ್ನು ನಾನು ಕೊಡಬೇಕಾ ಬೇಡವಾ ಎನ್ನುವ ಗೊಂದಲದಲ್ಲಿದ್ದೆ ಎಂದಿದ್ದಾರೆ.
ಆದರೆ ಈಗ ಅವಳ ಆಸೆಯಂತೆ ಕಾರು ಖರೀದಿ ಮಾಡಿದೆ ಎಂದು ಹೇಳಿರುವ ಮಹಿ ವಿಜ್ ಈ ನೆನಪು ಅವಳಿಗೆ ಶಾಶ್ವತವಾಗಿರುತ್ತೆ ಎಂದು ಹೇಳಿದ್ದಾರೆ. ತಾಯಿಗೆ ಅವಳ ಮಗಳ ಕನಸುಗಳು ಮುಖ್ಯ, ನಿನ್ನೆಲ್ಲ ಕನಸುಗಳನ್ನು ಸಾಧ್ಯವಾದಷ್ಟು ನಾನು ನನಸಾಗಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೇ ಮಹಿ ವಿಜ್ ಕಾರು ತೆಗೆದುಕೊಂಡ ನಂತರ ಇವರ ಮಾಜಿ ಪತಿ ಜೈ ಭಾನುಶಾಲಿ ಕೂಡ ಸಂಭ್ರಮ ಪಟ್ಟಿದ್ದಾರೆ. ಅಭಿನಂದನೆಗಳು ಇದು ಐಶಾರಾಮಿಯ ವಿಚಾರ ಅಲ್ಲ ಅದು ಅವಳ ಆಸೆ ಎಂದು ಹೇಳಿದ್ದಾರೆ. ಮಾಜಿ ಪತ್ನಿಯ ಕಾರಿನಲ್ಲಿ ತಮ್ಮ ಮಕ್ಕಳನ್ನು ಕರೆದುಕೊಂಡು ಲಾಂಗ್ ಡ್ರೈವ್ ಕೂಡ ಹೋಗಿದ್ದಾರೆ. ಇನ್ನುಳಿದಂತೆ ಈ ಕಾರಿನ ಬೆಲೆ ₹58.50 ಲಕ್ಷದಿಂದ ಶುರು ಆಗುತ್ತೆ. ಆನ್-ರೋಡ್ ₹67 ರಿಂದ ₹70 ಲಕ್ಷ ಆಗುತ್ತೆ.


Click it and Unblock the Notifications











