'ನಾಗಿಣಿ' ಧಾರಾವಾಹಿಯ ದೀಕ್ಷಿತ್ ಮೇಲೆ ಹಲ್ಲೆ ಮಾಡಿದವರು ಸಿಕ್ಕಿ ಬಿದ್ದರು!

By Naveen

Recommended Video

ನಾಗಿಣಿ ಧಾರಾವಾಹಿಯ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ ಮಾಡಿದವರು ಅರೆಸ್ಟ್ | Filmibeat Kannada

'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ ಆಗಿತ್ತು. ಡಿಸೆಂಬರ್ 7 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗ ವಿಜಯ ನಗರ ಪೊಲೀಸರು ಬಂಧಿಸಿದ್ದಾರೆ.

ಮೂವರು ಆರೋಪಿಗಳಾದ ಶ್ರೀಕಾಂತ್, ಪವನ್ ಮತ್ತು ಮಂಜುನಾಥ್ ಡಿಸೆಂಬರ್ 7 ರಾತ್ರಿ ನಟ ದೀಕ್ಷಿತ್ ಮೇಲೆ ಹಲ್ಲೆ ಮಾಡಿದ್ದರು. ಪಲ್ಸರ್​ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೊದಲು ದೀಕ್ಷಿತ್ ಬಳಿ ಸೆಲ್ಫಿ ಕೇಳಿದ್ದಾರೆ. ಅದನ್ನು ನಿರಾಕರಿಸಿದಕ್ಕೆ ಏಕಾಏಕಿ ಮೂವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್​ ಪುಡಿ ಪುಡಿ ಮಾಡಿದ್ದರು. ಜೊತೆಗೆ ದೀಕ್ಷಿತ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು. ಆದರೆ ಈಗ ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಮೂರು ಜನ ಆರೋಪಿಗಳನ್ನು ಬಂದಿಸಿದ್ದಾರೆ. ಮುಂದೆ ಓದಿ..

ವಿಜಯ ನಗರ ಪೊಲೀಸರು

ವಿಜಯ ನಗರ ಪೊಲೀಸರು

ದೀಕ್ಷಿತ್ ಶೆಟ್ಟಿ ಹಲ್ಲೆಯ ವಿಚಾರಣೆ ನಡೆಸಿದ ವಿಜಯ ನಗರ ಪೊಲೀಸರು ಇದೀಗ ಆರೋಪಿಗಳಾದ ಶ್ರೀಕಾಂತ್, ಪವನ್ ಮತ್ತು ಮಂಜುನಾಥ್ ನನ್ನು ಬಂಧಿಸಿದ್ದಾರೆ.

ದೀಕ್ಷಿತ್ ಶೆಟ್ಟಿ ಸ್ಪಷ್ಟನೆ

ದೀಕ್ಷಿತ್ ಶೆಟ್ಟಿ ಸ್ಪಷ್ಟನೆ

''ಅವರು ಕುಡಿದು ನನ್ನ ಮೇಲೆ ಹಲ್ಲೆ ಮಾಡಿದ್ದರು. ಅಂದೇ ಪೊಲೀಸರಿಗೆ ದೂರು ನೀಡಿದ್ದೆ. ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಬೇರೆ ಯಾವ ಕಾರಣ ಇಲ್ಲ. ಸೆಲ್ಫಿ ಕೊಡಲು ನಿರಾಕರಿಸಿದ್ದಾಕ್ಕೆ ಈ ರೀತಿ ಮಾಡಿದ್ದಾರೆ. ನಾನು ಕೂಡ ಆರೋಪಿಗಳ ವಿಚಾರಣೆ ವೇಳೆ ಪೊಲೀಸ್ ಠಾಣೆಗೆ ಹೋಗಿದ್ದೇ. ಮುಂದೆ ಕೋರ್ಟ್ ಗೆ ಹೋಗಬೇಕು.'' ಎಂದು ಆರೋಪಿಗಳ ಬಂಧನ ನಂತರ ನಟ ದೀಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆಯ ವಿವರ

ಘಟನೆಯ ವಿವರ

ನಟ ದೀಕ್ಷಿತ್ ಶೆಟ್ಟಿ ಡಿಸೆಂಬರ್ 7ರ ತಡರಾತ್ರಿ ವಿಜಯನಗರದ ಮಾರುತಿ ಮಂದಿರದ ಬಳಿ ತಮ್ಮ ಕಾರ್ ನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪಲ್ಸರ್​ ಬೈಕ್​ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮೊದಲು ದೀಕ್ಷಿತ್ ಬಳಿ ಸೆಲ್ಫಿ ಕೇಳಿದ್ದಾರೆ. ಅದನ್ನು ನಿರಾಕರಿಸಿದಕ್ಕೆ ಏಕಾಏಕಿ ಮೂವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್​ ಪುಡಿ ಪುಡಿ ಮಾಡಿದ್ದಾರೆ.

ದೀಕ್ಷಿತ್ ಶೆಟ್ಟಿ ಬಗ್ಗೆ

ದೀಕ್ಷಿತ್ ಶೆಟ್ಟಿ ಬಗ್ಗೆ

ನಟ ದೀಕ್ಷಿತ್ ಶೆಟ್ಟಿ 'ನಾಗಿಣಿ' ಧಾರಾವಾಹಿಯ ಲೀಡ್ ರೋಲ್ ಆಗಿರುವ ಅರ್ಜುನ್ ಪಾತ್ರವನ್ನು ಮಾಡುತ್ತಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಸಹ ನಟಿ ದೀಪಿಕಾ ದಾಸ್ ರೊಂದಿಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ವಿಜೇತರಾಗಿದ್ದಾರೆ.

More from Filmibeat

English summary
Manjunath, Srikanth and Pavan has been arrested by vijayanagara police based on the complaint filed by Zee Kannada channel's Nagini serial actor Deekshith Shetty. They have been accused for attacking Deekshith in Vijaya nagara, Bengaluru on December 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X