»   » ಕಲರ್ಸ್ ಕನ್ನಡ ಬದಲು ಕಲರ್ಸ್ ಸೂಪರ್ ನಲ್ಲಿ 'ಮನೆದೇವ್ರು' ಪ್ರಸಾರ

ಕಲರ್ಸ್ ಕನ್ನಡ ಬದಲು ಕಲರ್ಸ್ ಸೂಪರ್ ನಲ್ಲಿ 'ಮನೆದೇವ್ರು' ಪ್ರಸಾರ

Posted By:
Subscribe to Filmibeat Kannada
Mane Devru, Kannada Serial to telecast in Colors Super Channel from Monday

'ಮನೆದೇವ್ರು' ಸೀರಿಯಲ್ ವೀಕ್ಷಕರಿಗೊಂದು ಸಿಹಿ ಸುದ್ದಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ ವೇಳೆ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿ ಇನ್ನು ಮುಂದೆ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಲಿದೆ.

ಸೆಪ್ಟೆಂಬರ್ 18 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಾಯಂಕಾಲ 6 ಗಂಟೆಗೆ ನಿಮ್ಮ ಮೆಚ್ಚಿನ 'ಮನೆದೇವ್ರು' ಧಾರಾವಾಹಿಯನ್ನು ನೋಡಿ ಆನಂದಿಸಬಹುದು.

mane-devru-serial-to-telecast-in-colors-super-channel

'ಮನೆದೇವ್ರು' ಧಾರಾವಾಹಿ ಈಗಾಗಲೇ ವೀಕ್ಷಕರ ಮನಸೂರೆಗೊಂಡಿದೆ. ಒಂದೊಳ್ಳೆ ಕತೆಯನ್ನು ಮಿಸ್ ಮಾಡೋಕೂ ಆಗದೆ, ನಿದ್ದೆ ಟೈಮ್‍ನಲ್ಲಿ ನೋಡಬೇಕಲ್ಲಾ ಎಂದು ಪೇಚಾಡುತ್ತಿದ್ದ ವೀಕ್ಷಕರು ಇನ್ಮೇಲೆ ಸಂಜೆ ಟಿ.ವಿ ಹಾಕಿದ ಕೂಡಲೇ 'ಮನೆದೇವ್ರು' ನೋಡಬಹುದು.

ವೀಕ್ಷಕರ ಒತ್ತಾಸೆಯ ಮೇರೆಗೆ ಹಾಗೂ ಒಂದೊಳ್ಳೆ ಕತೆಯನ್ನು ಪ್ರಸಾರ ಮಾಡುವುದಕ್ಕಾಗಿ ಕಲರ್ಸ್ ಸೂಪರ್ ವಾಹಿನಿಗೆ 'ಮನೆದೇವ್ರು' ಧಾರಾವಾಹಿಯನ್ನು ವರ್ಗಾಯಿಸಲಾಗಿದೆ.

mane-devru-serial-to-telecast-in-colors-super-channel

'ಮನೆದೇವ್ರು' ಕಥಾಹಂದರ:
ಸ್ತ್ರೀ ಪುರುಷನ ಅಧೀನ ಎನ್ನುವ, ಪುರುಷ ಪ್ರಧಾನ ಕುಟುಂಬದ ಯಜಮಾನ ಜಯರಾಮನ ಮನೆತನಕ್ಕೆ ಸೊಸೆಯಾಗಿ ಬರುವ ನಾಯಕಿ ಜಾನಕಿಯ ಸುತ್ತ ಹೆಣೆದಿರುವ ಕತೆ 'ಮನೆದೇವ್ರು'. ಹೆಣ್ಣಿಗೆ ಸೂಕ್ತ ಸ್ಥಾನಮಾನಗಳು ದೊರೆಯುವಂತೆ ಮಾಡುವುದೇ ಜಾನಕಿ ಮುಂದಿರುವ ಸವಾಲು.

ಜಯರಾಮನ ಮಗನ ಹೆಂಡತಿಯಿಂದ ತನ್ನ ಯಜಮಾನಿಕೆ, ಹೆಣ್ಣಿನ ಮೇಲಿನ ದಬ್ಬಾಳಿಕೆ ಅಂತ್ಯವಾಗುತ್ತೆ ಎಂಬುದು ಭವಿಷ್ಯವಾಣಿ. ಅವನ ಮಗ ಕಥಾನಾಯಕ ಸೂರ್ಯ ಗುಟ್ಟಾಗಿ ಜಾನಕಿಯನ್ನು ಮದುವೆಯಾಗಿರುತ್ತಾನೆ. ಕುಟುಂಬದ ಕಟುಸತ್ಯವನ್ನರಿತ ಜಾನಕಿ ಅಮೇರಿಕಾಕ್ಕೆ ಹೋಗಬೇಕೆನ್ನುವ ತನ್ನ ಕನಸನ್ನೇ ತ್ಯಾಗಮಾಡಿ ಸೀತೆ ಎಂಬ ಹೆಸರಿನಲ್ಲಿ ಸೂರ್ಯನ ಮನೆಗೆ ಕೆಲಸದವಳಾಗಿ ಬಂದು ಸೇರುತ್ತಾಳೆ.

