ದಿಗಂತ್ ಜೊತೆ 'ಬ್ಯಾಚುಲರ್ ಪಾರ್ಟಿ' ಮಾಡಿದ್ದ ಶೈನ್ ಶೆಟ್ಟಿ ಫುಲ್ ಶೈನಿಂಗ್; ಮುಂದಿನ ನಡೆಯೇನು?

By ಅನಿತಾ ಬನಾರಿ

ಪರಂವ ಸ್ಟುಡಿಯೋಸ್‌ನಿಂದ ನಿರ್ಮಾಣಗೊಂಡಿರುವ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಈಗಾಗಲೇ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಒಂದು ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ನಟ ಶೈನ್ ಶೆಟ್ಟಿ ಅವರು ಸಖತ್ ಖುಷಿಯಲ್ಲಿದ್ದಾರೆ. ಹೌದು, ಧಾರಾವಾಹಿ ಲೋಕಕ್ಕೆ ಕಾಲಿಟ್ಟು ನಂತರ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಐಡೆಂಟಿಟಿಯನ್ನು ಗಟ್ಟಿಯಾಗಿ ಗುರುತಿಸಿಕೊಳ್ಳುತ್ತಿರುವ ಉದಯೋನ್ಮುಖ ನಟ ಶೈನ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸದ್ಯಕ್ಕೆ ನಿರ್ದೇಶಕ ಅಭಿಜಿತ್ ಮಹೇಶ್ ಅವರ ನಿರ್ದೇಶನದ ಮೊದಲ ಸಿನಿಮಾ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ಶೈನ್ ಅಭಿನಯಿಸಿದ್ದು ಅವರ ಪಾತ್ರದ ಬಗ್ಗೆ ಬಹಳಷ್ಟು ಪ್ರಶಂಸೆಗಳು ಬಂದಿವೆ.

Mangalore based actor Shine Shetty said that he likes to act in important roles

ಅಂದ ಹಾಗೇ ಆ ಪಾತ್ರವನ್ನು ಬರೆಯುವಾಗ ನಿರ್ದೇಶಕರು ಶೈನ್ ಶೆಟ್ಟಿ ಅವರನ್ನೇ ಮನದಲ್ಲಿಟ್ಟುಕೊಂಡು ಬರೆದಿದ್ದರಂತೆ. ಒಂದೊಮ್ಮೆ ಭೇಟಿಯಾಗಿ ಪಾತ್ರದ ಬಗ್ಗೆ ಶೈನ್ ಅವರಿಗೆ ಸಂಕ್ಷಿಪ್ತವಾಗಿ ಹೇಳಿದರಂತೆ. ಪಾತ್ರ ಕೇಳಿದ ಶೈನ್ ಶೆಟ್ಟಿಗೂ ಆ ಪಾತ್ರ ಇಷ್ಟವಾಯಿತಂತೆ. ಹಾಗಾಗಿ ಒಪ್ಪಿಕೊಂಡರಂತೆ. ಆ ಸಿನಿಮಾದ ಶೂಟಿಂಗ್ ಹಾಗೂ ಇಡೀ ಜರ್ನಿ ಬಹಳ ಸಂತಸದಿಂದ ಕೂಡಿತ್ತಂತೆ.

ಶೈನ್ ಶೆಟ್ಟಿಗೆ ನಟಿಸಲು ಇಂತಹದ್ದೇ ಪಾತ್ರ ಬೇಕು ಎಂದೇನು ಇಲ್ಲ. ಅವರ ಬದಲಿಗೆ ತಾನು ಅಭಿನಯಿಸುವ ಪಾತ್ರದಿಂದ ಸಿನಿಮಾಗೆ, ಸಿನಿಮಾ ಕಥೆಗೆ ಎಷ್ಟು ಮುಖ್ಯ ಎಂಬುದಷ್ಟೇ ಅವರ ಮೊದಲ ಆದ್ಯತೆ. ಹೀಗಾಗಿಯೇ ಕಾಂತಾರ ಸಿನಿಮಾದಲ್ಲೂ ಕಮ್ಮಿ ಸಮಯದ ಪಾತ್ರವಾದರೂ, ಪಾತ್ರದ ಬೆಲೆ ನೋಡಿದ ಬಳಿಕವೇ ಶೈನ್ ಅವರು ಒಪ್ಪಿಕೊಂಡಿದ್ದಂತೆ. ಅವರ ಪ್ರಕಾರ ಪಾತ್ರಕ್ಕಿರುವ ಪ್ರಾಮುಖ್ಯತೆಯೇ ಅವರ ಮೊದಲ ಆಯ್ಕೆ ಎಂದರೆ ತಪ್ಪಾಗಲಾರದು.

Mangalore based actor Shine Shetty said that he likes to act in important roles

ಅಷ್ಟೇ ಅಲ್ಲದೆ 'ಜಸ್ಟ್ ಮ್ಯಾರೀಡ್' ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಶೈನ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಕಿರುತೆರೆ ನಟಿ ಅಂಕಿತಾ ಅಮರ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದ ಹಾಗೇ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7'ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಶೈನ್ ಶೆಟ್ಟಿ ಆ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದರು.

'ಮೀರಾ ಮಾಧವ' ಧಾರಾವಾಹಿಯಲ್ಲಿ ನಾಯಕ ಮಾಧವ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಶೈನ್ ಶೆಟ್ಟಿ ಮುಂದೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ಅಭಿನಯಿಸಿದರು. ಇನ್ನು 'ಸ್ಟಾರ್ ಸಿಂಗರ್' ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡ ಶೈನ್ ಶೆಟ್ಟಿ, ಬಳಿಕ "ಸ್ವಲ್ಪ ಅಡೆಸ್ಟ್ ಮಾಡ್ಕೊಳ್ಳಿ" ಶೋವಿನ ಸಾರಥ್ಯವನ್ನು ವಹಿಸಿದ್ದರು. ಮುಂದೆ "ಡ್ಯಾನ್ಸ್ ಡ್ಯಾನ್ಸ್" ಶೋವಿನ ಆ್ಯಂಕರ್ ಆಗಿ ಮೋಡಿ ಮಾಡಿದ ಶೈನ್ ಶೆಟ್ಟಿ ತುಳು ಸಿನಿಮಾ 'ಕುಡ್ಲ ಕೆಫೆ' ಮೂಲಕ ಬೆಳ್ಳಿತೆರೆಗೆ ಹಾರಿದರು.

'ಅಶ್ವಿತ', 'ಒಂದು ಮೊಟ್ಟೆಯ ಕಥೆ', 'ಜ್ಞಾನ ಯಜ್ಞ', 'ರುದ್ರಪ್ರಯಾಗ', 'ಪ್ರಾಯಶಃ', 'ವಿಜಯಾನಂದ', 'ಜೇಮ್ಸ್', 'ಕಾಂತಾರ', 'ಮಾಫಿಯಾ', 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶೈನ್ ಶೆಟ್ಟಿ 'ಜಸ್ಟ್ ಮ್ಯಾರೀಡ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Shine Shetty wants to work with important roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X