Gicchi giligili: ಮಂಜು ಪಾವಗಡಗೆ ವಯಸ್ಸಾಗೋಯ್ತಾ? ನೋ ನೋ ಎಂದು ಹಿಂಗಾಮಾಡೋದು..?
ಮಂಜು ಪಾವಗಡ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಕಾಮಿಡಿಗೆ ಫಿದಾ ಆಗದವರೇ ಇಲ್ಲ. ಬಿಗ್ ಬಾಸ್ ಸೀಸನ್ 8ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅದರಲ್ಲೂ ಬಿಗ್ ಬಾಸ್ ಮನೆಯೊಳಗೂ ಮನಸ್ಸುಗಳನ್ನು ಗೆದ್ದಿದ್ದರು. ಅಂದಿನಿಂದ ಕಲರ್ಸ್ ಕನ್ನಡದ ಜೊತೆಗೆ ಬಾಂಧವ್ಯ ಮುಂದುವರೆದಿದೆ. ಜರ್ನಿಯನ್ನು ಅದರೊಂದಿಗೆ ಮುಂದುವರೆಸಿದ್ದಾರೆ.
ಮಂಜು ಪಾವಗಡ ಒಂದಷ್ಟು ದಿನ ರಿಯಾಲಿಟಿ ಶೋಗಳಿಗೆ ಬಂದಿರಲಿಲ್ಲ. ಹೀಗಾಗಿ ಅಲ್ಲಿನ ಸ್ಪರ್ಧಿಗಳು, ಜಡ್ಜ್‌ಗಳೆಲ್ಲಾ ಮಿಸ್ ಮಾಡಿಕೊಂಡಿದ್ದರು. ಈ ಬಾರಿಯ 'ಗಿಚ್ಚಿ ಗಿಲಿಗಿಲಿ'ಯಲ್ಲಿ ಮಂಜು ಪಾವಗಡ ಬಂದಿದ್ದೇ ತಡ ಇಡೀ ಟೀಂ ಖುಷಿಯಾಗಿ ಬಿಟ್ಟಿದೆ. ಇವತ್ತು ಚಂದ್ರಪ್ರಭಾ ಹಾಗೂ ಮಂಜು ಪಾವಗಡ ನಡುವೆ ವಯಸ್ಸಿನ ವಿಚಾರಕ್ಕೆ ಚರ್ಚೆ ಶುರುವಾಗಿದೆ.

