ಅನಸೂಯಾ ಜಾಗಕ್ಕೆ ಹೊಸ ಆಂಕರ್: ಪಲ್ಲಕ್ಕಿ ಏರಿ ಬಂದ ಸೌಂದರ್ಯವತಿ ಯಾರು?
ತೆಲುಗು ಕಿರುತೆರೆಯ ಜಬರ್ದಸ್ತ್ ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನಸೂಯಾ ಭಾರಧ್ವಜ್. ಇತ್ತೀಚೆಗೆ ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಸದ್ಯ ಆಕೆಯ ಜಾಗಕ್ಕೆ ಹೊಸ ನಿರೂಪಕಿಯ ಆಗಮನವಾಗಿದ್ದು, ಆಕೆ ಯಾರು ಎನ್ನುವ ಚರ್ಚೆ ಶುರುವಾಗಿದೆ
ಬಹಳ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಿರುವ ತೆಲುಗು ಈ ಟಿವಿಯ ಹಾಸ್ಯ ಕಾರ್ಯಕ್ರಮ 'ಜಬರ್ದಸ್ತ್'. ಇದೇ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಕನ್ನಡದಲ್ಲಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಶುರುವಾಯಿತು. ತೆಲುಗಿನಲ್ಲಿ ಗುರುವಾರ ಜಬರ್ದಸ್ತ್, ಶುಕ್ರವಾರ ಎಕ್ಸ್ಟ್ರಾ ಜಬರ್ದಸ್ತ್ ಆಗಿ ಎರಡು ಸಂಚಿಕೆಗಳು ಹಲವು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದೆ. ಈ ಕಾರ್ಯಕ್ರಮದಿಂದಲೂ ಅನಸೂಯಾ ನಿರೂಪಕಿಯಾಗಿ ಸಕ್ಸಸ್ ಕಂಡರು.
ನಿರೂಪಕಿ ಅನಸೂಯಾ ಎಂಟ್ರಿ ಡ್ಯಾನ್ಸ್ ಮತ್ತು ಆಕೆಯ ಚೆಲುವನ್ನು ನೋಡುವುದಕ್ಕಂತಲೇ ಶೋ ನೋಡುವವರು ಇದ್ದಾರೆ. ಕರ್ನಾಟಕದ ಕೆಲವರು ಈ ಕಾರ್ಯಕ್ರಮದ ಅಭಿಮಾನಿಗಳಾಗಿದ್ದಾರೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಕಾಮಿಡಿ ಶೋನಿಂದ ಹಲವರು ಈಗಾಗಲೇ ಹೊರ ಬಂದು ಬೇರೆ ವಾಹಿನಿ ಕಾರ್ಯಕ್ರಮಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ತೀರ್ಪುಗಾರರ ಸ್ಥಾನದಲ್ಲಿದ್ದ ನಟ ನಾಗಬಾಬು, ನಟಿ ರೋಜಾ ಕೂಡ ಹೊರ ಬಂದರು. ಕಳೆದ ವಾರ ನಿರೂಪಕಿ ಅನಸೂಯ ಸಹ ಕಾರ್ಯಕ್ರಮಕ್ಕೆ ಗುಡ್‌ಬೈ ಹೇಳಿದ ಮೇಲೆ ಈ ವಾರದಿಂದ ಹೊಸ ನಿರೂಪಕಿಯ ಆಗಮನವಾಗಿದೆ.

