»   » ಹಳ್ಳಿ ಹೈದ ಸುನೀಲ್ ಪರ ನಿಂತ ಕನ್ನಡದ ಯುವ ಗಾಯಕಿಯರು

ಹಳ್ಳಿ ಹೈದ ಸುನೀಲ್ ಪರ ನಿಂತ ಕನ್ನಡದ ಯುವ ಗಾಯಕಿಯರು

Posted By:
Subscribe to Filmibeat Kannada

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಹಳ್ಳಿ ಹುಡುಗ ಸುನೀಲ್ ಗೆದ್ದಿದ್ದಾರೆ. ಆದರೆ ಈಗ ಇದೇ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಆಗಿದೆ. ಕಾರ್ಯಕ್ರಮದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕೆಲವರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಯಾರಿಗೆ ಎಷ್ಟು ವೋಟು ಬಂದಿತ್ತು?

ಆದರೆ ಈಗ ಕನ್ನಡದ ಯುವ ಗಾಯಕರು ಸುನೀಲ್ ಪರ ನಿಂತಿದ್ದಾರೆ. ಯುವ ಗಾಯಕಿಯಾದ ಮಾನಸ ಹೊಳ್ಳ ಅವರು ಸುನೀಲ್ ಬಗ್ಗೆ ಅದ್ಭುತವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಿದ್ದಾರೆ. ''ಪಾಂಡಿತ್ಯ ಪ್ರದರ್ಶನ ಬೇರೆ, ಭಾವನೆಗಳ ಪ್ರದರ್ಶನ ಬೇರೆ. ಎಲ್ಲ ಇದ್ದು, ಸಾಧಿಸಿ ತೋರಿಸುವುದು ಬೇರೆ, ಏನು ಇಲ್ಲದವನ ಸಾಧನೆ ಬೇರೆ. ಸಂಗೀತಕ್ಕೂ, ಹೃದಯಕ್ಕೂ ಭಾವನೆಗಳ ಅಲೆ ಎಬ್ಬಿಸಿದ್ದು ನಮ್ಮ ಸುನೀಲ'' ಅಂತ ಹೇಳಿದ್ದಾರೆ.

Manasa Holla supports 'Sarigamapa Season 13' winner Sunil

ಮಾನಸ ಹೊಳ್ಳ ಅವರ ಈ ಮಾತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. 'ಲೂಸಿಯಾ' ಖ್ಯಾತಿಯ ಗಾಯಕ ನವೀನ್ ಸಜ್ಜು, ಗಾಯಕಿ ಈ‍ಷಾ ಸುಚಿ ಸೇರಿದಂತೆ ಅನೇಕರು ಸುನೀಲ್ ಪರ ನಿಂತು ಆತನ ಸಾಧನೆಯನ್ನು ಗೌರವಿಸಿದ್ದಾರೆ.

English summary
Kannada singer Manasa Holla supports Zee Kannada channel's 'Sarigamapa Season 13' winner Sunil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada