ಮಾನ್ವಿತಾ ರಾತ್ರಿ ಮಲಗುವ ಮುನ್ನ ಲಾಸ್ಟ್ ಮೆಸೇಜ್ ಮಾಡುವುದು ಇವರಿಗೇನೆ

By Naveen

Recommended Video

ಮಾನ್ವಿತಾ ಹರೀಶ್ ರಾತ್ರಿ ಮಲಗೋ ಮುಂಚೆ ಈ ಕೆಲಸ ಮಾಡೇ ಮಾಡ್ತಾರಂತೆ | Filmibeat Kannada

ಸಾಮಾನ್ಯವಾಗಿ ನಾವು, ನೀವು ಎಲ್ಲರೂ ರಾತ್ರಿ ಮಲಗುವ ಮುನ್ನ ಒಮ್ಮೆ ಮೊಬೈಲ್ ನೋಡುತ್ತೇವೆ. ನಮ್ಮ ಸ್ನೇಹಿತರಿಗೋ, ಪ್ರೀತಿ ಪಾತ್ರರಿಗೋ ಒಂದು ಗುಡ್ ನೈಟ್ ಸಂದೇಶ ಕಳುಹಿಸುತ್ತೇವೆ. ಅದೇ ರೀತಿ ನಟಿ ಮಾನ್ವಿತಾ ಹರೀಶ್ ದಿನ ರಾತ್ರಿ ಮಲಗುವ ಮುನ್ನ ಒಬ್ಬರಿಗೆ ಮೆಸೇಜ್ ಮಾಡುತ್ತಾರಂತೆ.

ಮಾನ್ವಿತಾ ಯಾವ ಹುಡುಗನಿಗೆ ಅಥವಾ ಯಾವ ನಟನಿಗೆ ಮೆಸೇಜ್ ಮಾಡುತ್ತಾರೆ ಎನ್ನುವ ದೊಡ್ಡ ಕುತೂಹಲ ಇಟ್ಟುಕೊಳ್ಳಬೇಡಿ. ಯಾಕಂದ್ರೆ ಮಾನ್ವಿತಾ ದಿನ ರಾತ್ರಿ ಕನ್ನಡದ ನಟಿ ಒಬ್ಬರಿಗೆ ಲಾಸ್ಟ್ ಮೆಸೇಜ್ ಮಾಡುತ್ತಾರೆ. ಅದು ಬೇರೆ ಯಾರು ಅಲ್ಲ 'ಮುಗುಳುನಗೆ'ಯ ಚೆಲುವೆ ಆಶಿಕಾ ರಂಗನಾಥ್ ಅವರಿಗೆ. ನಟಿ ಆಶಿಕಾ ರಂಗನಾಥ್ ಮತ್ತು ಮಾನ್ವಿತಾ ತುಂಬ ಒಳ್ಳೆಯ ಗೆಳತಿಯರಾಗಿದ್ದು, ರಾತ್ರಿ ಮಲಗುವ ಮುನ್ನ ಅವರಿಗೆ ಒಂದು ಸಂದೇಶ ಕಳುಹಿಸುತ್ತೇನೆ ಎಂದಿದ್ದಾರೆ ಮಾನ್ವಿತಾ.

Manvitha Harish spoke about Ashika Ranganath in No1 yari with Shivanna program

ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟಿ ಮಾನ್ವಿತಾ ಹರೀಶ್, ನಟ ಧನಂಜಯ್ ಹಾಗೂ ವಸಿಷ್ಟ ಮೂರು ಜನ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಶಿವಣ್ಣನ ಎಲ್ಲ ಪ್ರಶ್ನೆಗಳಿಗೆ ಮಾನ್ವಿತಾ ಕೂಲ್ ಆಗಿ ಉತ್ತರಿಸಿದರು.

ಇದೇ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ''ನೀವು ಯಾವ ನಟನನ್ನು ಸಿಕ್ಸ್ ಪ್ಯಾಕ್ ನೋಡಲು ಇಷ್ಟ ಪಡುತ್ತೀರಾ?'' ಎಂದು ಕೇಳಿದರು. ಆಗ ಮಾನ್ವಿತಾ 'ಸುದೀಪ್ ಸರ್' ಎಂದು ನಟ ಸುದೀಪ್ ಅವರ ಹೆಸರನ್ನು ತೆಗೆದುಕೊಂಡರು. ಮಾನ್ವಿತಾ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ ''ಸುದೀಪ್ ನೀವು ಸಿಕ್ಸ್ ಪ್ಯಾಕ್ ಮಾಡಿದಾಗ ಮೊದಲು ಮಾನ್ವಿತಾಗೆ ತೋರಿಸಿ. ಇದು ನನ್ನ ಮನವಿ'' ಎಂದರು.

More from Filmibeat

English summary
Manvitha Harish spoke about Ashika Ranganath in Star Suvarna's new show 'No1 yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X