ಗಿಚ್ಚಿ ಗಿಲಿಗಿಲಿಯಲ್ಲಿ ಮಂಜು ಪಾವಗಡ
ಕಲರ್ಸ್ ಕನ್ನಡದಲ್ಲಿ ಬರುವ ರಿಯಾಲಿಟಿ ಶೋಗಳು ಸಖತ್ ಮನರಂಜನೆ ನೀಡುತ್ತವೆ. ಮನರಂಜನೆ ನೀಡುವುದರಲ್ಲಿ ಮೊದಲು. ಅದರಲ್ಲೂ 'ಗಿಚ್ಚಿಗಿಲಿಗಿಲಿ'ಯಲ್ಲಿ ಕಾಮಿಡಿಗೇನು ಕಡಿಮೆ ಇಲ್ಲ. ಈ ಸೀಸನ್‌ನಲ್ಲಿ ಇನ್ನಷ್ಟು ಜನ ಸೇರಿಕೊಂಡಿದ್ದಾರೆ. ಬಿಗ್ ಬಾಸ್‌ನಿಂದ ಬಂದಂತ ತುಕಾಲಿ ಸಂತೋಷ್, ಮಾನಸ, ಈಶಾನಿ, ಡ್ರೋನ್ ಪ್ರತಾಪ್ ಕೂಡ ಬಂದಿದ್ದಾರೆ. ಅದಕ್ಕೂ ಮುಖ್ಯವಾಗಿ ಮಂಜು ಪಾವಗಡ ಬಂದಿದ್ದಾರೆ. ಅದರ ಜೊತೆಗೆ ಚಂದ್ರಪ್ರಭಾ ಸೇರಿ ಹೊಟ್ಟೆ ಉಣ್ಣಾಗಿಸುವಷ್ಟು ನಗು ತರಿಸಿದ್ದಾರೆ.
ಮಂಜು ಪಾವಗಡ ಕಾಮಿಡಿಗೆ ನಗು
ಇದೊಂದು ಕಾಮಿಡಿ ಶೋ. ನೋಡುತ್ತಿದ್ದವರಿಗೆ ನಗು ಉಕ್ಕಿ ಉಕ್ಕಿ ಬರದೇ ಇರದು. ಆದರೆ ನಗುವಿನ ಜೊತೆಗೆ ಒಂದಿಷ್ಟು ಜೀವನದ ಪಾಠವನ್ನು ತಿಳಿಸುತ್ತಾರೆ. ಈ ವೀಕೆಂಡ್ ಚಂದ್ರಪ್ರಭಾ ಹಾಗೂ ಮಂಜು ಪಾವಗಡ ಸ್ಪೆಷಲ್ ಸ್ಕಿಟ್ ಮಾಡಿದ್ದಾರೆ. ಇಬ್ಬರು ವಯಸ್ಸಾದವರಂತೆ ವೇಷ ಹಾಕಿ, ಒಂದೊಳ್ಳೆ ಮೆಸೇಜ್ ನೀಡಿದ್ದಾರೆ. ಸ್ಕಿಟ್ ಮುಗಿದ ಮೇಲೆ ರಿಯಲ್ ಆಗಿ ಯಾರಿಗೆ, ಹೆಚ್ಚು ಬಲ ವಯಸ್ಸಾಗಿದೆ ಎಂಬ ಪ್ರಶ್ನೆಗೆ ಚರ್ಚೆ ಶುರುವಾಗಿದೆ.
ಸ್ಕಿಟ್ ಮುಗಿದ ಮೇಲೆ ವಯಸ್ಸಿನ ಚರ್ಚೆ
ಆಂಕರ್ ನಿರಂಜನ್ ಅವರನ್ನು ಕೇಳಬೇಕಾ? ಮಾತಲ್ಲೇ ಎಲ್ಲರ ಕಾಲು ಎಳೆಯುತ್ತಾರೆ. ಈಗ ವೇದಿಕೆ ಮೇಲೂ ಚಂದ್ರಪ್ರಭಾ ಹಾಗೂ ಮಂಜು ಪಾವಗಡ ಅವರ ಬಗ್ಗೆ ತಮಾಷೆ ಮಾಡಿದ್ದಾರೆ. ಮೊದಲೇ ವಯಸ್ಸಾದವರಂತೆ ವೇಷ ಹಾಕಿದ್ದರು. ಹೀಗಾಗಿ ಇಬ್ಬರಲ್ಲಿ ಯಾರಿಗೆ ಹೆಚ್ಚು ವಯಸ್ಸಾಗಿದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಜಡ್ಜಸ್ ಬಹಳ ಯೋಚನೆ ಮಾಡಿ, ಮಂಜುಗೆ ಆಗಿರಬಹುದು ಎಂದಿದ್ದಾರೆ. ಮಂಜು ಕಡೆ ಸಾಧುಕೋಕಿಲಾ ಕೈ ಮಾಡಿದರೆ, ಶೃತಿ ಹಾಗೂ ಕೋಮಲ್ ನ್ಯೂಟ್ರಲ್ ಆಗಿದ್ದಾರೆ.

ಮಂಜು ಒಪ್ಪಿಕೊಂಡರಾ..?
ಇದು ಬರೀ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ ಎನಿಸಿ, ನಿರಂಜನ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಇಬ್ಬರು ಬಸ್ಕಿ ಹೊಡೆಯಬೇಕು. ಯಾರೂ ಬೇಗ ಸುಸ್ತಾಗುತ್ತಾರೋ ಅವರಿಗೆ ಹೆಚ್ಚು ವಯಸ್ಸಾಗಿದೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ ಎಂದರು. ಇಬ್ಬರು ಬಸ್ಕಿ ಹೊಡೆಯುವುದಕ್ಕೆ ಶುರು ಮಾಡಿದರು. ಆದರೆ ಮಂಜು ಪಾವಗಡ 50 ಬರುವಷ್ಟರಲ್ಲಿ ಸುಸ್ತಾಗಿ ಬಿಟ್ಟರು. ಬಸ್ಕಿ ಹೊಡೆಯುವುದನ್ನೇ ನಿಲ್ಲಿಸಿ ಬಿಟ್ಟರು. ಆದರೆ ಚಂದ್ರಪ್ರಭಾರಿಗೆ ತಾನೂ ಚಿಕ್ಕವರು ಎಂದೇ ಎನಿಸಿಕೊಳ್ಳಬೇಕು. ಹೀಗಾಗಿ ಬಸ್ಕಿಯನ್ನು ಮುಂದುರೆಸಿದ್ದರು. ಕಡೆಗೂ 60 ಬಸ್ಕಿ ಹೊಡೆದು ವಯಸ್ಸಲ್ಲಿ ಚಿಕ್ಕವರು ಎಂದೆನಿಸಿಕೊಂಡರು. ನಿರಂಜನ್ ಅವರಿಂದ ಹೊಗಳಿಕೆ ಪಡೆದುಕೊಂಡರು.


Click it and Unblock the Notifications











