ಆದಂ ಪಾಶಾ ಬಿಟ್ಟು ಹೋದ ಜಾಗಕ್ಕೆ ಬಂದ ಸೆಲೆಬ್ರಿಟಿ ಡ್ಯಾನ್ಸರ್ ಯಾರು.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಆದಂ ಪಾಶಾ ಬಳಿಕ ಕಾಣಿಸಿಕೊಂಡಿದ್ದು 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ. ಆದರೆ ಈ ಕಾರ್ಯಕ್ರಮದಲ್ಲಿ ಆದಂ ಪಾಶಾ ಹೆಚ್ಚು ದಿನ ಉಳಿಯಲಿಲ್ಲ.
'ತಕಧಿಮಿತ' ವೇದಿಕೆ ಮೇಲೆ ತಮಗೆ ಅವಮಾನ ಆಗುವ ಹಾಗೆ ನಿರೂಪಕ ಅಕುಲ್ ಬಾಲಾಜಿ ಮಾತನಾಡಿದ್ದಾರೆ ಹಾಗೂ ನಿರ್ದೇಶಕಿ ಶ್ರದ್ಧಾ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮದಿಂದ ಆದಂ ಪಾಶಾ ಹೊರನಡೆದಿದ್ದರು.
ಏಕಾಏಕಿ ಆದಂ ಪಾಶಾ ವಾಕ್ ಔಟ್ ಮಾಡಿದ್ದರಿಂದ ಅವರ ಪಾರ್ಟ್ನರ್ ಪುನೀತ್ ಕಳೆದ ವಾರ ಒಂಟಿಯಾಗಿ ಪರ್ಫಾರ್ಮ್ ಮಾಡಿದ್ದರು. ಇದೀಗ ಪುನೀತ್ ಗೆ ಹೊಸ ಜೋಡಿ ಸಿಕ್ಕಿದೆ. ಆದಂ ಪಾಶಾ ಜಾಗಕ್ಕೆ ಬಂದಿರುವ ಸೆಲೆಬ್ರಿಟಿ ಡಾನ್ಸರ್ ಯಾರು ಅಂತ ತಿಳಿದುಕೊಳ್ಳಲು ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ....

ಆದಂ ಪಾಶಾ ಜಾಗಕ್ಕೆ ಬಂದ ಸೆಲೆಬ್ರಿಟಿ ಡಾನ್ಸರ್ ಇವರೇ..
ಆದಂ ಪಾಶಾ ಬಿಟ್ಟು ಹೋದ ಜಾಗಕ್ಕೆ ಬಂದ ಸೆಲೆಬ್ರಿಟಿ ಡ್ಯಾನ್ಸರ್ ಈಕೆಯೇ.. ಹೆಸರು ಮಾನಸಾ ಮನೋಹರ್. ಕನ್ನಡತಿ ಆಗಿದ್ದರೂ ಮಾನಸಾ ಮನೋಹರ್ ಟಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಕಮ್ ಆಂಕರ್ ಆಗಿರುವ ಮಾನಸಾ ಮನೋಹರ್ ರಾಜ್ ಮ್ಯೂಸಿಕ್ ನಲ್ಲೂ ಕೆಲಸ ನಿರ್ವಹಿಸಿದ್ದಾರೆ.

ಪುನೀತ್ ಪರ್ಫಾರ್ಮೆನ್ಸ್ ನಲ್ಲಿ ಇಂಪ್ರೂವ್ಮೆಂಟ್ ಇಲ್ಲ
''ಆದಂ ಪಾಶಾ ಗದರುತ್ತಾರೆ'' ಎಂದು ವೇದಿಕೆ ಮೇಲೆ ಪುನೀತ್ ಆರೋಪ ಮಾಡಿದ್ದರು. ಅಲ್ಲದೆ ''ಆದಂ ಪಾಶಾ ಜೊತೆಗೆ ಚೆನ್ನಾಗಿ ಪರ್ಫಾರ್ಮ್ ಮಾಡದಿರಲು ಇದೇ ಕಾರಣ'' ಅಂತ ಪುನೀತ್ ಹೇಳಿದ್ದರು. ಆದರೆ ಆದಂ ಪಾಶಾ ವಾಕ್ ಔಟ್ ಮಾಡಿ ಬೇರೆ ಜೋಡಿ ಸಿಕ್ಕರೂ ಪುನೀತ್ ಪರ್ಫಾರ್ಮೆನ್ಸ್ ಮಾತ್ರ ಸುಧಾರಿಸಿಲ್ಲ.

ಕ್ಲಾಸ್ ತೆಗೆದುಕೊಂಡ ರವಿಚಂದ್ರನ್
ತೀರಾ ಡಲ್ ಆಗಿ ಪುನೀತ್ ಪರ್ಫಾರ್ಮ್ ಮಾಡಿದ್ದನ್ನು ನೋಡಿ ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಸ್ ತೆಗೆದುಕೊಂಡರು. ಪದೇ ಪದೇ ಚಾನ್ಸ್ ಸಿಗುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಪುನೀತ್ ಗೆ ರವಿಚಂದ್ರನ್ ಸಲಹೆ ನೀಡಿದರು.

ಲಾಸ್ಟ್ Rank ನಲ್ಲಿ ಪುನೀತ್ ಮಾನಸಾ
ಕೆಮಿಸ್ಟ್ರಿ ರೌಂಡ್ ನಲ್ಲಿ ಇತರರಿಗೆ ಹೋಲಿಸಿದರೆ ಕಳಪೆ ಪರ್ಫಾರ್ಮೆನ್ಸ್ ನೀಡಿದ ಪುನೀತ್ ಮತ್ತು ಮಾನಸಾ ಜೋಡಿ ಕೊನೆಯ ಸ್ಥಾನ ಪಡೆದುಕೊಂಡರು. ಪರಿಣಾಮ ಪುನೀತ್ ಮತ್ತು ಮಾನಸಾ ಜೋಡಿ ಸದ್ಯ ಡೇಂಜರ್ ಝೋನ್ ನಲ್ಲಿದ್ದಾರೆ.


Click it and Unblock the Notifications











