'ಕೋಟ್ಯಧಿಪತಿ'ಯ 6 ಲಕ್ಷದ ಪ್ರಶ್ನೆಯಲ್ಲಿ ಎಡವಿದ ಮಂಜುನಾಥ್, ಯಾವುದು ಆ ಪ್ರಶ್ನೆ.?

By Bharath Kumar

Recommended Video

Kannadada Kotyadhipathi season 3 Episode 2 | FIlmibeat Kannada

'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಮೊದಲ ಸ್ಪರ್ಧಿ 'ಲಕ್ಷ್ಮಿ ಮೆಂಡಿಗೇರಿ' ಯಾವುದೇ ಬಹುಮಾನ ಗೆಲ್ಲದೇ ನಿರಾಸೆ ಮೂಡಿಸಿದ್ದರು. ಆದ್ರೆ, ಎರಡನೇ ಸ್ಪರ್ಧಿ ಮಂಜುನಾಥ್ ಅವರು 3 ಲಕ್ಷದ 20 ಸಾವಿರ ಬಹುಮಾನ ಗೆದ್ದುಕೊಂಡಿದ್ದಾರೆ.

ಎರಡನೇ ದಿನ ಆಟ ಮುಂದುವರೆಸಿದ್ದ ಮಂಜುನಾಥ್ 10 ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟರು. ಬಟ್, ಹನ್ನೊಂದನೇ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆಗಗಾಲೇ ಎರಡು ಲೈಫ್ ಲೈನ್ ಬಳಕೆಯಾಗಿತ್ತು. ಕೊನೆಯದಾಗಿ ಇನ್ನು ಒಂದು ಲೈಫ್ ಲೈನ್ ಉಳಿದುಕೊಂಡಿತ್ತು.

ಆದ್ರೆ, ಸ್ವಲ್ಪ ಕಷ್ಟಕರವಾಗಿದ್ದ ಈ ಪ್ರಶ್ನೆಗೆ 'ಲೈಫ್ ಲೈನ್' ಇದ್ದರೂ ಸರಿ ಉತ್ತರ ನೀಡಲು ಆಗಲಿಲ್ಲ. ಅಂದ್ಹಾಗೆ, ಇದು 6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆಯಾಗಿತ್ತು. ಅಷ್ಟಕ್ಕೂ, ಆ ಪ್ರಶ್ನೆ ಯಾವುದು.? ಮುಂದೆ ಓದಿ....

6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆ

6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆ

1949ರಲ್ಲಿ ರಾಷ್ಟ್ರೀಕರಣಗೊಳ್ಳುವ ಮೊದಲು, ಆರ್ ಬಿ ಐ, ಭಾರತ ಹೊರತು ಪಡಿಸಿ ಬೇರೆ ಯಾವ ಎರಡು ದೇಶಗಳಿಗೆ ಕೇಂದ್ರ ಬ್ಯಾಂಕ್ ಆಗೊ ಸೇವೆ ಸಲ್ಲಿಸಿದೆ.?

A ಶ್ರೀಲಂಕಾ ಮತ್ತು ಪಾಕಿಸ್ತಾನ
B ಶ್ರೀಲಿಂಕಾ ಮತ್ತು ಕಾಲನಿ ಆಫ್ ಏಡನ್
C ಯೆಮನ್ ಮತ್ತು ಮಯನ್ಮಾರ್
D ಪಾಕಿಸ್ತಾನ ಮತ್ತು ಮಯನ್ಮಾರ್

ಸರಿಯಾದ ಉತ್ತರ ಇದು

ಸರಿಯಾದ ಉತ್ತರ ಇದು

ಮಂಜುನಾಥ್ ಅವರ ಬಳಿ ಒಂದು ಲೈಫ್ ಲೈನ್ ಬಾಕಿಯಿತ್ತು. ಆದ್ರೆ, ಅದನ್ನ ಬಳಸದೆ ತಪ್ಪು ಉತ್ತರ ಕೊಟ್ಟರು.

