ತುಂಬಾ ಸೆ*ಕ್ಸಿಯಾಗಿ ಕಾಣ್ತಿದ್ದೀಯಾ ; ಖ್ಯಾತ ಕಿರುತೆರೆ ನಟಿಗೆ ಹಿರಿಯ ನಟನಿಂದ ಕಿರುಕುಳ..!

ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟಾತಿ ಕೆಟ್ಟ ಸಂದೇಶಗಳನ್ನು ಕಳಿಸೋದು, ಹೇಗೋ ಬಲೆಗೆ ಕೆಡವಿಕೊಂಡು ಬ್ಲಾಕ್‌ಮೇಲ್ ಮಾಡೋದೂ ಸೇರಿದಂತೆ ಡಿಜಿಟಲ್ ಕಾಮುಕರು ಥರ ಥರದಲ್ಲಿ ಕಾಡುತ್ತಿದ್ದಾರೆ.

ಇನ್ನು, ಚಿತ್ರರಂಗದಲ್ಲಿರುವ ನಾಯಕಿಯರ ಪಾಡು ಹೇಳತೀರದು. ಅಭಿಮಾನದ ಹೆಸರಿನಲ್ಲಿ ಅನೇಕರು ಅನೇಕ ನಾಯಕಿಯರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಸೈಬರ್ ಕ್ರೈಮ್ ಮೊರೆ ಹೋದರು ಕೂಡ ಇವರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

Marathi actress Prachi Pisat bravely exposes Sudesh Mhashilkar for sending inappropriate messages

ದುರಂತ ಅಂದರೆ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡ ನಾಯಕಿಯರಿಗೆ ಈಗೀಗ ಚಿತ್ರರಂಗದಲ್ಲಿರುವ ಪುರುಷರೇ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಮರಾಠಿ ಚೆಲುವೆ ಪ್ರಾಚಿ ಪಿಸಾತ್ ಅವರ ಪ್ರಕರಣ ಸದ್ಯದ ಉದಾಹರಣೆ.

ಹೌದು. ಪ್ರಾಚಿ ಪಿಸಾತ್ .. ಮರಾಠಿ ಕಿರುತೆರೆಯ ಖ್ಯಾತ ನಾಯಕಿ. ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಅನೇಕರ ಹೃದಯವನ್ನು ಗೆದ್ದಿರುವ ಪ್ರಾಚಿಗೆ ಮರಾಠಿ ಚಿತ್ರರಂಗದ ಹಿರಿಯ ನಟ ಸುದೇಶ್ ಮಹಶಿಲ್ಕರ್ ಮಾನಸಿಕ ಕಿರುಕುಳ ನೀಡಿದ್ಧಾರೆ.

ಪ್ರಾಚಿಯ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೆ ನಿರಂತರವಾಗಿ ಮೆಸೇಜ್‌ಗಳನ್ನು ಕಳುಹಿಸಿದ್ದಾರೆ. ''ನಿನ್ನ ಫೋನ್ ನಂಬರ್ ಕೊಡು, ನಾನು ನಿನ್ನ ಜೊತೆ ಫ್ಲರ್ಟ್ ಮಾಡಲು ಬಯಸುತ್ತೇನೆ, ಎಷ್ಟು ಮುದ್ದಾಗಿ ಕಾಣ್ತಿದ್ದೀಯಾ'' ಎಂದು ಸಂದೇಶವನ್ನು ಪ್ರಾಚಿಗೆ ಕಳಿಸಿರುವ ಸುದೇಶ್ ಮಹಶಿಲ್ಕರ್ ''ನೀವು ಇತ್ತೀಚಿನ ದಿನಗಳಲ್ಲಿ ತುಂಬಾನೇ ಸೆಕ್ಸಿಯಾಗಿ ಕಾಣ್ತಿದ್ದೀರಾ, ವ್ಹಾ'' ಎಂದು ಕೂಡ ಸಂದೇಶವನ್ನು ಕಳಿಸಿದ್ದಾರೆ.

