ಹುಟ್ಟುಹಬ್ಬದ ದಿನ ಮಗಳು ವಂಶಿಕಾ ಜೊತೆ ಮಗ್ಗಿ ಹೇಳಿ ಗೊಂದಲಕ್ಕೀಡಾದ ಮಾಸ್ಟರ್‌ ಆನಂದ್

By ಪ್ರಿಯಾ ದೊರೆ

ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಈಗ ನಿರೂಪಕ, ನಟ, ನಿರ್ದೇಶಕರೂ ಆಗಿದ್ದಾರೆ. ಮಾಸ್ಟರ್‌ ಆನಂದ್‌ನ ಈಗ ಎಲ್ಲರೂ ಅವರ ಮಗಳು ವಂಶಿಕಾಳಿಂದಲೇ ಗುರುತಿಸುತ್ತಾರೆ.

ಚಿಕ್ಕ ವಯಸ್ಸಿಗೆ ವಂಶಿಕಾ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದ್ದು, ಈಗ ಮಾಸ್ಟರ್ ಆನಂದ್ ಅವರಿಗಿಂತಲೂ ಚೂಟಿಯಾಗಿದ್ದು, ಕಾಮಿಡಿ ಶೋಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ.

ಮಾಸ್ಟರ್ ಆನಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ಕೇಕ್ ಕತ್ತರಿಸಿ ಸೆಲಬ್ರೇಟ್ ಮಾಡಲಾಗಿದೆ. ವಂಶಿಕಾ ಬಹಳ ಸಡಗರದಿಂದ ಅಪ್ಪನ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾಳೆ.

Master Anand Shares Special video with Daughter Vanshika on his Birthday

ಬಾಲನಟನಾಗಿ ಸಾಧನೆಗೈದ ನಟ

ಮಾಸ್ಟರ್ ಆನಂದ್ ನಟನೆ ನಿರ್ದೇಶನದ ಜೊತೆಗೆ ರಿಯಾಲಿಟಿ ಶೋ ಹೋಸ್ಟ್ ಆಗಿ ಜನಪ್ರಿಯತೆ ಪಡೆದಿದ್ದಾರೆ. ರವಿಚಂದ್ರನ್ ನಟನೆಯ 'ಕಿಂದರಿ ಜೋಗಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮಾಸ್ಟರ್ ಆನಂದ್ ಬಾಲನಟನಾಗಿದ್ದಾಗಲೇ ಉನ್ನತ ಪ್ರಶಸ್ತಿಗಳನ್ನು ಗೆದ್ದಿದ್ದರು. 1991 - 92ರಲ್ಲಿ 'ಗೌರಿ ಗಣೇಶ' ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಅತ್ಯುತ್ತಮ ಬಾಲನಟ ವಿಭಾಗದಲ್ಲಿ ಪಡೆದಿದ್ದರು. 1994-95ರಲ್ಲಿ 'ತಾಯಿ ಇಲ್ಲದ ತವರು' ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟನಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು. 1995-96ರಲ್ಲಿ 'ಮಕ್ಕಳ ಸಾಕ್ಷಿ' ಚಿತ್ರಕ್ಕಾಗಿ ಮಾಸ್ಟರ್ ಆನಂದ್ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

ಆನಂದ್ ಅವರದೇ ಅಚ್ಚು ವಂಶಿಕಾ

ಮಾಸ್ಟರ್ ಆನಂದ್ ನಂತರ ಯಶಸ್ವಿ ಬಾಲನಟನಾಗಿ, ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಬೆಳೆದರು. 2010ರಲ್ಲಿ ಯಶಸ್ವಿನಿ ಎಂಬುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ವಂಶಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಅಪ್ಪನಂತೆ ಮಗಳೂ ಸಹ ಪುಟ್ಟ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಿ ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾಳೆ. ಇನ್ನು ಮಾಸ್ಟರ್ ಆನಂದ್ ಮದುವೆಯಾಗಿ, ತಂದೆಯಾದರೂ ಸಹ ಇನ್ನೂ ಮಾಸ್ಟರ್ ಆನಂದ್ ಎಂದೇ ಜನಪ್ರಿಯರಾಗಿದ್ದಾರೆ.

