"ಸವಾಲಿನ ಪಾತ್ರಕ್ಕೆ ಜೀವ ತುಂಬಿದ ಖುಷಿಯಿದೆ": ಕಿರುತೆರೆ ನಟಿ ಮಾನಸ ಮನೋಹರ್

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅವರ ಪರ್ಸನಲ್ ಅಸಿಸ್ಟೆಂಟ್ ಮೀರಾ ಆಗಿ ಅಭಿನಯಿಸುತ್ತಿರುವ ಬೆಡಗಿ ಹೆಸರು ಮಾನಸ ಮನೋಹರ್.

ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಮಾನಸ ಮನೋಹರ್ ಎಂಬಿಎ ಪದವೀಧರೆ ಹೌದು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಮಾನಸ ಮನೋಹರ್ ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆದರೂ ನಟನೆಯ ಮೂಲಕ ಗಮನ ಸೆಳೆದ ಚೆಲುವೆ.

 ಮೀರಾ ಪಾತ್ರ ಪವರ್‌ಫುಲ್

ಮೀರಾ ಪಾತ್ರ ಪವರ್‌ಫುಲ್

'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಕಾರ್ಪೋರೇಟರ್ ಜಗತ್ತಿನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರಕ್ಕೆ ಜೀವ ತುಂಬುವ ಮಾನಸ ಅವರ ಗತ್ತು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಒಟ್ಟಿನಲ್ಲಿ ಆಧುನಿಕ ಯುಗದ ಹೆಣ್ಣುಮಗಳಾಗಿ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡುತ್ತಿರುವ ಮಾನಸ ಮನೋಹರ್ ಓದಿನಲ್ಲಿ ಬಹಳ ಮುಂದಿದ್ದ ಕಾರಣ ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು ಎಂದು ಪೋಷಕರು ಆಲೋಚಿಸಿದ್ದರು. ಆದರೆ ಮಾನಸ ಅವರು ಡಾಕ್ಟರ್ ಹಾಗೂ ಇಂಜಿನಿಯರ್ ಆಗದೇ ನಟಿಯಾಗಿ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾದರು‌.

 'ಅಶ್ವಿನಿ ನಕ್ಷತ್ರ' ಕಿರುತೆರೆ ಪಯಣ ಶುರು

'ಅಶ್ವಿನಿ ನಕ್ಷತ್ರ' ಕಿರುತೆರೆ ಪಯಣ ಶುರು

ಆರೂರು ಜಗದೀಶ್ ನಿರ್ದೇಶನದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಮಾನಸ ಅದರಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದರು. ಎಂಬಿಎ ವಿದ್ಯಾರ್ಥಿನಿಯಾಗಿದ್ದ ಕಾರಣ ಆಗ ಪರೀಕ್ಷೆ ನಡೆಯುತ್ತಿತ್ತು. ಹಾಗಾಗಿ ಪೂರ್ಣ ಪ್ರಮಾಣದ ಪಾತ್ರ ಒಪ್ಪಿಕೊಳ್ಳಲು ಸಾಧ್ಯವಾಗದ ಕಾರಣ ಕೇವಲ ಅತಿಥಿ ಪಾತ್ರದಲ್ಲಿ ನಟಿಸಿದರು. ಮುಂದೆ ಶುಭವಿವಾಹ ಧಾರಾವಾಹಿಯಲ್ಲೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಮಾನಸ ಮೀರಾ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಹಿಂದೆ ಮುಂದೆ ನೋಡದೆ ಅಸ್ತು ಎಂದರು. ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ಇರುವ ಪಾತ್ರವಾದ ಕಾರಣ ನಟನೆಗೂ ಅವಕಾಶ ಜಾಸ್ತಿ ಎಂಬುದು ಮಾನಸ ಅಭಿಪ್ರಾಯ.

 'ಸಿನಿಮಾ ಮೈ ಡಾರ್ಲಿಂಗ್' ಸಿನಿಮಾದಲ್ಲಿ ನಟನೆ

'ಸಿನಿಮಾ ಮೈ ಡಾರ್ಲಿಂಗ್' ಸಿನಿಮಾದಲ್ಲಿ ನಟನೆ

2014ರಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ 'ಮಿಸ್ ಕರ್ನಾಟಕ' ಪ್ರಶಸ್ತಿ ಪಡೆದ ಮಾನಸ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಹಿರಿತೆರೆಯಲ್ಲಿಯೂ ಆಕೆ ಗುರುತಿಸಿಕೊಂಡಿದ್ದಾರೆ. ಗೌರೀಶ್ ಅಕ್ಕಿ ನಿರ್ದೇಶನದ 'ಸಿನಿಮಾ ಮೈ ಡಾರ್ಲಿಂಗ್' ಸಿನಿಮಾದಲ್ಲಿ ಬಣ್ಣ ಹಚ್ಚಿದ ಈಕೆ ತೆಲುಗು ತಮಿಳು ಸಿನಿಮಾರಂಗದಲ್ಲಿ ಮಿಂಚಿದ್ದಾರೆ.

 ತಮ್ಮ ಜರ್ನಿ ಬಗ್ಗೆ ಏನಂತಾರೆ ಮೀರಾ?

ತಮ್ಮ ಜರ್ನಿ ಬಗ್ಗೆ ಏನಂತಾರೆ ಮೀರಾ?

"ಜನ ಗುರುತಿಸುವಂತಹ ಪಾತ್ರಗಳಿಗೆ ಜೀವ ತುಂಬಬೇಕು ಎಂಬುದು ನನ್ನ ಆಸೆ. ಇದರ ಹೊರತಾಗಿ ಕಿರುತೆರೆ ಆಗಬೇಕು ಅಥವಾ ಹಿರಿತೆರೆ ಆಗಬೇಕು ಎಂದೇನಿಲ್ಲ. ಅದರ ಬದಲಿಗೆ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕಾದುದು ಅಷ್ಟೇ ಮುಖ್ಯ" ಎನ್ನುವ ಮಾನಸ ಮನೋಹರ್ ಸದ್ಯ ಮೀರಾ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Manasa Manohar busy in Jothe Jotheyali serial and says Meera character is challenging one,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X