ಶೀಘ್ರವೇ ಇನ್ನೊಂದು ಡಿವೋರ್ಸ್ ಸುದ್ದಿ, ಎಂದವರಿಗೆ ಚಳಿ ಬಿಡಿಸಿದ ಮಾಸ್ಟರ್ ಆನಂದ್ ಪತ್ನಿ!

By ಎಸ್ ಸುಮಂತ್

ಕನ್ನಡ ಇಂಡಸ್ಟ್ರಿಯಲ್ಲಿ, ಕಿರುತೆರೆ ಕಲಾವಿದರ ಬದುಕಲ್ಲಿ ಎಲ್ಲವೂ ಸರಿ ಇದೆ ಎನ್ನುವಾಗಲೇ ಡಿವೋರ್ಸ್ ಸುದ್ದಿ ಸದ್ದು ಮಾಡ್ತಿದೆ. ಗಂಡ -ಹೆಂಡತಿ ಅಂದ್ರೆ ಹಿಂಗಿರಬೇಕಪ್ಪ ಎಂದ ಅದೆಷ್ಟೋ ಸೆಲೆಬ್ರೆಟಿಗಳು ದೂರ ದೂರ ಆಗಿದ್ದಾರೆ. ಅದಕ್ಕೆ ಉದಾಹರಣೆ ಕಿರಿಕ್ ಕೀರ್ತಿ, ಜಯಶ್ರೀ ಆರಾಧ್ಯ, ಪವಿ, ಚಂದನ್ ಶೆಟ್ಟಿ-ನಿವೇದಿತಾ ಗೌಡ ಇನ್ನು ಹಲವರ ಡಿವೋರ್ಸ್ ನಮ್ಮ ಕಣ್ಣ ಮುಂದೆ ಇದೆ.

ವಿಚ್ಛೇದನ ಅನ್ನೋದು ಗಂಡ-ಹೆಂಡತಿಯ ತೀರಾ ವೈಯಕ್ತಿಕ ವಿಚಾರ. ಅಷ್ಟು ವರ್ಷ ಜೊತೆಗೆ ಇದ್ದು, ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಂಡು ಬದುಕಿದವರು ಇದ್ದಕ್ಕಿದ್ದ ಹಾಗೇ ಸಂಬಂಧವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆಂದರೆ ಏನೋ ಬಲವಾದ ಕಾರಣವೇ ಇರುತ್ತದೆ. ಅದನ್ನ ಕೇವಲ ಸೋಷಿಯಲ್ ಮೀಡಿಯಾದಲ್ಲಿ ನೋಡುವ ನಮಗ್ಯಾರಿಗೂ ಗೊತ್ತಿರಲ್ಲ. ಆದರೆ ಈಗಿನ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಸುಲಭವಾಗಿ ಜಡ್ಜ್ ಮಾಡುವುದಕ್ಕೆ ಶುರುವಾಗಿ ಬಿಡುತ್ತಾರೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿಯ ಆ ಒಂದು ರೀಲ್.

Master anand s wife yashaswini Hits Back At A Netizen Who commented one more divorce soon

ರೀಲ್ಸ್ ಮಾಡ್ತಾ ಯಶು ಬ್ಯುಸಿ

ಯಶಸ್ವಿನಿ ಆನಂದ್ ಇತ್ತೀಚೆಗೆ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಫುಲ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ಮಗಳ ಜೊತೆಗೆ ಅಮ್ಮನು ಶೈನ್ ಆಗ್ತಾ ಇದಾರೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಂತು ಅಮ್ಮ ಮಗಳದ್ದೇ ಹವಾ ಜೋರಾಗಿದೆ. ದಿನೇ ದಿನೇ ಫಾಲೋವರ್ಸ್ ಕೂಡ ಹೆಚ್ಚಾಗುತ್ತಿದ್ದಾರೆ. ಲೈಫ್‌ನ ಕೂಲ್ ಆಗಿ ಎಂಜಾಯ್ ಮಾಡ್ತಾ ಇದಾರೆ.

ಆಂಕರ್ ಆಗಿಯೂ ಶೈನಿಂಗ್

ಇನ್ನು ಮಾಸ್ಟರ್ ಆನಂದ್ ಆಂಕರಿಂಗ್ ಮೂಲಕವೇ ಹೆಚ್ಚು ಹೆಸರು ಮಾಡಿದವರು. ಈಗ ಅವರ ಪತ್ನಿಯೂ ಆಂಕರಿಂಗ್ ಶುರು ಮಾಡಿದ್ದಾರೆ. ಸದ್ಯದ ಜಮಾನದಲ್ಲಿ ಪಾಡ್ ಕಾಸ್ಟ್ ಒಂದು ಟ್ರೆಂಡ್ ಆಗಿದೆ. ಆದರೆ ಯಶಸ್ವಿನಿ ಶುರು ಮಾಡಿರುವ ಪಾಡ್ ಕಾಸ್ಟ್ ವಿಭಿನ್ನವಾಗಿದೆ. ಕಾಮಿಡಿ ತುಂಬಿ ತುಳುಕುತ್ತಿದೆ. ಕನೆಕ್ಟ್ ಕನ್ನಡ ಎಂಬ ಹೆಸರಿನಲ್ಲಿ ಮುರುಗ ಅವರದ್ದನ್ನೇ ಮೊದಲು ಇಂಟರ್ವ್ಯೂ ಮಾಡಿದ್ದಾರೆ.

ಮಿನಿ ಸ್ಕರ್ಟ್ ಹಾಕಿ ರೀಲ್ಸ್

ಇನ್ನು ಕ್ರಿಕೆಟ್ ಅಂತೆಲ್ಲ ಇಂಡಸ್ಟ್ರಿ ನಟಿಮಣಿಯರೆಲ್ಲ ಎಂಜಾಯ್ ಮಾಡ್ತಾ ಇದ್ದಾರೆ. ಯಶಸ್ವಿನಿ ಎರಡು ಮಕ್ಕಳ ತಾಯಿಯಾಗಿದ್ರು ನಾವೇನು ಕಡಿಮೆ ಇಲ್ಲ ಎಂಬಂತೆ ಅವರು ಕೂಡ ಸಖತ್ತಾಗಿಯೇ ಕ್ರಿಕೆಟ್ ಆಡಿದ್ದಾರೆ. ಇದರ ನಡುವೆ ಯಶಸ್ವಿನಿ ಈ ಹಾರ್ಟಿಗೆ ಏನಾಗಿದೆ ಹಾಡಿಗೆ ಮಿನಿ ಸ್ಕರ್ಟ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಈ ಒಂದು ರೀಲ್ಸ್ ಮಿಲಿಯನ್‌ಗಟ್ಟಲೇ ರೀಚ್ ಆಗಿದೆ. ಇದೆ ರೀಲ್ಸ್‌ಗೆ ಯುವತಿ ಒಬ್ಬರು ಡಿವೋರ್ಸ್ ಕಮೆಂಟ್ ಹಾಕಿದ್ದಾರೆ.

ಯಶಸ್ವಿನಿಗೆ ಆ ಪದದಿಂದ ನೋವು!

'ಇನ್ನೊಂದು ಡಿವೋರ್ಸ್ ಶೀಘ್ರದಲ್ಲಿಯೇ ಆಗಲಿದೆ' ಎಂಬರ್ಥದಲ್ಲಿ ಆ ಯುವತಿ ಕಮೆಂಟ್ ಹಾಕಿದ್ದಾರೆ. ಆದರೆ ಅದಕ್ಕೆ ಅಲ್ಲಿಯೇ ಯಶಸ್ವಿನಿ ಕೂಡ ಉತ್ತರ ಕೊಟ್ಟಿದ್ದು, 'ಮೇಡಂ ಅದು ಎಂದಿಗೂ ಸಾಧ್ಯವಿಲ್ಲ ಮೇಡಂ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ' ಎಂದು ಹಾಕಿದ್ದಾರೆ. ಯಶಸ್ವಿನಿ ಹಾಗೂ ಆನಂದ್ ಬಾಂಡಿಂಗ್ ನೋಡಿದರೇನೆ ಅರ್ಥವಾಗುತ್ತದೆ, ಅವರಿಬ್ಬರು ಅದೆಷ್ಟು ಪ್ರೀತಿಸ್ತಾರೆ ಅಂತ. ಆದ್ರೂ ತುಂಬಾ ಪ್ರಿತೀಸುವವರ ನಡುವೆ ತಮಾಷೆಗಾಗಿಯೇ ನೆಗೆಟಿವ್ ಮಾತಾಡಿದರೂ ಸಹಿಸಿಕೊಳ್ಳುವುದಿಲ್ಲ. ಈಗ ಯಶಸ್ವಿನಿಗೂ ಆ ಬೇಸರ ಕಾಡಿದೆ ಅನ್ಸುತ್ತೆ. ನಮ್ಮಿಬ್ಬರ ಪ್ರೀತಿ ಮೇಲೆ ಆ ಕಮೆಂಟ್ ಹಾಕಿದ ಲೇಡಿ ಕಣ್ಣು ಬೀಳದಿರಲಪ್ಪಾ ಎಂದೇ ದೇವರತ್ರ ಮನವಿ ಮಾಡಿರ್ತಾರೆ ಈಗ.

More from Filmibeat

English summary
Here is the details about Yashaswini Master Anand responds to a netizen's comment about another divorce;
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X