ಜಿಮ್‌ನಲ್ಲಿ ಬಿಗ್‌ಬಾಸ್ ಕಾವ್ಯಾಶ್ರೀ ಸಿಕ್ಕಾಪಟ್ಟೆ ಕಸರತ್ತು: 'ಮಂಗಳ ಗೌರಿ' ಕಂಡು ನೆಟ್ಟಿಗರ ಫುಲ್ ಖುಷ್

By ಪೂರ್ವ

ಕನ್ನಡ ಜನಪ್ರಿಯ ಧಾರಾವಾಹಿ 'ಮಂಗಳ ಗೌರಿ'ಯ ನಟಿ ಕಾವ್ಯಾಶ್ರೀ ಗೌಡ. ಇತ್ತೀಚೆಗೆ ಈ ನಟಿ ಬಿಗ್‌ಬಾಸ್‌ ಹೋಗಿದ್ದರು. ಹೀಗಾಗಿ ಕನ್ನಡ ಕಿರುತೆರೆಯ ವೀಕ್ಷಕರಿಗೆ ಕಾವ್ಯಾಶ್ರೀ ಗೌಡ ಬಗ್ಗೆ ವಿಶೇಷವಾಗಿ ಪರಿಚಯ ಮಾಡಿಕೊಡಬೇಕಿಲ್ಲ.

ಬಿಗ್‌ಬಾಸ್ ಮನೆಯಿಂದ ಮರಳುತ್ತಿದ್ದಂತೆ ಕಾವ್ಯಾಶ್ರೀ ಗೌಡ ಕೊಂಚ ಸೈಲೆಂಟ್ ಆಗಿದ್ದರು. ಆದ್ರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟನೆಯಿಂದ ಬಿಡುವು ಪಡೆಯುತ್ತಿದ್ದಂತೆ ಸ್ವಲ್ಪ ದಪ್ಪ ಆಗಿದ್ದರು. ಹೀಗಾಗಿ ದೇಹ ದಂಡಿಸುವುದಕ್ಕೆ ಇಳಿದಿದ್ದಾರೆ.

Mangala Gowri and Bigg Boss fame Kavyashri Gowda working out in the gym go viral

ಪಟ ಪಟ ಅಂತ ಮಾತನಾಡಿ ಎಲ್ಲರನ್ನೂ ನಗಿಸುವ ಕಾವ್ಯಾಶ್ರೀಯ ನಟನೆಗೆ ಮರುಳಾಗದವರೇ ಇಲ್ಲ. 'ಮಂಗಳ ಗೌರಿ' ಧಾರಾವಾಹಿಯಲ್ಲಿ ಕಾವ್ಯಾಶ್ರೀ ನಟನೆಗೆ ಮರುಳು ಆಗದವರೆ ಇಲ್ಲ. ಇತ್ತೀಚೆಗೆ ಕೊಂಚ ದಪ್ಪ ಆಗಿದ್ದರಿಂದ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಜಿಮ್ ಮೊರೆ ಹೋದ 'ಮಂಗಳಗೌರಿ'

ಇತ್ತೀಚೆಗೆ ಕಾವ್ಯಾಶ್ರೀ ಗೌಡ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರು. ದಪ್ಪಗಾಗಿದ್ದರಿಂದ ತೆಳ್ಳಗಾಗುವುದಕ್ಕೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇದೇ ಫೋಟೊ ಹಾಗೂ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಾವ್ಯಾಶ್ರೀಯ ಫೋಟೊ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದುಂಡು ಮುಖದ ಚೆಲುವೆ ಸಖತ್ ಸ್ಲಿಮ್

