ಅರೇ, ನಮ್ರತಾ, ಶ್ವೇತಾ, ಜಯಶ್ರೀ ಒಂದೇ ಥರ ಡ್ರೆಸ್ ತೊಟ್ಟು ಪೋಸ್; ಇದರ ಬೆಲೆ ಎಷ್ಟು ಗೊತ್ತಾ?

By ಎಸ್ ಸುಮಂತ್

ಯಾವುದೇ ಬ್ರಾಂಡ್ ಬಟ್ಟೆಯಾಗಲಿ ಒಂದೇ ಪ್ಯಾಟ್ರನ್, ಒಂದೇ ಡಿಸೈನ್‌ನಲ್ಲಿ ಸಾಕಷ್ಟು ಬಟ್ಟೆಗಳು ರೆಡಿಯಾಗಿರುತ್ತವೆ. ಕೆಲವೊಮ್ಮೆ ಆಫರ್ ಬಿಟ್ಟಾಗಲೂ ಹೆಚ್ಚು ಜನ ಆ ಬಟ್ಟೆಗಳನ್ನ ಶಾಪಿಂಗ್ ಮಾಡ್ತಾರೆ. ಅಥವಾ ಹೊಸ ಪ್ಯಾಟ್ರನ್ ಎಂದು ಗೊತ್ತಾದಾಗಲೂ ಶಾಪಿಂಗ್ ಮಾಡುವವರು ಇದ್ದಾರೆ. ಈಗ ಅಂಥದ್ದೇ ಒಂದು ವಿಶೇಷತೆ ಇಂಡಸ್ಟ್ರಿಯಲ್ಲಿ ನಡೆದಿದೆ. ಸಿನಿಮಾ ತಾರೆಯರು ಅಷ್ಟು ಸುಲಭವಾಗಿ ಒಂದೇ ಥರದ ಡ್ರೆಸ್ ತೆಗೆದುಕೊಳ್ಳಲ್ಲ. ಪ್ರಮೋಷನ್ ಇದ್ದಾಗ ಒಂದೇ ಥರದ ಬ್ರಾಂಡ್ ತೊಟ್ಟು ಪ್ರಚಾರ ಮಾಡುತ್ತಾರೆ.

ನಟಿಯರಾದ ಶ್ವೇತಾ, ನಮ್ರತಾ, ಜಯಶ್ರೀಯದ್ದು ಪ್ರಮೋಷನ್ ರೀತಿಯೂ ಕಾಣುತ್ತಿಲ್ಲ. ಆದರೂ ಮೂವರು ಒಂದೇ ತರದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಾಲೋವರ್ಸ್ ಕೂಡ ಮತ್ತೆ ಮತ್ತೆ ಅವರವರ ಪ್ರೊಫೈಲ್‌ಗೆ ಹೋಗಿ ಆ ಬಟ್ಟೆಯನ್ನ ಮತ್ತೊಮ್ಮೆ ಮೊಗದೊಮ್ಮೆ ನೋಡುತ್ತಿದ್ದಾರೆ.

Maryade prashe celebrity show actress shwetha and jayshree Wore Exactly Same Outfits

ಹೊಸ ಡಿಸೈನ್‌ಗೆ ಫ್ಯಾನ್ಸ್ ಫಿದಾ

ಇತ್ತೀಚೆಗಷ್ಟೇ 'ಮರ್ಯಾದೆ ಪ್ರಶ್ನೆ' ಎಂಬ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾಗೆ ನಟಿ ಶ್ವೇತಾ ಪ್ರಸಾದ್ ಅವರೇ ನಿರ್ಮಾಪಕಿ. ಸಿನಿಮಾದ ಪ್ರೀಮಿಯರ್ ಶೋನಲ್ಲಿ ಎಲ್ಲಾ ಅತಿಥಿಗಳನ್ನು ಇವರೇ ಆತ್ಮೀಯವಾಗಿ ಸ್ವಾಗತಿಸುತ್ತಿದ್ದರು. ಆಗ ಶ್ವೇತಾ ಅವರು ಧರಿಸಿದ ಬ್ಲಾಕ್ ಕಲರ್ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು.

