25 ಲಕ್ಷದ ಪ್ರಶ್ನೆ ನೋಡಿ ಆಟ ಕೈಬಿಟ್ಟ ಮಂಜುಳಾ: ಯಾವುದು ಆ ಪ್ರಶ್ನೆ.?
Recommended Video

ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿಯಲ್ಲಿ ಮತ್ತೊಂದು ರೋಚಕ ಆಟ ಅಂತ್ಯವಾಗಿದೆ. ಮಂಜುಳಾ ಎಂಬ ಸ್ಪರ್ಧಿ ಹದಿಮೂರನೇ ಪ್ರಶ್ನೆವರೆಗೂ ಆಟವನ್ನ ಆಡಿ ಕೊನೆಯಲ್ಲಿ ಗೇಮ್ ಕ್ವಿಟ್ ಮಾಡಿದರು.
ಮೂರು ಲೈಫ್ ಲೈನ್ ಸಹಾಯದಿಂದ ಹನ್ನೆರೆಡು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದ ಮಂಜುಳಾ ದೊಡ್ಡ ಮೊತ್ತವನ್ನ ಬಹುಮಾನವನ್ನಾಗಿ ಪಡೆದುಕೊಂಡು ಹೋದರು.
ಅಷ್ಟಕ್ಕೂ, 25 ಲಕ್ಷದ ರೂಪಾಯಿ ಪ್ರಶ್ನೆ ನೋಡಿದ ಮಂಜುಳಾ ಅವರು ಆಟದಿಂದ ಹೊರನಡೆದಿದ್ದೇಕೆ.? ಉತ್ತರ ಗೊತ್ತಿದೆ ಎಂಬ ನಂಬಿಕೆಯಲ್ಲಿದ್ದ ಮಂಜುಳಾ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ್ದೇಕೆ.? ಅಷ್ಟಕ್ಕೂ 25 ಲಕ್ಷದ ರೂಪಾಯಿ ಪ್ರಶ್ನೆ ಯಾವುದು.? ಮುಂದೆ ಓದಿ.....

25 ಲಕ್ಷದ ಪ್ರಶ್ನೆ
ಮಹಿಳಾ ಸಬಲೀಕರಣಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಮಹಿಳೆ ಮತ್ತು ಪುರುಷರಿಬ್ಬರಿಗೂ ಕೊಡುವ ಸ್ತ್ರೀಶಕ್ತಿ ಪುರಸ್ಕಾರ ಯಾವುದು.?
A ರಾಣಿ ಲಕ್ಷ್ಮಿಬಾಯಿ ಪ್ರಶಸ್ತಿ
B ಮಾತಾ ಜೀಜಾಬಾಯಿ ಪ್ರಶಸ್ತಿ
C ರಾಣಿ ರುದ್ರಮ್ಮದೇವಿ ಪ್ರಶಸ್ತಿ
D ದೇವಿ ಅಹಿಲ್ಯಾಬಾಯಿ ಹೋಲ್ಕರ್ ಪ್ರಶಸ್ತಿ
'ಕನ್ನಡದ ಕೋಟ್ಯಧಿಪತಿ'ಯಲ್ಲಿ ಅತಿ ಹೆಚ್ಚು ಹಣ ಗೆದ್ದಿರುವ 'ಸ್ಟಾರ್' ಯಾರು.?

ಮನೆಯವರು ಸೂಚನೆ ಕೊಟ್ಟಿದ್ದೇನು.?
ಈ ಪ್ರಶ್ನೆಯನ್ನ ನೋಡಿ ತೀರಾ ಆಲೋಚನೆಗೆ ಒಳಗಾದ ಮಂಜುಳಾ ಅವರು ಯಾವುದು ಉತ್ತರ.? ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ಇನ್ನೇನು ಉತ್ತರವನ್ನ ಗೆಸ್ ಮಾಡೋಣ ಎಂಬ ನಿರ್ಧರಕ್ಕೆ ಬಂದಿದ್ದರು. ಆದ್ರೆ, ಅಷ್ಟರಲ್ಲಿ ತಮ್ಮ ಮನೆಯವರ ಬಳಿಯಿದ್ದ ವಿಶೇಷ ಅಧಿಕಾರದಿಂದ ಅದೇನೋ ಕೋಡ್ ರೆಡ್ ಅಧಿಕಾರದಿಂದ ಸೂಚನೆ ನೀಡಿದರು. ನಂತರ ಅದನ್ನ ಪರಿಗಣಿಸಿದ ಮಂಜುಳಾ ಅವರು ಇಲ್ಲಿಗೆ ಆಟ ಸಾಕು ಎಂಬ ನಿರ್ಧಾರ ಮಾಡಿ ಆಟವನ್ನ ಕ್ವಿಟ್ ಆದರು.

ಒಳ್ಳೆಯ ನಿರ್ಧಾರ ತೆಗೆದುಕೊಂಡ ಸ್ಪರ್ಧಿ
ಒಂದು ವೇಳೆ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸರಿ ಉತ್ತರ ಕೊಟ್ಟಿದ್ದರೇ 25 ಲಕ್ಷ ಹಾಗೂ ತಪ್ಪು ಉತ್ತರ ಕೊಟ್ಟಿದ್ದರೇ ಕೇವಲ 3.20 ಲಕ್ಷ ಪಡೆದುಕೊಳ್ಳುತ್ತಿದ್ದರು. ಆದ್ರೆ, ಆಟವನ್ನ ಕ್ವಿಟ್ ಮಾಡಿದ ಕಾರಣ ಹನ್ನೆರೆಡು ಪ್ರಶ್ನೆಗೆ ಉತ್ತರ ಕೊಟ್ಟಿದ್ದ ಮಂಜುಳಾ ಅವರಿಗೆ 12.5 ಲಕ್ಷ ಲಭಿಸಿತು. ಆಟ ಕ್ವಿಟ್ ಬಳಿಕ ಉತ್ತರ ಗೆಸ್ ಮಾಡಿದ್ದ ಮಂಜುಳಾ ಅವರ ಉತ್ತರ ಕೂಡ ತಪ್ಪಾಗಿತ್ತು.

ಉತ್ತರ ಯಾವುದು ಗೊತ್ತಾ.?
ಮಹಿಳಾ ಸಬಲೀಕರಣಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಮಹಿಳೆ ಮತ್ತು ಪುರುಷರಿಬ್ಬರಿಗೂ ಕೊಡುವ ಸ್ತ್ರೀಶಕ್ತಿ ಪುರಸ್ಕಾರ ಯಾವುದು.?
A ರಾಣಿ ಲಕ್ಷ್ಮಿಬಾಯಿ ಪ್ರಶಸ್ತಿ
B ಮಾತಾ ಜೀಜಾಬಾಯಿ ಪ್ರಶಸ್ತಿ
C ರಾಣಿ ರುದ್ರಮ್ಮದೇವಿ ಪ್ರಶಸ್ತಿ
D ದೇವಿ ಅಹಿಲ್ಯಾಬಾಯಿ ಹೋಲ್ಕರ್ ಪ್ರಶಸ್ತಿ
ಸರಿಯಾದ ಉತ್ತರ: C ರಾಣಿ ರುದ್ರಮ್ಮದೇವಿ ಪ್ರಶಸ್ತಿ


Click it and Unblock the Notifications