ಮನೆಕೆಲಸದವಳಾದರೂ ಕೆಲವೊಂದು ಪರಿಸ್ಥಿತಿಗಳಲ್ಲಿ ಮನೆಯ ಯಜಮಾನ ಜಯರಾಮ, ಅವನ ತಮ್ಮ ರಘುರಾಮ ಹಾಗೂ ಮಗ ಸೂರ್ಯ ಅಪಾಯದಲ್ಲಿರುವಾಗ ಪಾರು ಮಾಡಿ ಮನೆಯವರಿಗೆ ಹತ್ತಿರವಾಗಿರುತ್ತಾಳೆ.

mane-devru-serial-to-telecast-in-colors-super-channel

ಸೂರ್ಯ ಗುಟ್ಟಾಗಿ ಮದುವೆಯಾಗಿದ್ದಾನೆ ಎಂದು ಮನೆಯವರೆಲ್ಲರಿಗೂ ತಿಳಿದಿದ್ದರೂ, ಅವಳು ಯಾರು ಎಂದು ಕಂಡು ಹಿಡಿಯಲಾಗದೆ ಇದ್ದಾಗ ಜಯರಾಮ ಸೂರ್ಯನಿಗೆ ಮತ್ತೊಂದು ಮದುವೆ ಮಾಡಿದರೆ, ಅವನಿಗಿರುವ ಕಂಟಕ ದೂರಾಗುತ್ತದೆಂದು ಹೆಣ್ಣು ಹುಡುಕಿ ಮದುವೆ ಮಾಡಲು ಯೋಚಿಸುತ್ತಾನೆ. ಆದರೆ ವಿಧಿಯಾಟವೇ ಬೇರೆ. ಸೂರ್ಯನಿಗೆ ಒಪ್ಪುವಂತಹ ಹುಡುಗಿ ನಮ್ಮ ಸೀತೆ ಎಂದು ಮಗನಿಗೆ ಮನೆಕೆಲಸದವಳೊಂದಿಗೆ ಮದುವೆ ಮಾಡುತ್ತಾನೆ.

ಮನೆಯವರೆಲ್ಲರ ಮುಂದೆ ಸೂರ್ಯ-ಸೀತೆ ಸಪ್ತಪದಿ ತುಳಿಯುತ್ತಾರೆ. ಇವರ ಮದುವೆಯ ಕೊನೆಯ ಕ್ಷಣದಲ್ಲಿ ರಘುರಾಮನಿಗೆ ಸೀತೆ ಬೇರೆ ಯಾರೂ ಅಲ್ಲ ಸೂರ್ಯನ ಗುಟ್ಟಾದ ಹೆಂಡತಿ ಜಾನಕಿ ಎಂದು ತಿಳಿಯುತ್ತದೆ. ಈಗ ಸೀತೆಯೇ ಜಾನಕಿ ಎಂಬ ಸತ್ಯ ಗೊತ್ತಾದರೂ ರಘುರಾಮ ಮುಚ್ಚಿಡುತ್ತಾನೆ. ಕಾರಣ ಅಣ್ಣ ಜಯರಾಮನಿಂದಾಗುವ ಅವಮಾನದ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಸತ್ಯ ತಿಳಿದರೂ ಮುಚ್ಚಿಟ್ಟು ಜಾನಕಿಯನ್ನೇ ಹಗೆತನಕ್ಕೆ ಅಸ್ತ್ರವಾಗಿಸಿಕೊಳ್ಳಬೇಕೆಂದು ಯೋಚಿಸುತ್ತಾನೆ.

ಸೀತೆಯಾಗಿ ಮನೆ ಸೊಸೆಯಾದ ಜಾನಕಿ, ಕುಟುಂಬದಲ್ಲಿರುವ ಸವಾಲುಗಳನ್ನು ಭೇದಿಸಬಲ್ಲಳೇ? ಈ ಪಯಣದಲ್ಲಿ ಅವಳು ಯಾವ ರೀತಿಯ ಸಂಕಷ್ಟಕ್ಕೆ ಸಿಲುಕುತ್ತಾಳೆ? ತನ್ನ ಕನಸನ್ನೇ ತ್ಯಾಗ ಮಾಡಿದ ಜಾನಕಿ ಮನೆಯ ಪರಿಸ್ಥಿತಿಯನ್ನು ಬದಲಾಯಿಸಬಲ್ಲಳೇ? ಎಂಬುದೇ ಮುಂದಿನ ಕತೆ.

'ಮನೆದೇವ್ರು' ಧಾರಾವಾಹಿಯನ್ನು ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

English summary
'Mane Devru' serial will shift to Colors Super Channel from September 18th and will telecast from Monday to Friday at 6 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada