ಮಾಸ್ಟರ್ ಆನಂದ್- ನಯನಾ ಲವ್ವಿ ಡವ್ವಿ? ಯಶಸ್ವಿನಿ ಆನಂದ್ ಏನಂತಾರೆ?
ಮಾಸ್ಟರ್ ಆನಂದ್ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಪತ್ನಿ ಯಶಸ್ವಿನಿ ಹಾಗೂ ಪುತ್ರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾ ಕೂಡ ನೆಟ್ಟಿಗರ ಗಮನ ಸೆಳೆದಿದ್ದಾರೆ. 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಯಶಸ್ವಿನಿ ಹಾಗೂ ವಂಶಿಕಾ ಕಾಣಿಸಿಕೊಂಡು ಮೋಡಿ ಮಾಡಿದ್ದರು.
ಯಶಸ್ವಿನಿ ಆನಂದ್ ಈಗ ಕನೆಕ್ಟ್ ಕನ್ನಡ(Konnect Kannada) ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರಲ್ಲಿ ಕಿರುತೆರೆ ಕಲಾವಿದರ ಸಂದರ್ಶನ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶೋಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಬಂದಿದ್ದರು. ಇಬ್ಬರೂ ಮಾತು ಹರಟೆ ಹೊಡೆದು ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು ಕಾಮಿಡಿ ಕಿಲಾಡಿಗಳು ಶೋನಲ್ಲಿ ನಟ ಜಗ್ಗೇಶ್ ಸದಾ ನಯನಾ ಹಾಗೂ ಮಾಸ್ಟರ್ ಆನಂದ್ ಅವರನ್ನು ರೇಗಿಸುತ್ತಿದ್ದರು.

ಆನಂದ್- ನಯನಾ ಜೋಡಿ ಎನ್ನುವಂತೆ ಜಗ್ಗಣ್ಣ ಕಾಲೆಳೆಯುತ್ತಿದ್ದರು. ಇಬ್ಬರೂ ಅದನ್ನು ಬಹಳ ಸ್ಫೋರ್ಟಿವ್ ಆಗಿಯೇ ತೆಗೆದುಕೊಂಡಿದ್ದರು. ಒಟ್ಟೊಟ್ಟಿಗೆ ವೇದಿಕೆಯಲ್ಲಿ ಸಹ ಕಾಣಿಸಿಕೊಂಡಿದ್ದರು. ಸದ್ಯ ಯಶಸ್ವಿನಿ ಸಂದರ್ಶನದಲ್ಲಿ ಕೂಡ ಈ ಟಾಪಿಕ್ ಬಂದಿದೆ. ಇಬ್ಬರೂ ಈ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರು. ಟ್ರಯಾಂಗಲ್ ಲವ್ ಸ್ಟೋರಿ ಎಂದಿದ್ದಾರೆ.
ಸಾಕಷ್ಟು ಆಡಿಷನ್ಸ್ ಕೊಟ್ಟು ಬೇಸತ್ತಿದ್ದ ನಯನಾ ಅವರನ್ನು ಮೊದಲಿಗೆ ಆಯ್ಕೆ ಮಾಡಿದ್ದು ಮಾಸ್ಟರ್ ಆನಂದ್ ಅಂತೆ. ಕೇವಲ 5 ಸೆಕೆಂಡ್‌ನಲ್ಲಿ ನನ್ನ ನಟನೆ ನೋಡಿ ಮಾಸ್ಟರ್ ಆನಂದ್ ಸರ್ ನನ್ನ ಆಯ್ಕೆ ಮಾಡಿದ್ದರು ಎಂದು ನಯನಾ ನೆನಪಿಸಿಕೊಂಡಿದ್ದಾರೆ. ಆ ದಿನ ಆನಂದ್ ಬಂದು ಈ ವಿಚಾರ ಹೇಳಿದರು. ನಯನಾ ಎಂಬ ಹುಡುಗಿ ಬಹಳ ಚೆನ್ನಾಗಿ ನಟಿಸ್ತಾಳೆ ಎಂದಿದ್ದರು. ಹಾಗಾಗಿ ನಿಮ್ಮ ನಟನೆ ನೋಡಲು ಕಾಯುತ್ತಿದ್ದೆವು ಎಂದು ಯಶಸ್ವಿನಿ ದನಿಗೂಡಿಸಿದ್ದಾರೆ.
