For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಯಲ್ಲಿ ವಿಜಯ್ ನಟನೆಯ 'ಮಾಸ್ಟರ್' ಪ್ರಸಾರ

  |

  ತಮಿಳಿನ ಸೂಪರ್ ಹಿಟ್ ಚಿತ್ರ 'ಮಾಸ್ಟರ್' ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15 ರಂದು ಉದಯ ಟಿವಿಯಲ್ಲಿ 'ಮಾಸ್ಟರ್' ಕನ್ನಡ ವರ್ಷನ್ ಸಿನಿಮಾ ಪ್ರೀಮಿಯರ್ ಕಾಣ್ತಿದೆ. ಸಂಜೆ 6.30ಕ್ಕೆ ಪ್ರಪ್ರಥಮ ಭಾರಿಗೆ ಕನ್ನಡ ಟಿವಿಲೋಕದಲ್ಲಿ 'ಮಾಸ್ಟರ್' ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗ್ತಿದೆ.

  ತಮಿಳು ನಟ ವಿಜಯ್ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಜನವರಿ 13 ರಂದು ಬಿಡುಗಡೆಯಾಗಿತ್ತು. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಭಾರತದಾದ್ಯಂತ ಸ್ಕ್ರೀನಿಂಗ್ ಆಗಿತ್ತು. 'ಮಾಸ್ಟರ್' ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಕೇವಲ 50% ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಟ್ಟುನಿಟ್ಟಿನ ನಿಯಮದ ನಡುವೆಯೂ ವಿಜಯ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.

  ಕೊರೊನಾ ಭೀತಿಯಲ್ಲಿ 'ಮಾಸ್ಟರ್' ಸಿನಿಮಾ 200 ಕೋಟಿ ಬಾಚಿಕೊಂಡಿದ್ದು ವಿಶೇಷವಾದ ದಾಖಲೆ ಎನ್ನಬಹುದು. ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರು ನಟರಿಗೆ ತಮಿಳು ಇಂಡಸ್ಟ್ರಿಯಲ್ಲಿ ಪ್ರತ್ಯೇಕ ಅಭಿಮಾನಿ ಬಳಗವಿದ್ದು, ಈ ಕಾಂಬಿನೇಷನ್ ಚಿತ್ರಜಗತ್ತಿನಲ್ಲಿ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ.

  ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರಕ್ಕೆ ರತ್ನ ಕುಮಾರ್, ಪೊನ್ ಪಾರ್ಥಿಬನ್ ಮತ್ತು ಕನಕರಾಜ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ಕ್ಸೇವಿಯರ್ ಬ್ರಿಟ್ಟೋ ಅವರ ಮೊದಲ ನಿರ್ಮಾಣ ಸಂಸ್ಥೆಯಾದ XB ಫಿಲ್ಮ್ ಕ್ರಿಯೇಟರ್ಸ್ ಅಡಿಯಲ್ಲಿ ನಿರ್ಮಿಸಿದ್ದರು.

  ವಿಜಯ್, ವಿಜಯ್ ಸೇತುಪತಿ ಹೊರತುಪಡಿಸಿ ಮಾಳವಿಕ ಮೋಹನ್, ಅರ್ಜುನ್ ದಾಸ್, ಆಂಡ್ರಿಯಾ ಜೆರೆಮಿಯಾ ಮತ್ತು ಶಾಂತನು ಭಾಗ್ಯರಾಜ್ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

  ಈ ಸಿನಿಮಾದಲ್ಲಿ ಜೆಡಿ (ವಿಜಯ್) ಮುಖ್ಯ ಕಥಾ ವಸ್ತುವಾಗಿದ್ದಾರೆ. ಜೆಡಿ ಒಬ್ಬ ಪ್ರೋಫೇಸರ್‌ ಹಾಗೆ ಕುಡುಕ. 3 ತಿಂಗಳಿಗೆ ಜೈಲಿಗೆ ಹೋಗಿ ಬೋಧನಾ ಕೆಲಸವನ್ನು ಮಾಡುವ ಪ್ರಸಂಗ ಬರುತ್ತದೆ. ಆಗ ನಾಯಕ ಅಲ್ಲಿ ಹೋಗಿ ಏನು ಮಾಡುತ್ತಾನೆ? ಎಂಬುದೆ ಕಥೆ. ಈ ಎಲ್ಲ ಕಥೆಯ ಹಿಂದೆ ಭವಾನಿ (ಸೇತುಪತಿ)ಯ ಕುತಂತ್ರ ಇರುತ್ತದೆ. ಅವುಗಳಿಂದ ಜೆಡಿ ಹೇಗೆ ನೀಭಾಯಿಸುತ್ತಾನೆ ಎಂಬುದನ್ನು ಮಾಸ್ಟರ್‌ ಚಿತ್ರದ ರೋಚಕತೆ.

  ತಮಿಳಿನಲ್ಲಿ ಹಿಟ್ ಆದ 'ಮಾಸ್ಟರ್' ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿದೆ. ವರದಿಗಳ ಪ್ರಕಾರ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿಜಯ್ ಪಾತ್ರ ಮಾಡಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

  English summary
  Tamil Actor Vijay and Vijay sethupathi starrer Master movie Kannada version will be telecasting on August 15 in Udaya TV.
  Friday, August 13, 2021, 7:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X