ಈ ಬಾರಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಮಾಸ್ಕ್ ಮ್ಯಾನ್ ಎಂಟ್ರಿ ಖಚಿತ!
ಸದ್ಯ ಎಲ್ಲೆಲ್ಲೂ ಮಾಸ್ಕ್ ಮ್ಯಾನ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ತಲೆಬುರುಡೆ ಕೇಸ್‌ನಲ್ಲಿ ಅಪರಿಚಿತ ದೂರುದಾರ ಅರ್ಥಾತ್ ಮಾಸ್ಕ್ ಮ್ಯಾನ್ ಇಡೀ ದೇಶದ ಗಮನ ಸೆಳೆದಿದ್ದಾನೆ. ಆ ಅನಾಮಿಕ ಯಾರು? ಆತನ ಹಿನ್ನೆಲೆ ಏನು? ಆತ ಹೇಳುತ್ತಿರುವುದೆಲ್ಲಾ ನಿಜವೇ? ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ಇದೇ ವಿಚಾರ ಕಳೆದೊಂದು ತಿಂಗಳಿನಿಂದ ಮಾಧ್ಯಮಗಳಲ್ಲಿ ಚರ್ಚೆ ನಡೀತಿದೆ.
ಗುರುತು ಸಿಗದಂತೆ ವ್ಯಕ್ತಿಯೊಬ್ಬ ಹೀಗೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ. ಹೀಗೆ ಮಾಸ್ಕ್ ಹಾಕಿಕೊಂಡ ವ್ಯಕ್ತಿ ಬಿಗ್‌ಬಾಸ್ ಮನೆಯೊಳಗೆ ಹೋದರೆ ಹೇಗಿರುತ್ತದೆ. ಸಖತ್ ಇಂಟ್ರೆಸ್ಟಿಂಗ್ ಅಲ್ವಾ? ಬಿಗ್‌ಬಾಸ್ ಸೀಸನ್-6ರಲ್ಲಿ ಸ್ವತಃ ಕಿಚ್ಚ ಸುದೀಪ್ ಗುರುತು ಸಿಗದಂತೆ ವೇಷ ಮರೆಸಿಕೊಂಡು ಮನೆಯೊಳಗೆ ಹೋಗಿದ್ದರು. ಸ್ಪರ್ಧಿಗಳಿಗೆ ಅಡುಗೆ ಮಾಡಿಕೊಟ್ಟು ಬಂದಿದ್ದರು. ಅದು ಸುದೀಪ್ ಎನ್ನುವುದು ಮೊದಲಿಗೆ ಯಾರಿಗೂ ಗೊತ್ತಾಗಿರಲಿಲ್ಲ.

ಹೀಗೆ ಮಾಸ್ಕ್ ಧರಿಸಿಕೊಂಡು ಯಾರು, ಎಲ್ಲೇ ಕಂಡರೂ ಅಚ್ಚರಿ ಮೂಡುತ್ತದೆ. ಯಾರಪ್ಪಾ ಇದು ಮಾಸ್ಕ್ ಹಾಕಿಕೊಂಡಿರುವುದು ಎನ್ನುವ ಕುತೂಹಲ ಹೆಚ್ಚುತ್ತದೆ. ಇನ್ನು ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳ ನಡುವೆ ಒಬ್ಬರು ಗುರುತು ಸಿಗದಂತೆ ಹೀಗೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೆ, ಟಾಸ್ಕ್‌ಗಳನ್ನು ಆಡುತ್ತಿದ್ದರೆ ಸಂಥಿಂಗ್ ಇಂಟ್ರೆಸ್ಟಿಂಗ್ ಅನ್ನಿಸದೇ ಇರದು. ಕೊನೆ ಪಕ್ಷ ಮಾಸ್ಕ್ ತೆಗೆಯುವವರೆಗೆ ಮನೆ ಮಂದಿಗೆ ವೀಕ್ಷಕರಿಗೆ ಇದು ಸರ್‌ಪ್ರೈಸ್ ಆಗಿಯೇ ಇರಲಿದೆ.
ಅಂದಹಾಗೆ ಈ ಬಾರಿ ಬಿಗ್‌ಬಾಸ್ ಮನೆಗೆ ಮಾಸ್ಕ್ ಹಾಕಿಕೊಂಡ ಸ್ಪರ್ಧಿ ಒಬ್ಬರು ಹೋಗಲಿದ್ದಾರೆ. ಅವರು ಯಾರು ಎನ್ನುವುದು ಶೋ ಆಯೋಜಕರನ್ನು ಬಿಟ್ಟರೆ ಬೇರೆಯವರಿಗೆ ಗೊತ್ತಾಗುವುದಿಲ್ಲ. ಅದು ಸೆಲೆಬ್ರೆಟಿನಾ? ಕಾಮನ್ ಮ್ಯಾನ್ ಆಗಿರ್ತಾರಾ? ಎನ್ನುವುದು ಕೂಡ ಸದ್ಯಕ್ಕೆ ರಿವೀಲ್ ಆಗುವುದಿಲ್ಲ. ಈ ಬಾರಿ ಬಿಗ್‌ಬಾಸ್ ಮನೆಗೆ ಮಾಸ್ಕ್ ಮ್ಯಾನ್ ಹೋಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಸಹ ಬಂದಿದೆ. ಆದರೆ ಅದು ಕನ್ನಡ ಬಿಗ್‌ಬಾಸ್ ಶೋನಲ್ಲಿ ಅಲ್ಲ. ಬದಲಿಗೆ ತೆಲುಗು ಬಿಗ್‌ಬಾಸ್ ಸೀಸನ್-9ರಲ್ಲಿ ಎನ್ನುವುದು ವಿಶೇಷ.