ಮಂಜುನಾಥ್ ಕೊಟ್ಟ ಉತ್ತರ: B ಶ್ರೀಲಿಂಕಾ ಮತ್ತು ಕಾಲನಿ ಆಫ್ ಏಡನ್
ಸರಿಯಾದ ಉತ್ತರ : D ಪಾಕಿಸ್ತಾನ ಮತ್ತು ಮಯನ್ಮಾರ್ ಆಗಿತ್ತು

ಮೊದಲ ಚೆಕ್ ಪಡೆದ ಸ್ಪರ್ಧಿ

ಮೊದಲ ಚೆಕ್ ಪಡೆದ ಸ್ಪರ್ಧಿ

ಹನ್ನೊಂದನೇ ಪ್ರಶ್ನೆಗೆ ಉತ್ತರಿಸದೇ ಆಟದಿಂದ ಹಿಂದೆ ಸರಿದ ಮಂಜುನಾಥ್ ಅವರಿಗೆ ನಿರೂಪಕ ರಮೇಶ್ ಅರವಿಂದ್ ಈ ಆವೃತ್ತಿಯ ಮೊದಲ ಚೆಕ್ ವಿತರಿಸಿದರು. ಹತ್ತು ಪ್ರಶ್ನೆಗೆ ಸರಿ ಉತ್ತರ ನೀಡಿದ್ದಕ್ಕಾಗಿ 3 ಲಕ್ಷದ 20 ಸಾವಿರ ಗೆದ್ದುಕೊಂಡರು.

ಫಾಸ್ಟೆಸ್ಟ್ ಫಿಂಗರ್ ಫಸ್ಟ್

ಫಾಸ್ಟೆಸ್ಟ್ ಫಿಂಗರ್ ಫಸ್ಟ್

ಮಂಜುನಾಥ್ ನಂತರ ಇನ್ನೊಬ್ಬ ಸ್ಪರ್ಧಿಯನ್ನ ಆಯ್ಕೆ ಮಾಡಲು ಮೂರನೇ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆ ಕೇಳಲಾಯಿತು. ಆ ಪ್ರಶ್ನೆ: ''ಸಣ್ಣದರಿಂದ ಆರಂಭಿಸಿ, ಈ ಸೌಂದರ್ಯ ಸ್ಪರ್ಧೆಗಳ ಹೆಸರುಗಳನ್ನು ಅವುಗಳಲ್ಲಿರುವ ಸ್ಥಳಗಳ ವಿಸ್ತೀರ್ಣದ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸಿ.?''

A ಮಿಸ್ ಯೂನಿವರ್ಸ್
B ಮಿಸ್ ವರ್ಲ್ಡ್
C ಮಿಸ್ ಇಂಡಿಯಾ
D ಮಿಸ್ ಬೆಂಗಳೂರು

ಸರಿ ಉತ್ತರ ಕೊಟ್ಟವರು

ಸರಿ ಉತ್ತರ ಕೊಟ್ಟವರು

ಈ ಪ್ರಶ್ನೆಗೆ ವೇಗವಾಗಿ ಮತ್ತು ಸರಿಯಾಗಿ ಉತ್ತರ ಕೊಟ್ಟವರು ಹರ್ಷಿತ್.

ಸರಿಯಾದ ಉತ್ತರ:
D ಮಿಸ್ ಬೆಂಗಳೂರು
C ಮಿಸ್ ಇಂಡಿಯಾ
B ಮಿಸ್ ವರ್ಲ್ಡ್
A ಮಿಸ್ ಯೂನಿವರ್ಸ್
ನಾಲ್ಕು ಪ್ರಶ್ನೆಗೆ ಉತ್ತರ ಕೊಟ್ಟಿರುವ ಹರ್ಷಿತ್ ಆಟ ಮುಂದುವರೆಸಿದ್ದಾರೆ.

More from Filmibeat

English summary
'Kannadada Kotyadhipathi season 3' second contestant Manjunath has won 6 lakh 20 thousand rupees in show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X