ಅನಸೂಯ 'ಜಬರ್ದಸ್ತ್' ಬಿಡಲು ಕಾರಣ
ಕೆಲ ವರ್ಷಗಳ ಹಿಂದೆ ನಿರೂಪಕಿಯಾಗಿ ಕರಿಯರ್ ಶುರು ಮಾಡಿದ ಅನಸೂಯ ಈಗ ಸಿನಿಮಾ ನಟಿಯಾಗಿಯೂ ಗುರ್ತಿಸಿಕೊಂಡಿದ್ದಾರೆ. 'ಜಬರ್ದಸ್ತ್' ಶೋ ಆಕೆಗೆ ನೇಮು, ಫೇಮು, ಲೈಫ್ ಕೊಡ್ತು. ಆದರೆ ಅಗ್ರಿಮೆಂಟ್ ಮುಗಿದ ಕಾರಣ ಬೇರೆ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಕಾಲ್‌ಶೀಟ್ ಇಲ್ಲ ಅಂತ ಹೇಳಿ ಈ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

ಕೊನೆ ಸಂಚಿಕೆಯಲ್ಲಿ ಕಣ್ಣೀರು
ಇಷ್ಟು ವರ್ಷಗಳಿಂದ ಶೋ ನಡೆಸಿಕೊಡುತ್ತಿದ್ದ ನಿರೂಪಕಿ ಅನಸೂಯಗೆ ಅಲ್ಲಿ ಕೆಲಸ ಮಾಡುವ ಎಲ್ಲರೊಟ್ಟಿಗೂ ಆತ್ಮೀಯ ಒಡನಾಟ ಇತ್ತು. "ನಮ್ಮ ಶೋಗಾಗಿ ತಿಂಗಳಿಗೆ 4 ದಿನ ಕಾಲ್‌ಶೀಟ್ ಕೊಡೋದಕ್ಕೆ ಸಾಧ್ಯವಾಗುದಿಲ್ಲವಾ ಎಂದು ಸ್ಪರ್ಧಿಗಳು ಕೇಳಿದ್ದರು". ಕೊನೆ ಸಂಚಿಕೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಕಣ್ಣೀರು ಹಾಕುತ್ತಾ'ಜಬರ್ದಸ್ತ್' ಶೋಗೆ ವಿದಾಯ ಹೇಳಿದ್ದರು.

ಮಂಜುಶಾ ಹೊಸ ನಿರೂಪಕಿ?
ಇದೇ ಗುರುವಾರ 'ಜಬರ್ದಸ್ತ್' ಮುಂದಿನ ಸಂಚಿಕೆ ಪ್ರಸಾರವಾಗಲಿದ್ದು, ಈಗಾಗಲೇ ಪ್ರೋಮೊ ಸಹ ಬಿಡುಗಡೆಯಾಗಿದೆ. ಹೊಸ ನಿರೂಪಕಿಯನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಬರಲಾಗಿದ್ದು, ಆಕೆಯ ಮುಖವನ್ನು ತೋರಿಸದೇ ಕುತೂಹಲ ಮೂಡಿಸಲಾಗಿದೆ. ಕೆಲವರು ಆಕೆ ಬೇರೆ ಯಾರು ಅಲ್ಲ ನಿರೂಪಕಿ ಮಂಜುಶಾ ಎಂದು ಗೆಸ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಎಲ್ಲರ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

ಸಿನಿಮಾ ನಟಿಯಾಗಿ ಗಮನ ಸೆಳೆದ ಅನಸೂಯಾ
ನಿರೂಪಕಿಯಾಗಿ ವೀಕ್ಷಕರ ಗಮನ ಸೆಳೆದ ಅನುಸೂಯಾ ಭಾರಧ್ವಜ್ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. 'ರಂಗಸ್ಥಳಂ' ಚಿತ್ರದ ರಂಗಮ್ಮ ಹಾಗೂ 'ಪುಷ್ಪ' ಚಿತ್ರದ ದಾಕ್ಷಾಯಿಣಿ ಪಾತ್ರಗಳು ಒಳ್ಳೆ ಹೆಸರ ತಂದುಕೊಟ್ಟಿದೆ. ಇನ್ನು ಗ್ಲಾಮರಸ್ ಫೋಟೊಶೂಟ್‌ನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಅನಸೂಯ ಸಖತ್ ಸೌಂಡ್ ಮಾಡುತ್ತಿರುತ್ತಾರೆ.


Click it and Unblock the Notifications











