Kavyashree Gowda: ನಗರದ ಗಲ್ಲಿಗಳಲ್ಲಿ ಕಾವ್ಯಶ್ರೀ ಗೌಡ ಫೋಟೊಶೂಟ್: ಫ್ಯಾನ್ಸ್‌ಗೆ ಸಿಗುತ್ತಾ ಗುಡ್ ನ್ಯೂಸ್..?

By ಪ್ರಿಯಾ ದೊರೆ

ನಟಿ ಕಾವ್ಯಶ್ರೀ ಗೌಡ 'ಮಂಗಳ ಗೌರಿ ಮದುವೆ' ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಕಾವಶ್ರೀ ಹುಟ್ಟಿದ್ದು ಚನ್ನಪಟ್ಟಣದಲ್ಲಿ. ಧಾರಾವಾಹಿಗೆ ಬರುವ ಮುನ್ನ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು.

ಕಾವ್ಯಶ್ರೀ ಅವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದು ಮಾಧ್ಯಮ ಕ್ಷೇತ್ರದಲ್ಲಿ ಕೆಲಸವನ್ನೂ ಮಾಡುತ್ತಿದ್ದರು. ನಿರೂಪಕಿಯಾಗಿ ತೆರೆಮೇಲೆ ಬಂದ ಕಾವ್ಯಶ್ರೀ ಕೆಲಸ ಮುಗಿದ ಮೆಲೆ ಧಾರಾವಾಹಿಗಳಿಗೆ ಆಡಿಷನ್ಸ್ ನೀಡುತ್ತಿದ್ದರು.

ಮೊದಲ ಬಾರಿ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಪುಟ್ಟ ಪಾತ್ರ ಮಾಡಿದ್ದ ಕಾವ್ಯಶ್ರೀ ಬಳಿಕ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದರು.

ಅಳುಮುಂಜಿ ಪಾತ್ರದಲ್ಲಿ ನಟಿಸಿದ್ದ ನಟಿ

ಅಳುಮುಂಜಿ ಪಾತ್ರದಲ್ಲಿ ನಟಿಸಿದ್ದ ನಟಿ

'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಾವ್ಯಾಶ್ರೀ ಬಿಗ್ಬಾಸ್ ಬಾಸ್ ಸೀಸನ್ 9ರಲ್ಲಿ ದೊಡ್ಮನೆ ಪ್ರವೇಶ ಮಾಡಿದ್ದರು. ಹತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಕಾವ್ಯಶ್ರೀ, ಜನರನ್ನು ರಂಜಿಸಿದ್ದರು. ಕಪ್ಪೆ, ಕ್ಯಾಮರಾ ಜೊತೆಗೆ ಮಾತನಾಡುತ್ತಲೇ 70 ದಿನಗಳ ಕಾಲ ಮನೆಯಲ್ಲಿ ಇದ್ದರು. ಚೆನ್ನಪಟ್ಟಣ ಕನ್ನಡವನ್ನು ಮಾತನಾಡುತ್ತಾ ಜನರ ಗಮನ ಸೆಳೆದಿದ್ದರು. ಮಂಗಳ ಗೌರಿ 'ಮದುವೆ' ಧಾರಾವಾಹಿಯಲ್ಲಿ ಸದಾ ಅಳುತ್ತಾ ಕಷ್ಟಗಳ ಮೇಲೆ ಕಷ್ಟವನ್ನು ಅನುಭವಿಸುತ್ತಾ ಅಳುಮುಂಜಿ ಪಾತ್ರದಲ್ಲಿ ನಟಿಸಿದ್ದರು.

 ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

'ಮಂಗಳ ಗೌರಿ' ಪಾತ್ರವು ಸಾಕಷ್ಟು ಟ್ರೋಲ್ ಕೂಡ ಆಗುತ್ತಿತ್ತು. ಆದರೆ, ಕಾವ್ಯಶ್ರೀ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ತಮಗೆ ಅಳುಮುಂಜಿ ಪಾತ್ರಕ್ಕಿಂತಲೂ ಅದರ ವಿರುದ್ಧವಾಗಿ ಅಂದರೆ ರಗಡ್ ಪಾತ್ರದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕಾವ್ಯಶ್ರೀ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ರೀಲ್ಸ್ ಅಥವಾ ಫೋಟೋಶೂಟ್‌ಗಳನ್ನು ಮಾಡಿಸುತ್ತಿರುತ್ತಾರೆ.

ಕ್ಯೂಟ್ ಆಗಿ ಕಾಣುವ ನಟಿ

ಕ್ಯೂಟ್ ಆಗಿ ಕಾಣುವ ನಟಿ

ಇದೀಗ ಮತ್ತೆ ಕಾವ್ಯಶ್ರೀ ಅವರು ಫೋಟೋಶೂಟ್ ಅನ್ನು ಮಾಡಿಸಿದ್ದು, ಗೌನ್ ಧರಿಸಿ ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಗಿರಿನಗರದ ಗಲ್ಲಿಗಳಲ್ಲಿ ಕಾವ್ಯಶ್ರೀ ಗೌಡ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು, ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕ್ಯೂಟ್, ನೈಸ್, ಸೂಪರ್, ಚೆಂದ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಗುಡ್ ನ್ಯೂಸ್ ಕೊಡುತ್ತಾರಾ ಕಾವ್ಯಶ್ರೀ ಗೌಡ..?

ಗುಡ್ ನ್ಯೂಸ್ ಕೊಡುತ್ತಾರಾ ಕಾವ್ಯಶ್ರೀ ಗೌಡ..?

ಸದ್ಯ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳದ ಕಾವ್ಯಶ್ರೀ ಗೌಡ ಅವರು ಯಾವುದೋ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂಬುದು ಮಾತ್ರವೇ ತಿಳಿದು ಬಂದಿದೆ. ಅದೂ ಕೂಡ ಧಾರಾವಾಹಿ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕಾವ್ಯಶ್ರೀ ಗೌಡ ಅವರು ಯಾವುದೇ ಅಪ್ ಡೇಟ್ ಅನ್ನು ನೀಡಿಲ್ಲ. ಆದರೆ, ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ದರ್ಶ್ ಚಂದ್ರಪ್ಪ ಅವರ ಜೊತೆಗೆ ನಟಿಸುತ್ತಿದ್ದಾರೆ. ಇನ್ನು ಹೆಚ್ಚಾಗಿ ವಿನೋದ್ ಪ್ರಭಾಕರ್ ಅವರ ಜೊತೆಗೆ ಕಾಣಿಸಿಕೊಂಡಿದ್ದು, ಅಣ್ಣ ಎಂದು ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ಕಾವ್ಯಶ್ರೀ ಗೌಡ ಅವರನ್ನು ಧಾರಾವಾಹಿಯಲ್ಲಿ ನೋಡಲು ಬಯಸಿದ್ದಾರೆ. ಇಷ್ಟರಲ್ಲೇ ಕಾವ್ಯಶ್ರೀ ಗೌಡ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

More from Filmibeat

English summary
Mangala Gowri Serial Fame Actress Kavyashree Gowda new photoshoot Goes Viral. She Looks Stunning In light pink colour Gown, see Pics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X