ಮತ್ತೆ ದಿಯಾ ಮೂಡಿಗೆ ಜಾರಿದ ಪೃಥ್ವಿ ಅಂಬಾರ್‌; ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸ್ಬೇಕಂತೆ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ರಾಧಾ ಕಲ್ಯಾಣ' ವೂ ಒಂದು. 'ರಾಧಾ ಕಲ್ಯಾಣ'ದಲ್ಲಿ ಶ್ರೀಲಂ ಆಗಿ ನಟಿಸಿದ್ದ ಪೃಥ್ವಿ ಅಂಬಾರ್‌ ಮುಂದೆ ಅದೇ ವಾಹಿನಿಯ 'ಸಾಗರಸಂಗಮ' ಧಾರಾವಾಹಿಯಲ್ಲಿ ಸಂಜು ಆಗಿ ಮೋಡಿ ಮಾಡಿದರು‌. 'ಲವ್ ಲವಿಕೆ' ಧಾರಾವಾಹಿಯಲ್ಲಿ ಮನು ಆಗಿ ಕಾಣಿಸಿಕೊಂಡ ಕರಾವಳಿಯ ಹ್ಯಾಂಡ್ ಸಮ್ ಹುಡುಗ ಮುಂದೆ ಕಾಣಸಿಕೊಂಡಿದ್ದು ಸಿನಿಮಾದಲ್ಲಿ.

ತುಳು ಸಿನಿಮಾ ಮೂಲಕ ಹಿರಿತೆರೆಗೆ ಹಾರಿದ ಪೃಥ್ವಿ ಅಂಬಾರ್‌ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪೃಥ್ವಿ ಅಂಬಾರ್‌ಗೆ ಜನಪ್ರಿಯತೆ ನೀಡಿದ್ದು 'ದಿಯಾ' ಸಿನಿಮಾದ ಆದಿ ಪಾತ್ರ. ಇಂದಿಗೂ 'ದಿಯಾ' ಸಿನಿಮಾದ ಆದಿ ಎಂದೇ ಗುರುತಿಸಲ್ಪಡುವ ಪೃಥ್ವಿ ಅಂಬಾರ್‌ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Mangalore based actor Pruthvi Ambaar wants to act in a romantic movie

ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಪೃಥ್ವಿ ಅಂಬಾರ್‌ 'ಮತ್ಸ್ಯಗಂಧ' ಎಂಬ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂದಿನ ಸಿನಿ ಪ್ರಯಾಣದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

ಅಂದ ಹಾಗೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ಹೊಂದಿರುವ ಹೊಂದಿರುವ ಪೃಥ್ವಿ ಅಂಬಾರ್‌ ಅವರು ಇದೀಗ ಪೊಲೀಸ್ ಆಗಿ ಕಾಣಿಸಿಕೊಂಡಿರುವುದು ಅವರಿಗೂ ಹಾಗೂ ಅವರ ಅಭಿಮಾನಿ ಪ್ರೇಕ್ಷಕರುಗಳಿಗೂ ಹೊಸ ಆಯಾಮವನ್ನು ತೆರೆದುಕೊಟ್ಟಿದೆ ಎಂಬುದು ಅವರ ಮಾತು.

Mangalore based actor Pruthvi Ambaar wants to act in a romantic movie

ಕರಾವಳಿಯ ಮೀನುಗಾರರ ಕಥೆ ಈ ಸಿನಿಮಾದ ಹಿನ್ನೆಲೆ ಆಗಿದ್ದು, ಅದರಲ್ಲಿ ಒಂದು ಸಣ್ಣ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಇವರು ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಹೊಸ ನಿರ್ದೇಶಕರುಗಳೊಂದಿಗೆ ಕೆಲಸ ಮಾಡುವ ಹುಮ್ಮಸ್ಸನ್ನು ತೋರಿಸುವ ನಟ ಪೃಥ್ವಿ ಅಂಬಾರ್‌ ಅವರುಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ಕೂಡಾ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

"ಹೊಸ ನಿರ್ದೇಶಕರುಗಳೊಂದಿಗೆ ಕೆಲಸ ಮಾಡುವುದು ಒಂದು ವಿಭಿನ್ನ ಅನುಭವ. ಏಕೆಂದರೆ ಅವರಲ್ಲಿ ಹೊಸ ಹೊಸ ಕಲ್ಪನೆಗಳಿರುತ್ತದೆ. ಅವರು ಕಲಿಕೆಯ ಬಹುದೊಡ್ಡ ಪ್ರಾಸೆಸ್‌ನಲ್ಲಿ ಇರುತ್ತಾರೆ. ಹಾಗಾಗಿ ಅವರೊಂದಿಗೆ ಕೆಲಸ ಮಾಡುವಾಗ ಮಾನವ ಸಂಬಂಧ ಬಾಂಧವ್ಯ ಹಾಗೂ ತಾಳ್ಮೆಯ ಮೌಲ್ಯ ಕಲಿಯಲು ಸಾಧ್ಯವಾಗುತ್ತದೆ" ಎಂದಿದ್ದಾರೆ.

ಇನ್ನು "ಬಹಳ ವಾಸ್ತವತೆಯಿಂದ ಕೂಡಿರುವ ಈ ಚಿತ್ರದಲ್ಲಿ ಕಾನೂನಿನ ಅರಿವು ಬಹಳಷ್ಟು ಇದೆ. ಪ್ರೇಕ್ಷಕರಿಗೆ ವಾಸ್ತವತೆ ಹಾಗೂ ಕಾನೂನಿನ ಬಗ್ಗೆ ಬಹಳಷ್ಟು ವಿಚಾರಗಳನ್ನು ಸಿನಿಮಾ ತೋರಿಸಲಿದೆ. ಕ್ರೈಂ ಥ್ರಿಲ್ಲರ್ ರೀತಿಯಲ್ಲಿ ಮೂಡಿಬರುವ ಈ ಚಿತ್ರ ಕರಾವಳಿ ಜನರ ನೈಜ ಕಥೆಯನ್ನು ಹೆಣೆದು ಕೊಡುತ್ತದೆ."ಎಂದು ಸಂದರ್ಶನದಲ್ಲಿ ಮಾತಾಡಿದ್ದರು ನಟ ಪೃಥ್ವಿ ಅಂಬಾರ್‌.

More from Filmibeat

English summary
Coastal star Pruthvi Ambaar who jumped from the small screen to the Cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X