ಸುದೇಶ್ ಮಹಶಿಲ್ಕರ್ ಅವರಿಂದ ಬಂದ ಈ ನಿರಂತರ ಮೆಸೇಜ್ ಗಳಿಂದ ಬೇಸತ್ತ ಪ್ರಾಚಿ ಸದ್ಯ ಸುದೇಶ್ ಮಹಶಿಲ್ಕರ್ ಕಳುಹಿಸಿರುವ ಮೆಸೇಜ್‌ಗಳ ಸ್ಕ್ರಿನ್ ಶಾಟ್‌ ಗಳನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ. '' ನನಗೆ ಈ ಸ್ಕ್ರೀನ್ ಶಾಟ್ ಫೋಸ್ಟ್ ಮಾಡುವ ಮನಸ್ಸಾಯ್ತು, ನಿಮ್ಮ ಹೆಂಡತಿಯ ನಂಬರ್ ನಿಮ್ಮ ಹತ್ತಿರ ಇರಬೇಕು, ಅವಳು ಕೂಡ ಮುದ್ದಾಗಿದ್ದಾಳೆ, ಅವಳ ಜೊತೆ ಫ್ಲರ್ಟ್ ಮಾಡಲು ಪ್ರಯತ್ನ ಮಾಡಿ'' ಎಂದು ಬರೆದುಕೊಂಡಿದ್ದಾರೆ.

Marathi actress Prachi Pisat bravely exposes Sudesh Mhashilkar for sending inappropriate messages

ಮುಂದುವರೆದು ನಾನು ಹಂಚಿಕೊಂಡ ಫೋಸ್ಟ್‌ನ್ನು ಡಿಲೀಟ್ ಮಾಡುವಂತೆ ನನ್ನ ಮೇಲೆ ಒತ್ತಡವನ್ನು ಹೇರಲಾಗುತ್ತಿದೆ. ಈ ಕಾರಣಕ್ಕೆ ಈಗ ಈ ಫೋಸ್ಟ್‌ ನನ್ನ ಇನ್‌ಸ್ಟಾಗ್ರಾಮ್‌ನಲ್ಲಿಯೇ ಇಡಲು ನಾನು ನಿರ್ಧಾರ ಮಾಡಿದ್ದೇನೆ, ಈ ವಿಷಯವನ್ನು ಇಲ್ಲಿಗೆ ಕೊನೆಗೊಳಿಸೋಣ, ಆದರೆ ಅದಕ್ಕೆ ಸುದೇಶ್ ಮಹಶಿಲ್ಕರ್ ವ್ಯೆಯಕ್ತಿಕವಾಗಿ ಅಲ್ಲ ಸೋಶಿಯಲ್ ಮೀಡಿಯಾದಲ್ಲಿಯೇ ನನಗೆ ಕ್ಷಮೆಯನ್ನು ಕೇಳಬೇಕು'' ಎಂದು ಹೇಳಿದ್ದಾರೆ.

''ಕ್ಷಮೆ ಕೇಳದೇ ಇದ್ದರೆ ಶ್ರೀಯುತರ ಬಗ್ಗೆ ಉಳಿದ ಮಹಿಳೆಯರು ನನ್ನ ಬಳಿ ಹಂಚಿಕೊಂಡಿರುವ ವಿಚಾರಗಳನ್ನು ನಾನು ಇಲ್ಲಿ ಹಂಚಿಕೊಳ್ಳಬಹುದು'' ಎಂದು ಕೂಡ ಪ್ರಾಚಿ ಪಿಸಾತ್ ಹೇಳಿದ್ದಾರೆ. ಇಷ್ಟೇ ಅಲ್ಲ ''ಸುದೇಶ್ ಮಹಶಿಲ್ಕರ್ ಅವರ ಅಕೌಂಟ್ ಹ್ಯಾಕ್ ಆಗಿಲ್ಲ ನಾನು ಎಲ್ಲವನ್ನು ಪರಿಶೀಲಿಸಿಯೇ ಈ ವಿಚಾರವನ್ನು ಹಂಚಿಕೊಂಡಿದ್ದೇನೆ'' ಎಂದು ಹೇಳಿದ್ದಾರೆ ಪ್ರಾಚಿ.

ಸದ್ಯ ಪ್ರಾಚಿ ಪಿಸಾತ್ ಹಂಚಿಕೊಂಡ ಈ ಸ್ಕ್ರಿನ್ ಶಾಟ್ ಮರಾಠಿ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಂಚಲನ ಸೃಷ್ಟಿಸಿದೆ. ಹಲವಾರು ಜನ ಪ್ರಾಚಿ ಪಿಸಾತ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ವಿಚಾರದ ಕುರಿತು ಸುದೇಶ್ ಮಹಶಿಲ್ಕರ್ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಅನೇಕರು ಸುದೇಶ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

More from Filmibeat

English summary
Sudesh Mhashilkar accused by Marathi actress Prachi Pisat of sending offensive messages. Find out details and see screenshots
Read more about: harrasement social media actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X