For Quick Alerts
  ALLOW NOTIFICATIONS  
  For Daily Alerts

  ಆದಂ ಪಾಶಾ ಬಿಟ್ಟು ಹೋದ ಜಾಗಕ್ಕೆ ಬಂದ ಸೆಲೆಬ್ರಿಟಿ ಡ್ಯಾನ್ಸರ್ ಯಾರು.?

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಆದಂ ಪಾಶಾ ಬಳಿಕ ಕಾಣಿಸಿಕೊಂಡಿದ್ದು 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ. ಆದರೆ ಈ ಕಾರ್ಯಕ್ರಮದಲ್ಲಿ ಆದಂ ಪಾಶಾ ಹೆಚ್ಚು ದಿನ ಉಳಿಯಲಿಲ್ಲ.

  'ತಕಧಿಮಿತ' ವೇದಿಕೆ ಮೇಲೆ ತಮಗೆ ಅವಮಾನ ಆಗುವ ಹಾಗೆ ನಿರೂಪಕ ಅಕುಲ್ ಬಾಲಾಜಿ ಮಾತನಾಡಿದ್ದಾರೆ ಹಾಗೂ ನಿರ್ದೇಶಕಿ ಶ್ರದ್ಧಾ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮದಿಂದ ಆದಂ ಪಾಶಾ ಹೊರನಡೆದಿದ್ದರು.

  ಏಕಾಏಕಿ ಆದಂ ಪಾಶಾ ವಾಕ್ ಔಟ್ ಮಾಡಿದ್ದರಿಂದ ಅವರ ಪಾರ್ಟ್ನರ್ ಪುನೀತ್ ಕಳೆದ ವಾರ ಒಂಟಿಯಾಗಿ ಪರ್ಫಾರ್ಮ್ ಮಾಡಿದ್ದರು. ಇದೀಗ ಪುನೀತ್ ಗೆ ಹೊಸ ಜೋಡಿ ಸಿಕ್ಕಿದೆ. ಆದಂ ಪಾಶಾ ಜಾಗಕ್ಕೆ ಬಂದಿರುವ ಸೆಲೆಬ್ರಿಟಿ ಡಾನ್ಸರ್ ಯಾರು ಅಂತ ತಿಳಿದುಕೊಳ್ಳಲು ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ....

  ಆದಂ ಪಾಶಾ ಜಾಗಕ್ಕೆ ಬಂದ ಸೆಲೆಬ್ರಿಟಿ ಡಾನ್ಸರ್ ಇವರೇ..

  ಆದಂ ಪಾಶಾ ಜಾಗಕ್ಕೆ ಬಂದ ಸೆಲೆಬ್ರಿಟಿ ಡಾನ್ಸರ್ ಇವರೇ..

  ಆದಂ ಪಾಶಾ ಬಿಟ್ಟು ಹೋದ ಜಾಗಕ್ಕೆ ಬಂದ ಸೆಲೆಬ್ರಿಟಿ ಡ್ಯಾನ್ಸರ್ ಈಕೆಯೇ.. ಹೆಸರು ಮಾನಸಾ ಮನೋಹರ್. ಕನ್ನಡತಿ ಆಗಿದ್ದರೂ ಮಾನಸಾ ಮನೋಹರ್ ಟಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಕಮ್ ಆಂಕರ್ ಆಗಿರುವ ಮಾನಸಾ ಮನೋಹರ್ ರಾಜ್ ಮ್ಯೂಸಿಕ್ ನಲ್ಲೂ ಕೆಲಸ ನಿರ್ವಹಿಸಿದ್ದಾರೆ.

  ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!

  ಪುನೀತ್ ಪರ್ಫಾರ್ಮೆನ್ಸ್ ನಲ್ಲಿ ಇಂಪ್ರೂವ್ಮೆಂಟ್ ಇಲ್ಲ

  ಪುನೀತ್ ಪರ್ಫಾರ್ಮೆನ್ಸ್ ನಲ್ಲಿ ಇಂಪ್ರೂವ್ಮೆಂಟ್ ಇಲ್ಲ

  ''ಆದಂ ಪಾಶಾ ಗದರುತ್ತಾರೆ'' ಎಂದು ವೇದಿಕೆ ಮೇಲೆ ಪುನೀತ್ ಆರೋಪ ಮಾಡಿದ್ದರು. ಅಲ್ಲದೆ ''ಆದಂ ಪಾಶಾ ಜೊತೆಗೆ ಚೆನ್ನಾಗಿ ಪರ್ಫಾರ್ಮ್ ಮಾಡದಿರಲು ಇದೇ ಕಾರಣ'' ಅಂತ ಪುನೀತ್ ಹೇಳಿದ್ದರು. ಆದರೆ ಆದಂ ಪಾಶಾ ವಾಕ್ ಔಟ್ ಮಾಡಿ ಬೇರೆ ಜೋಡಿ ಸಿಕ್ಕರೂ ಪುನೀತ್ ಪರ್ಫಾರ್ಮೆನ್ಸ್ ಮಾತ್ರ ಸುಧಾರಿಸಿಲ್ಲ.

  ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?

  ಕ್ಲಾಸ್ ತೆಗೆದುಕೊಂಡ ರವಿಚಂದ್ರನ್

  ಕ್ಲಾಸ್ ತೆಗೆದುಕೊಂಡ ರವಿಚಂದ್ರನ್

  ತೀರಾ ಡಲ್ ಆಗಿ ಪುನೀತ್ ಪರ್ಫಾರ್ಮ್ ಮಾಡಿದ್ದನ್ನು ನೋಡಿ ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಸ್ ತೆಗೆದುಕೊಂಡರು. ಪದೇ ಪದೇ ಚಾನ್ಸ್ ಸಿಗುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಪುನೀತ್ ಗೆ ರವಿಚಂದ್ರನ್ ಸಲಹೆ ನೀಡಿದರು.

  ಆದಂ 'ತಕಧಿಮಿತ' ಶೋ ಕ್ವಿಟ್ ಮಾಡಿದ್ದು ವೀಕ್ಷಕರಿಗೆ ಮಾಡಿದ ಅವಮಾನ.!ಆದಂ 'ತಕಧಿಮಿತ' ಶೋ ಕ್ವಿಟ್ ಮಾಡಿದ್ದು ವೀಕ್ಷಕರಿಗೆ ಮಾಡಿದ ಅವಮಾನ.!

  ಲಾಸ್ಟ್ Rank ನಲ್ಲಿ ಪುನೀತ್ ಮಾನಸಾ

  ಲಾಸ್ಟ್ Rank ನಲ್ಲಿ ಪುನೀತ್ ಮಾನಸಾ

  ಕೆಮಿಸ್ಟ್ರಿ ರೌಂಡ್ ನಲ್ಲಿ ಇತರರಿಗೆ ಹೋಲಿಸಿದರೆ ಕಳಪೆ ಪರ್ಫಾರ್ಮೆನ್ಸ್ ನೀಡಿದ ಪುನೀತ್ ಮತ್ತು ಮಾನಸಾ ಜೋಡಿ ಕೊನೆಯ ಸ್ಥಾನ ಪಡೆದುಕೊಂಡರು. ಪರಿಣಾಮ ಪುನೀತ್ ಮತ್ತು ಮಾನಸಾ ಜೋಡಿ ಸದ್ಯ ಡೇಂಜರ್ ಝೋನ್ ನಲ್ಲಿದ್ದಾರೆ.

  'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.!'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.!

  English summary
  Anchor cum Actress Manasa Manohar comes in as a replacement for Adam Pasha in 'Takadhimita' show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X