For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಬಿಗ್ ಬಾಸ್ 3 ಫಿನಾಲೆ: ಟ್ರೋಪಿ ಮುಡಿಗೇರಿಸಿಕೊಂಡ ಮಣಿಕುಟ್ಟನ್

  |

  ಮಲಯಾಳಂ ಬಿಗ್ ಬಾಸ್ ಮೂರನೇ ಆವೃತ್ತಿಯ ಫಿನಾಲೆಯಲ್ಲಿ ಮಣಿಕುಟ್ಟನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮಣಿಕುಟ್ಟನ್ ಬಿಗ್ ಬಾಸ್ ಟ್ರೋಪಿಗೆ ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಣಿಕುಟ್ಟನ್ ಹಿಂಬಾಲಕರು ಶುಭಾಶಗಳನ್ನು ತಿಳಿಸುತ್ತಿದ್ದಾರೆ.

  ಬಿಗ್ ಬಾಸ್ ಸೀಸನ್ ಮಾಜಿ ಸ್ಪರ್ಧಿ ಹಾಗೂ ಮಣಿಕುಟ್ಟನ್ ಕ್ಲೋಸ್ ಫ್ರೆಂಡ್ ಡಿಂಪಲ್ ಭಾಲ್ ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಡಿಲೀಟ್ ಮಾಡಿದ್ದಾರೆ.

  ಜೀ ಕನ್ನಡ ಹದಿನೈದನೇ ವರ್ಷದ ಮಹೋತ್ಸವ: ಭರ್ಜರಿ ಕಾರ್ಯಕ್ರಮ ಜೀ ಕನ್ನಡ ಹದಿನೈದನೇ ವರ್ಷದ ಮಹೋತ್ಸವ: ಭರ್ಜರಿ ಕಾರ್ಯಕ್ರಮ

  ಮಣಿಕುಟ್ಟನ್ ಬಿಗ್ ಬಾಸ್ ಟ್ರೋಪಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದ ಡಿಂಪಲ್ ಭಾಲ್, ''ಶುಭಾಶಯ ಮಣಿಕುಟ್ಟನ್, ಬಿಗ್ ಬಾಸ್ ವಿನ್ನರ್'' ಎಂದು ಕ್ಯಾಪ್ಷನ್ ಹಾಕಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಂತರ ಡಿಲೀಟ್ ಆಗಿದೆ. ಆದರೆ, ಫೋಟೋಗಳು ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

  ವರದಿಗಳ ಪ್ರಕಾರ, ಜುಲೈ 24 ರಂದು ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮ ಚಿತ್ರೀಕರಣ ಮಾಡಿದ್ದು, ಮಣಿಕುಟ್ಟನ್ ಅವರನ್ನು ವಿನ್ನರ್ ಆಗಿ ಪ್ರಕಟಿಸಲಾಗಿದೆ. ಸಾಯಿ ವಿಷ್ಣು ಮೊದಲ ರನ್ನರ್ ಅಪ್ ಆಗಿ ಘೋಷಿಸಲಾಗಿದೆ ಹಾಗೂ ಡಿಂಪಲ್ ಭಾಲ್ ಎರಡನೇ ರನ್ನರ್ ಅಪ್ ಆಗಿದ್ದಾರೆ ಎನ್ನಲಾಗಿದೆ.

  ಮಣಿಕುಟ್ಟನ್ ಮೂರನೇ ಆವೃತ್ತಿಯ ವಿಜಯಶಾಲಿಯಾಗಿ ಆಯ್ಕೆಯಾಗಿರುವುದು ಬಿಗ್ ಬಾಸ್ ವೀಕ್ಷಕರಿಗೆ ಆಶ್ಚರ್ಯವೇನು ಇಲ್ಲ. ಸೀಸನ್ ಮೂರು ವಿನ್ನರ್ ಮಣಿಕುಟ್ಟನ್ ಎಂದು ಅದಾಗಲೇ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಅದರಂತೆ ವಿನ್ನರ್ ಘೋಷಣೆಯಾಗಿದೆ.

  ಅಂದ್ಹಾಗೆ, ಬಿಗ್ ಬಾಸ್ ಮಲಯಾಳಂ ಸೀಸನ್ 3 ಲಾಕ್‌ಡೌನ್ ಹಿನ್ನೆಲೆ ಕೊನೆಯ ಹಂತದಲ್ಲಿ ಸ್ಥಗಿತಗೊಂಡಿತ್ತು. 97 ದಿನಗಳನ್ನು ಪೂರೈಸಿದ್ದ ಶೋ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ, ಕೊರೊನಾ ಪ್ರೊಟೋಕಾಲ್ ಅನ್ವಯ ಫಿನಾಲೆ ಚಿತ್ರೀಕರಣ ಮುಗಿಸಲಾಗಿದೆ.

  ಸದ್ಯದ ಮಾಹಿತಿ ಪ್ರಕಾರ, ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಿಗ್ ಬಾಸ್ ಮಲಯಾಳಂ ಫಿನಾಲೆ ಪ್ರಸಾರವಾಗಲಿದೆ.

  English summary
  Manikuttan wins Bigg Boss Malayalam season 3: his selfies with the trophy viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X