ತೆಲುಗು ನಟನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕರಾವಳಿ ಬೆಡಗಿಯ ಹೊಸ ಫೋಟೋಶೂಟ್; ಯಾರೀ ಶೋಭಾ ಶೆಟ್ಟಿ

By ಅನಿತಾ ಬನಾರಿ

'ಅಗ್ನಿಸಾಕ್ಷಿ' ಧಾರಾವಾಹಿಯ ತನು ಆಗಿ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಟಿ ಶೋಭಾ ಶೆಟ್ಟಿ. ತಮ್ಮ ಸಹಜ ನಟನೆಯ ಮೂಲಕ ವೀಕ್ಷಕರಿಗೆ ರಂಜಿಸುತ್ತಿರುವ ಈಕೆ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ. ಇತ್ತೀಚೆಗಷ್ಟೇ ತೆಲುಗು ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದ ಶೋಭಾ ಶೆಟ್ಟಿ ಫಿನಾಲೆಗೆ ಒಂದು ವಾರ ಇರುವಾಗ ದೊಡ್ಮನೆಯಿಂದ ಹೊರಬಿದ್ದರು.

ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ಈ ಕನ್ನಡತಿ ಉಳಿದ ಸ್ಪರ್ಧಿಗಳಿಗೆ ಟಫ್ ಕಂಟೆಸ್ಟ್ ಆಗಿದ್ದರು. ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಶೋಭಾ ಶೆಟ್ಟಿ ಪ್ರತಿವಾರವೂ ಉತ್ತಮ ಪರ್ಫಾಮೆನ್ಸ್ ಕೊಡುತ್ತಿದ್ದರು‌. ಆ ಸಮಯದಲ್ಲಿ ಸಕತ್ ಟ್ರೋಲ್ ಕೂಡಾ ಆಗುತ್ತಿದ್ದರು. ಮಾತ್ರವಲ್ಲ ತೆಲುಗು ಟ್ರೋಲ್ ಪೇಜ್‌ಗಳಲ್ಲಿ ಆಗ ಶೋಭಾ ಶೆಟ್ಟಿಯೇ ಕಾಣಿಸಿಕೊಳ್ಳುತ್ತಿದ್ದರು. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್ ಆಗಿರುವ ಈಕೆ, ಇತ್ತೀಚೆಗಷ್ಟೇ ಮಾಡಿಸಿಕೊಂಡಿರುವ ಫೋಟೋಶೂಟ್ ಸಕತ್ ಸದ್ದು ಮಾಡುತ್ತಿದೆ.

Mangalore based actress Shobha Shetty charmed with a new photoshoot

ಶೋಭಾ ಶೆಟ್ಟಿ ಸಮಯ ಸಿಕ್ಕಾಗಲೆಲ್ಲಾ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದು, ಆ ಮೂಲಕ ನೆಟ್ಟಿಗರ ಮನ ಸೆಳೆಯುತ್ತಿದ್ದಾರೆ. ಫುಲ್‌ ಸ್ಲೀವ್ಸ್ ಇರುವ ಪ್ಯೂರ್ ವೈಟ್‌ ಬ್ಲೌಸ್ ಧರಿಸಿರುವ ಚೆಂದುಳ್ಳಿ ಚೆಲುವೆ ಅದೇ ಬಣ್ಣದ ಸೀರೆಯುಟ್ಟಿದ್ದಾರೆ. ಅಪ್ಸರೆಯಂತೆ ಕಂಗೊಳಿಸುವ ಆಕೆ ನಾನಾ ನಮೂನೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಕೂದಲು ಬಿಟ್ಟಿರುವ ಈಕೆ ದೊಡ್ಡದಾದ ಜುಮುಕಿಯ ಜೊತೆಗೆ ಹಣೆಗೆ ಬ್ಲ್ಯಾಕ್ ಬಿಂದಿಯನ್ನು ಹಾಕಿದ್ದಾರೆ.

ತಮ್ಮ ನೆಚ್ಚಿನ ನಟಿಯನ್ನು ಅಪ್ಸರೆಯಂತ ಅವತಾರದಲ್ಲಿ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ. ಜೊತೆಗೆ ಕಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ. ಸೂಪರ್, ಚೆನ್ನಾಗಿ ಕಾಣುತ್ತೀದ್ದೀರಿ, ಗಾರ್ಜಿಯಸ್, ಕ್ಯೂಟ್, ಬ್ಯೂಟಿಫುಲ್, ಅಪ್ಸರೆ ಹೀಗೆ ಕಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದರ ಜೊತೆಗೆ ಒಂದೆರಡು ಟೀಕೆಗಳು ಕೂಡಾ ಬಂದಿದೆ.

Mangalore based actress Shobha Shetty charmed with a new photoshoot

ಇತ್ತೀಚೆಗಷ್ಟೇ ತೆಲುಗು ಸಹನಟ ಯಶವಂತ್ ರೆಡ್ಡಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶೋಭಾ ಶೆಟ್ಟಿ 'ಕಾರ್ತಿಕ ದೀಪಂ' ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. 'ಕಾರ್ತಿಕ ದೀಪಂ' ಧಾರಾವಾಹಿಯ ಮೋನಿತಾ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡತಿ ಈಕೆ. ಇದರ ಜೊತೆಗೆ ನಿರೂಪಕಿಯಾಗಿಯೂ ಭಡ್ತಿ ಪಡೆದಿರುವ ಈಕೆ ಸುಮನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾಫಿ ವಿತ್ ಶೋಭಾ ಶೆಟ್ಟಿ' ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಶೋಭಾ ಶೆಟ್ಟಿ ನಂತರ ಪರಭಾಷೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನಂತರ ಸ್ಟಾರ್ ಸುವರ್ಣ ವಾಹಿನಿಯ 'ರುಕ್ಕು' ಧಾರಾವಾಹಿಯಲ್ಲಿ ನಾಯಕಿ ರುಕ್ಕು ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಕಿರುತೆರೆಗೆ ಶೋಭಾ ಶೆಟ್ಟಿ ಕಂ ಬ್ಯಾಕ್ ಆಗಿದ್ದರು. ಹಳ್ಳಿ ಹುಡುಗಿ ರುಕ್ಕು ಆಗಿ ಮೋಡಿ ಮಾಡಿದ್ದ ಶೋಭಾ ಶೆಟ್ಟಿ ಹಳ್ಳಿ ಭಾಷೆ ಮಾತಾನಾಡುತ್ತಾ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದಾರೆ.

More from Filmibeat

English summary
Actress Shobha Shetty dressed up like a nymph in New Photoshoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X