ಮೊದಲ ದಿನ ನಿಮ್ಮ ನಟನೆ ನೋಡಿದ ಮೇಲೆ ನನ್ನ ಮೇಲೆ ಆನಂದ್‌ಗೆ ಇಂಟ್ರೆಸ್ಟ್ ಕಮ್ಮಿ ಆಗಿದೆ ಅನ್ಸತ್ತೆ ಎಂದು ಯಶಸ್ವಿನಿ ಹೇಳಿದ್ದಾರೆ. ಹಾಗಿದ್ದರೆ ಅವತ್ತೇ ಆನಂದ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕಿತ್ತು. ನಾನು ನೋಡಿಕೊಳ್ಳುತ್ತಿದ್ದೆ. ನಮಗೆ ಸೆಕೆಂಡ್ ಹ್ಯಾಂಡ್ ಬೇಡ ಎಂದು ನಯನಾ ನಕ್ಕಿದ್ದಾರೆ.
ನಾನು ಆನಂದ್ ಸರ್‌ನ ಲವ್ ಮಾಡ್ತಿದ್ದೀನಿ. ಅವರು ನನ್ನ ಲವ್ ಮಾಡ್ತಿದ್ದಾರೆ. ನಮ್ಮದು ಟ್ರಯಾಂಗಲ್ ಲವ್ ಸ್ಟೋರಿ ಎಂದು ನಯನ ಹೇಳಿದ್ದಕ್ಕೆ ಅದು ನನಗೆ 8 ವರ್ಷಗಳ ಹಿಂದೆಯೇ ಗೊತ್ತು ಎಂದು ಯಶಸ್ವಿನಿ ಹೇಳಿದ್ದಾರೆ. ನನ್ನ, ಆನಂದ್ ಸರ್ ಬಗ್ಗೆ ಜಗ್ಗೇಶ್ ಸರ್ ಮೊದಲ ತಮಾಷೆ ಮಾಡಲು ಆರಂಭಿಸಿದರು. ನೀವು ಅದಕ್ಕೆ ಬೈತೀರಾ ಅಂದುಕೊಂಡೆ. ಆದರೆ ನೀವು ಎಂಜಾಯ್ ಎಂಜಾಯ್ ಅಂದ್ರಿ, ನಾನು ಅದನ್ನು ಊಹಿಸಿರಲಿಲ್ಲ ಎಂದು ನಯನಾ ಹೇಳಿದ್ದಾರೆ.
ನಾನು ಎರಡು ವರ್ಷದಿಂದ ಬ್ರಾಡ್ ಮೈಂಡೆಡ್ ಎಂದು ಜನ ಅಂದುಕೊಂಡಿದ್ದಾರೆ. ಆದರೆ ನಾನು ಮೊದಲಿನಿಂದಲೂ ಹೀಗೆನೇ ಎಂದು ಯಶಸ್ವಿನಿ ಹೇಳಿದ್ದಾರೆ. ನನ್ನ ಬಗ್ಗೆ ನಮ್ಮ ಪತ್ನಿಗೆ ಗೊತ್ತು. ನಾನು ಎಲ್ಲೇ ಹೋದರು ಮನೆಗೆ ಬರ್ತೀನಿ ಅಂತ ಎಂದು ಆನಂದ್ ಸರ್ ಹೇಳ್ತಿರ್ತಾನೆ ಎಂದು ನಯನಾ ವಿವರಿಸಿದ್ದಾರೆ. ಸದ್ಯ ಇವರಿಬ್ಬರ ಫನ್ನಿ ಮಾತುಕತೆ ವೈರಲ್ ಆಗುತ್ತಿದೆ.
ಕಾಮಿಡಿ ಕಿಲಾಡಿಗಳು ನಯನ, ಮಾಸ್ಟರ್ ಆನಂದ್ ಲವ್ವಿ ಡವ್ವಿ !? ಎಂದು ಟೈಟಲ್ ಕೊಟ್ಟು ಸಂದರ್ಶನದ ಪ್ರೋಮೊವನ್ನು ಯಶಸ್ವಿನಿ ಹಂಚಿಕೊಂಡಿದ್ದರು. ಇದೀಗ ಸಂಪೂರ್ಣ ಸಂದರ್ಶನದ ವೀಡಿಯೋ ಅಪ್‌ಲೋಡ್ ಆಗಿದೆ. ನಾನು ಆನಂದ್ ಸರ್‌ನ ಅನ್ನಿ ಎಂದು ಕರೆಯುತ್ತೇನೆ. ಸೆಲೆಬ್ರೆಟಿ ಆದಮೇಲೆ ಕೆಲವರು ಕಾಲೆಳೆಯುತ್ತಾರೆ ಅಂತವರ ಬಗ್ಗೆ ಏನು ಹೇಳ್ತೀರಾ? ಎಂದಿದ್ದಕ್ಕೆ "ಕಾಲು ಕೆಳಗೆ ಇರುವವರ ಬಗ್ಗೆ ಏನು ಹೇಳಲಿ" ಎಂದ ನಯನಾ ವ್ಯಂಗ್ಯವಾಡಿದ್ದಾರೆ.


Click it and Unblock the Notifications