ಈಗಾಗಲೇ ತೆಲುಗಿನಲ್ಲಿ ಬಿಗ್‌ಬಾಸ್ 8 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. 9ನೇ ಸೀಸನ್ ಈ ಶುಕ್ರವಾರ(ಆಗಸ್ಟ್ 22) ಶುರುವಾಗಲಿದೆ. ಈ ಬಾರಿ ಕೂಡ ನಟ ನಾಗಾರ್ಜುನ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ವಿಶೇಷ ಅಂದರೆ ಈ ಬಾರಿಗೆ ಕಾಮನ್ ಮ್ಯಾನ್ ಕ್ಯಾಟಗರಿಯಲ್ಲಿ 5 ಮಂದಿ ಮನೆಯೊಳಗೆ ಹೋಗುತ್ತಿದ್ದಾರೆ. ಅವರಿಗೆಲ್ಲಾ 'ಅಗ್ನಿಪರೀಕ್ಷೆ' ಹೆಸರಿನಲ್ಲಿ ಒಂದಷ್ಟು ಟಾಸ್ಕ್‌ಗಳನ್ನು ಕೊಟ್ಟು ಬಳಿಕ ಮನೆಯೊಳಗೆ ಕಳುಹಿಸುತ್ತಿದ್ದಾರೆ. 'ಅಗ್ನಿಪರೀಕ್ಷೆ'ಯಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿರುವುದು ಈ ಮಾಸ್ಕ್ ಮ್ಯಾನ್.
ಯಾರಪ್ಪಾ ಈ ಮಾಸ್ಕ್ ಮ್ಯಾನ್ ಎಂದು ತಿಳಿದುಕೊಳ್ಳಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಕಾಮನ್ ಮ್ಯಾನ್ ಕ್ಯಾಟಗರಿಯಲ್ಲಿ ತೆಲುಗು ಬಿಗ್‌ಬಾಸ್ ಮನೆ ಒಳಗೆ ಹೋಗಲು ಸಾವಿರಾರು ಜನ ಅರ್ಜಿ ಹಾಕಿದ್ದರು. ಅದರಲ್ಲಿ ಎಲ್ಲರನ್ನು ಫಿಲ್ಟರ್ ಮಾಡಿ 100 ಜನರನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ಮತ್ತೆ 45 ಜನರನ್ನು ಆಯ್ಕೆ ಮಾಡಿ 'ಅಗ್ನಿ ಪರೀಕ್ಷೆ' ಶೋಗೆ ಕರೆತಂದಿದ್ದರು. ತೆಲುಗು ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು ಈ 'ಅಗ್ನಿ ಪರೀಕ್ಷೆ' ಸ್ಪೆಷಲ್ ಶೋ ಜಡ್ಜ್‌ಗಳಾಗಿದ್ದಾರೆ. ಎರಡು ವಾರ ಈ ಎಪಿಸೋಡ್‌ಗಳು ಪ್ರಸಾರವಾಗಲಿದೆ.
ಇನ್ನು ತೆಲುಗು ಬಿಗ್‌ಬಾಸ್ ಶೋ ಸೀಸನ್ 9ಕ್ಕೆ ಕಾಮನ್ ಮ್ಯಾನ್ ಕ್ಯಾಟಗರಿಯಲ್ಲಿ ಹೋಗುವ ಐವರು ಯಾರು ಎನ್ನುವುದು ರಿವೀಲ್ ಆಗಿದೆ. ಇನ್ನು ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿ ಹೆಸರು ಹರೀಶ್ ಎನ್ನಲಾಗ್ತಿದೆ. 'ಅಗ್ನಿ ಪರೀಕ್ಷೆ'ಯಲ್ಲಿ ಕೊಟ್ಟ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಮಾಸ್ಕ್ ಮ್ಯಾನ್ ದೊಡ್ಮನೆ ಒಳಗೆ ಹೋಗುವುದು ಪಕ್ಕಾ ಎನ್ನಲಾಗ್ತಿದೆ.


Click it and Unblock the Notifications