ನಟನೆ ಜೊತೆಗೆ ನಿರ್ದೇಶನ

2002ರಲ್ಲಿ ತೆರೆಕಂಡ 'ಫ್ರೆಂಡ್ಸ್' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ನಂತರ ಮಾಸ್ಟರ್ ಆನಂದ್ ಲೀಡ್ ಪಾತ್ರಗಳಲ್ಲಿ ನಟಿಸುವ ಅವಕಾಶ ಗಿಟ್ಟಲಿಲ್ಲ. 'ದೇವರು ವರವನು ಕೊಟ್ರೆ', 'ಜೇಷ್ಠ', 'ಮಣಿ', 'ಬುಲೆಟ್ ಬಸ್ಯಾ', 'ಪ್ಯಾರ್ಗೆ ಆಗ್ಬುಟ್ಟೈತೆ' ಹಾಗೂ 'ಜಾತ್ರೆ' ಚಿತ್ರಗಳಲ್ಲಿ ಮಾಸ್ಟರ್ ಆನಂದ್ ಪೋಷಕ ನಟ ಪಾತ್ರವನ್ನು ನಿರ್ವಹಿಸಿದ್ದಾರೆ. 2011ರಲ್ಲಿ ಬಿಡುಗಡೆಗೊಂಡ '5 ಈಡಿಯಟ್ಸ್' ಚಿತ್ರದ ಮೂಲಕ ನಿರ್ದೇಶಕನಾಗಿಯೂ ಬಡ್ತಿ ಪಡೆದರು. ಆದರೆ ಈ ಚಿತ್ರ ಹೇಳಿಕೊಳ್ಳುವಂತ ಯಶಸ್ಸು ಸಾಧಿಸಲಿಲ್ಲ. ಈ ಹಿಂದೆ 'ಎಸ್ಎಸ್ಎಲ್ಸಿ ನನ್ ಮಕ್ಳು', 'ಪಡುವಾರಳ್ಳಿ ಪಡ್ಡೆಗಳು', 'ರೋಬೋ ಫ್ಯಾಮಿಲಿ', 'ನಿಗೂಢ ರಾತ್ರಿ ಎನ್ನುವ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.

ಮಗ್ಗಿ ಹೇಳಿ ಗೊಂದಲ ಹೇಳಿಕೊಂಡ ನಟ

'ಡ್ರಾಮ ಜ್ಯೂನಿಯರ್ಸ್' ಮತ್ತು 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಹೋಸ್ಟ್ ಮಾಡುವ ಮೂಲಕ ಆನಂದ್ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಮಗಳು ವಂಶಿಕಾ ಜೊತೆಗೆ ಸೇರಿ ಮಗ್ಗಿ ಹೇಳಿದ್ದಾರೆ. ಈ ಮೂಲಕ ತಮ್ಮ ವಯಸ್ಸನ್ನು ಕೂಡ ಅಭಿಮಾನಿಗಳ ಎದುರಿಗೆ ತೆರೆದಿಟ್ಟಿದ್ದಾರೆ. ಅದರೊಂದಿಗೆ ತಮ್ಮ ಗೊಂದಲವನ್ನೂ ಹೇಳಿಕೊಂಡಿದ್ದಾರೆ. ಅದೇನೆಂದರೆ ಈಗ ತಮ್ಮ ವಯಸ್ಸು 40. ಆದರೆ, 40 ಎಂದು ಹೇಳಬೇಕಾ ಅಥವಾ 39 ಕಂಪ್ಲೀಟ್ ಆಗಿದೆ ಎನ್ನಬೇಕಾ ಎಂದು ಕನ್ಫ್ಯೂಸ್ ಆಗಿದ್ದಾರೆ. ಮಗಳ ಮುಖಕ್ಕೆ ಮುಖವಿಟ್ಟು ಹೇಳಿರುವ ಮಗ್ಗಿಯನ್ನು ನೀವು ನಿಮ್ಮ ಮಕ್ಕಳ ಜೊತೆಗೆ ಹೇಳಿ ನನಗೆ ತಿಳಿಸಿ. ನನ್ನ ಗೊಂದಲ ಪರಿಹರಿಸಿ ಎಂದು ಕೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಕಮೆಂಟ್ಸ್ ಮಾಡಿದ್ದಾರೆ.

More from Filmibeat

English summary
Master anand birthday special tables video recorded with her daughter vamshika;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X