ಕಾವ್ಯಾಶ್ರೀ ದುಂಡು ಮೊಗದ ಚೆಲುವೆ. ಆಕೆಯ ಚೆಲುವಿಗೆ ಮಾರು ಹೋಗದವರೇ ಇಲ್ಲ. ಹೀಗಾಗಿ ಈ ಸೌಂದರ್ಯವನ್ನು ಉಳಿಸಿಕೊಳ್ಳುವುದಕ್ಕೆ ಹರಸಾಹಸ ನಡೆಸಿದ್ದಾರೆ. ಕಾವ್ಯಾ ಜಿಮ್‌ನಲ್ಲಿ ಬಹಳ ಕಷ್ಟ ಪಟ್ಟು ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ಮಾಡರ್ನ್ ಡ್ರೆಸ್‌ನಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದ ಈಕೆ ಸಖತ್ ಆಗಿ ಟ್ರೋಲ್ ಆಗಿದ್ದರು. ಆಗಲೇ ಕೆಲವರು ಫಿಟ್ನೆಸ್ ಕಡೆ ಗಮನ ಕೊಡುವಂತೆ ಕಾವ್ಯಾಗೆ ಕಿವಿ ಮಾತು ಹೇಳಿದ್ದರು.

ಜಿಮ್‌ನಲ್ಲಿ ವರ್ಕೌಟ್

ಕಾವ್ಯಾಶ್ರೀ ಗೌಡ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ 'ಕೆಲವೊಮ್ಮೆ ವರ್ಕೌಟ್ ಕೂಡಾ ಉತ್ತಮ ಥೆರಪಿಯಾಗುತ್ತೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಮಾತ್ರ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೊ, ವಿಡಿಯೋಗೆ ಕೆಲ ನೆಟ್ಟಿಗರು ಕಮೆಂಟ್ ಕೂಡ ಮಾಡಿದ್ದಾರೆ. "ಮಂಗಳ ಗೌರಿ' ಧಾರಾವಾಹಿಯಲ್ಲಿ ಬಹಳ ಟ್ರಿಡಿಷನಲ್ ಆಗಿ ಡ್ರೆಸ್ ಹಾಕಿಕೊಂಡಿದ್ದೆ. ಆದರೆ ಇದೀಗ ಏನಮ್ಮ ನಿನ್ನ ಅವತಾರ" ಎಂದು ಸೀರಿಯಲ್ ಪ್ರೇಮಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.

ನಟನೆಯಲ್ಲಿ ಆಸಕ್ತಿ

ಇನ್ನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈಕೆ ಮಾತ್ರ ತನ್ನ ಕೆಲಸದಲ್ಲಿ ತಲ್ಲೀನರಾಗಿ ಇದ್ದಾರೆ. ಕಾವ್ಯಾ ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಬಹಳ ಸಾಂಪ್ರದಾಯಿಕ ಮನೆಯಿಂದ ಬಂದ ಹೆಣ್ಣು ಮಗಳಿಗೆ 'ಮಂಗಳ ಗೌರಿ' ಧಾರಾವಾಹಿ ಸಾಕಷ್ಟು ಹೆಸರು ತಂದುಕೊಟ್ಟಿತು. ಹಾಗೆಯೇ ಬಹಳ ಕಷ್ಟ ಪಟ್ಟು ನಟನೆಯನ್ನು ಕರಗತ ಮಾಡಿಕೊಂಡಿದ್ದರು.

ನಿರೂಪಕಿ ಆಗಿದ್ದ ಕಾವ್ಯಾ

ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಕಾವ್ಯಾಶ್ರೀ ಬಿಡುವಿನ ಸಮಯದಲ್ಲಿ ಆಡಿಶನ್‌ಗೆ ಹೋಗುವುದನ್ನು ತಪ್ಪಿಸಲಿಲ್ಲ.ಇವರಿಗೆ ಮೊದಲನೆಯದಾಗಿ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ನಟಿಸಿದ ಬಳಿಕ, ಕಾವ್ಯಾ 'ಮಂಗಳ ಗೌರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಬಡ್ತಿ ಪಡೆದಿದ್ದರು.

More from Filmibeat

English summary
Mangala Gowri and Bigg Boss fame Kavyashri Gowda working out in the gym go viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X