BBK10: ಬಿಗ್‌ಬಾಸ್ ಮನೆಯಲ್ಲಿ ಬೆಂಕಿ ಹಚ್ಚಿದ 'ಡೋಂಗಿ' ಡ್ರೋನ್ ವಿಚಾರ: ಸ್ನೇಹಿತ್- ಪ್ರತಾಪ್ ಮಧ್ಯೆ ಕಿರಿಕ್

ಬಿಗ್‌ಬಾಸ್ ಕನ್ನಡ ಸೀಸನ್-10 ಶುರುವಾಗಿ 2 ದಿನ ಕಳೆದಿದೆ. 3ನೇ ದಿನ ಮನೆಯಲ್ಲಿ ಕಿರಿಕ್ ಶುರುವಾಗಿದೆ. ಅದು ಕೂಡ ಡ್ರೋನ್ ಪ್ರತಾಪ್ ಹಾಗೂ ಸ್ನೇಹಿತ್ ಗೌಡ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಇಬ್ಬರೂ ಒಬ್ಬರ ಮೇಲೊಬ್ಬರು ಕಿರುಚಾಡಿ ಗಲಾಟೆ ಮಾಡಿಕೊಂಡಿದ್ದಾರೆ.

ಈ ಬಾರಿ ಬಿಗ್‌ಬಾಸ್ ಮನೆಗೆ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು ನಿಧಾನವಾಗಿ ಅಸಲಿ ಆಟ ಶುರುವಾಗುತ್ತಿದೆ. ಒಂದ್ಕಾಲದಲ್ಲಿ ಇದ್ದಕ್ಕಿದಂತೆ ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿದ್ದ ಡ್ರೋನ್ ಪ್ರತಾಪ್ ಬಳಿಕ ಸಾಕಷ್ಟು ಟೀಕೆ, ಟ್ರೋಲ್‌ಗಳನ್ನು ಎದುರಿಸಬೇಕಾಯಿತು. ಅದೇ ಕಾರಣಕ್ಕೆ ಈಗ ಬಿಗ್‌ಬಾಸ್ ಮನೆ ಕೂಡ ಪ್ರವೇಶಿಸುವಂತಾಗಿದೆ. ಡ್ರೋನ್‌ಗಳ ತಯಾರಿಕೆ ತಂತ್ರಜ್ಞಾನದಲ್ಲಿ ಅತ್ಯುನ್ನತ ಪರಿಣತಿ ಸಾಧಿಸಿರುವುದಾಗಿ ಹೇಳಿ ಇದ್ದಕ್ಕಿದಂತೆ ಪ್ರತಾಪ್ ಜನಪ್ರಿಯತೆ ಗಳಿಸಿದರು.

BBK10-Drone-Prathap-snehit-santhosh

ತನಗೆ ಡ್ರೋನ್‌ಗಳ ಬಗ್ಗೆ ಸಾಕಷ್ಟು ಗೊತ್ತು. ಎಲ್ಲೆಲ್ಲೋ ಡ್ರೋನ್ ಬಳಿಸಿ ಏನೇನೋ ಸಾಧನೆ ಮಾಡಿದ್ದೀನಿ ಎಂದು ಹಲವು ಕಾರ್ಯಕ್ರಮಗಳಲ್ಲಿ ಪ್ರತಾಪ್ ಮಾತನಾಡುತ್ತಿದ್ದರು. ಆತನ ಮಾತುಗಳನ್ನು ಕೇಳಿ ಸಾಕಷ್ಟು ಜನ ಪ್ರೇರಣೆಗೊಳ್ಳುತ್ತಿದ್ದರು. ಆದರೆ ಬಳಿಕ ಆತ ಹೇಳುತ್ತಿರುವುದೆಲ್ಲ ಸುಳ್ಳು ಎನ್ನಲಾಯಿತು. ಡ್ರೋನ್‌ಗಳ ಬಗ್ಗೆ ಅರ್ಧಬರ್ಧ ತಿಳ್ಕೊಂಡು ಎಲ್ಲಿಗೂ ಮಂಕುಬೂದಿ ಎರಚುತ್ತಿದ್ದಾರೆ ಎನ್ನಲಾಯಿತು. ಆ ಬಳಿಕ ಪ್ರತಾಪ್ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗುವಂತಾಯಿತು.

ಇದೀಗ ಬಿಗ್‌ಬಾಸ್ ಮನೆಯಲ್ಲೂ ಡ್ರೋನ್‌ಗಳ ಬಗ್ಗೆ ಚರ್ಚೆ ಶುರುವಾಗಿದೆ. ಪ್ರತಾಪ್‌ ಕಾಲೆಳೆಯುವಂತೆ ಸಂತು, ಸ್ನೇಹಿತ ಗೌಡ ಹಾಗೂ ವರ್ತೂರು ಸಂತೊಷ್ ಮಾತನಾಡಿದ್ದಾರೆ. ಇದರಿಂದ ಪ್ರತಾಪ್ ಸಹ ಬೇಸರಗೊಂಡಿದ್ದು ಮಾತಿಗೆ ಮಾತು ಬೆಳೆದಿದೆ. ಅದರ ಹೊಸ ಪ್ರೋಮೊ ರಿಲೀಸ್ ಆಗಿ ವೈರಲ್ ಆಗುತ್ತಿದೆ.

ಮೊದಲಿಗೆ ವರ್ತೂರು ಸಂತೋಷ್, ಪ್ರತಾಪ್ ಮಾಡಿರುವ ಡ್ರೋನ್ ನೀವು ನೋಡಿದ್ದೀರಾ? ಎಂದು ಕೇಳಿದ್ದಾರೆ. ಆದರೆ ತುಕಾಲಿ ಸಂತು ಇವರು ಡ್ರೋನ್ ಮಾಡಲ್ಲ. ಅಂಗಡಿಯಿಂದ ತಗೊಂಡು ಹೋಗಿ ಹಾರಿಸುತ್ತಾರೆ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಸ್ನೇಹಿತ್, ವರ್ತೂರು ಸಂತೋಷ್ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಬ್ಯುಸಿಸೆನ್ ಮಾತನಾಡಬೇಕು ಅಂದ್ರೆ ನೀವು ಆಫೀಸ್‌ಗೆ ಬನ್ನಿ ಎಂದು ಪ್ರತಾಪ್ ಆಕ್ರೋಶಗೊಂಡಿದ್ದಾರೆ.

ಬಳಿಕ ಕಿಚನ್‌ನಲ್ಲಿ ಮಾತಿನ ಸಮರ ಮುಂದುವರೆದಿದೆ. ಒಂದು ಎಕರೆಗೆ ಔಷಧಿ ಹೊಡೆಯಬಹುದು ಎಂದಿದ್ದು ಯಾರು ಎಂದು ವರ್ತೂರು ಸಂತೋಷ್ ಕೇಳಿದ್ದಾರೆ. ಬಳಿಕ ಸ್ನೇಹಿತ್ ಅವರು ಪ್ರಾಮಾಣಿಕವಾಗಿ ನನಗೆ ಒಂದಷ್ಟು ರೈತರು ಗೊತ್ತು, ನೀನು ಡ್ರೋನ್ ಹೆಸರಲ್ಲಿ ಡೋಂಗಿ ಮಾಡ್ತಿದ್ದೀಯಾ ಅಂದ್ರು ಎಂದಿದ್ದಾರೆ. ಕೂಡಲೇ ಪ್ರತಾಪ್ ಯಾರು ಡೋಂಗಿ ಮಾಡ್ತಿರೋದು ಎಂದು ಕಿರುಚಾಡಿದ್ದಾರೆ. ಅಷ್ಟಕ್ಕೂ ಏನಿದು ಕಿರಿಕ್ ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ರಿವೀಲ್ ಆಗಲಿದೆ.

ಪ್ರೋಮೊ ವೈರಲ್ ಆಗ್ತಿದೆ. ಸಾಕಷ್ಟು ಜನ ಪ್ರತಾಪ್‌ ಅವರ ವೈಯಕ್ತಿಕ ವಿಚಾರವನ್ನು ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಚರ್ಚಿಸಿದ್ದು ತಪ್ಪು. ಬೇಕು ಅಂತಲೇ ಪ್ರತಾಪ್ ಅವರನ್ನು ಕಿಚಾಯಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
BBK10 Day 3: Prathap, Santhosh and snehith gowda get into a major fight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X