ಜಯಶ್ರೀ ಡ್ರೆಸ್ ನೋಡಿ ಗೊಂದಲ

ಇನ್ನು 'ಮರ್ಯಾದೆ ಪ್ರಶ್ನೆ' ಸಿನಿಮಾ ನೋಡುವುದಕ್ಕೆ ನಟಿ ಜಯಶ್ರೀ ಆರಾಧ್ಯ ಕೂಡ ಬಂದಿದ್ದರು. ಇವರು ಕೂಡ ಬ್ಲಾಕ್ ಕಲರ್ ಟಾಪ್ ಜೊತೆಗೆ ವೈಟ್ ಫ್ಲವರ್ ಇರುವಂತ ಡ್ರೆಸ್ ತೊಟ್ಟು ಬಂದಿದ್ದರು. ಜಯಶ್ರೀ ಆರಾಧ್ಯ ಅವರನ್ನು ಸ್ವಾಗತಿಸಲು ಬಂದಾಗ ಶ್ವೇತಾ ಕೂಡ ಶಾಕ್ ಆಗಿದ್ದಾರೆ. ಇಬ್ಬರದ್ದು ಒಂದೇ ಥರದ ಡ್ರೆಸ್ ಆಗಿತ್ತು.

ನಮ್ರತಾ ಧರಿಸಿದ್ರು ಇದೇ ಟಾಪ್

ಇನ್ನು ನಮ್ರತಾ ಗೌಡ ಸದ್ಯಕ್ಕೆ ದುಬೈ ಟ್ರಿಪ್‌ನಲ್ಲಿದ್ದಾರೆ. ಕಿರುತೆರೆ ನಟಿಯರ ಜೊತೆಗೆ ದುಬೈಗೆ ಹೋಗಿದ್ದಾರೆ. ಅಲ್ಲಿನ ಇವೆಂಟ್ ಮುಗಿಸಿ, ದುಬೈನಲ್ಲೆಲ್ಲಾ ಓಡಾಟ ನಡೆಸಿದ್ದಾರೆ. ಆಗ ಒಂದಷ್ಟು ಫೋಟೋಗಳನ್ನು ಹಾಕಿದ್ದಾರೆ. ಆ ಫೋಟೋದಲ್ಲಿಯೂ ನಮ್ರತಾ ಗೌಡ ಬ್ಲಾಕ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬ್ಲಾಕ್ ಕಲರ್ ಡ್ರೆಸ್‌ನಲ್ಲಿ ವೈಟ್ ಕಲರ್ ಫ್ಲವರ್ ಕೂಡ ಇದೆ. ಒಂದಷ್ಟು ಫೋಟೋಗಳನ್ನು ನಮ್ರತಾ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ ಮಾಡಿದ್ದಾರೆ.

ಈ ಟಾಪ್ ಬೆಲೆ ಎಷ್ಟು?

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಮೂವರು ನಟಿಯರು ಒಂದೇ ಥರದ ಡ್ರೆಸ್ ಹಾಕಿಕೊಂಡಿರುವ ವಿಡಿಯೋ ವೈರಲ್ ಆಗ್ತಾ ಇದೆ. ಹೀಗಾಗಿ ಡ್ರೆಸ್ ನೋಡಿದ ಹಲವರು ಡ್ರೆಸ್ ಬೆಲೆ, ಬ್ರಾಂಡ್ ಹುಡುಕಾಟ ನಡೆಸಿದ್ದಾರೆ. ಫೋಟೋ ತೆಗೆದು ಜಸ್ಟ್ ಗೂಗಲ್‌ನಲ್ಲಿ ಹಾಕಿದ ಕೂಡಲೇ ಅದರ ಮಾಹಿತಿಯನ್ನು ತೋರಿಸಿದೆ. ಗೂಗಲ್‌ನಲ್ಲಿ ತೋರಿಸಿದ ಮಾಹಿತಿಯ ಪ್ರಕಾರ ಇದು ಜರಾ ಬ್ರಾಂಡ್‌ನದ್ದಾಗಿದ್ದು ಒಂದು ಡ್ರೆಸ್ 3,350 ರೂಪಾಯಿ ಎಂದು ದರ ತೋರಿಸುತ್ತಿದೆ. ಸೆಲೆಬ್ರೆಟಿಗಳು ಹೆಚ್ಚು ಇಷ್ಟಪಡುವ ಬ್ರಾಂಡ್‌ಗಳಲ್ಲಿ ಜರಾ ಕೂಡ ಒಂದು.

More from Filmibeat

English summary
Namratha, Shwetha prasad and jayashree aradya Came to watch Maryde prashne movie in same outfit;
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X