twitter
    For Quick Alerts
    ALLOW NOTIFICATIONS  
    For Daily Alerts

    ಕಮಲಮ್ಮ ಪಾತ್ರಧಾರಿ ನಟಿ ಲಕ್ಷ್ಮೀ ಚಂದ್ರಶೇಖರ್ ಅವರ ಬಣ್ಣದ ಲೋಕದ ಜರ್ನಿ

    By ಪ್ರಿಯಾ ದೊರೆ
    |

    ಕನ್ನಡ ಬಣ್ಣದ ಲೋಕದಲ್ಲಿ ದಶಕಗಳಿಂದಲೂ ಅಭಿನಯ ಮಾಡಿಕೊಂಡು ಬಂದಿರುವ ಸಾಕಷ್ಟು ಕಲಾವಿದರು ಇದ್ದಾರೆ. ಆದರೆ ಕೋವಿಡ್‌ ಕಾರಣದಿಂದ ಕೆಲ ಹಿರಿಯ ಕಲಾವಿದರು ನಟನೆಗೆ ಫುಲ್‌ ಸ್ಟಾಪ್‌ ಇಟ್ಟು ಬಿಟ್ಟರು.

    ವಯಸ್ಸಾದ ಕೆಲವೇ ಕೆಲವು ಕಲಾವಿದರು ಮಾತ್ರವೇ ನಟನೆಗೆ ಮರಳಿದ್ದಾರೆ. ಅದರಲ್ಲಿ ನಟಿ ಲಕ್ಷ್ಮೀ ಚಂದ್ರಶೇಖರ್‌ ಅವರು ಕೂಡ ಒಬ್ಬರು. 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಖುಷಿ ತಂದಿದೆ.

    Srirasthu Shubhamastu: ದತ್ತನ ಮನಸ್ಸಲ್ಲಿರೋದೇನು? ತಾತ ಅಷ್ಟು ಸುಲಭವಾಗಿ ಒಪ್ಕೊಳ್ತಾರಾ..?Srirasthu Shubhamastu: ದತ್ತನ ಮನಸ್ಸಲ್ಲಿರೋದೇನು? ತಾತ ಅಷ್ಟು ಸುಲಭವಾಗಿ ಒಪ್ಕೊಳ್ತಾರಾ..?

    ಕಳೆದ 45 ವರ್ಷಗಳಿಂದ ಕಲಾವಿದರಾಗಿ ಸಕ್ರಿಯರಾಗಿರುವ ನಟಿ ಎಂದರೆ ಅದು ಲಕ್ಷ್ಮೀ ಚಂದ್ರಶೇಖರ್‌. ಇಷ್ಟ ಪಟ್ಟು ರಂಗಭೂಮಿಗೆ ಬಂದ ಲಕ್ಷ್ಮೀ ಅವರು ತಮ್ಮಿಷ್ಟದ ನಟನೆಯನ್ನು ಮುಂದುವರಿಸಿದ್ದಾರೆ.

    ಶಾಸ್ತ್ರೀಗಳ ಪತ್ನಿ ಪಾತ್ರ

    ಶಾಸ್ತ್ರೀಗಳ ಪತ್ನಿ ಪಾತ್ರ

    'ಮಾಯಾಮೃಗ' ಧಾರಾವಾಹಿಯಲ್ಲಿ ಕಮಲಮ್ಮನ ಪಾತ್ರವನ್ನು ನಿಭಾಯಿಸಿದ ಲಕ್ಷ್ಮೀ ಅವರು ಅದ್ಭುತವಾಗಿ ನಟಿಸಿದ್ದರು. ಶಾಸ್ತ್ರಿಗಳ ಹೆಂಡತಿಯಾಗಿ, ಪತಿಯ ಮಾತನ್ನು ಚಾಚೂ ತಪ್ಪದೆ ನಡೆಸುತ್ತಿದ್ದರು. ಪತಿ ಹಾಕಿದ ಗೆರೆಯನ್ನು ದಾಟದೆ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಶ್ಯಾಮ್‌ನನ್ನು ಸಂಬಾಳಿಸುವುದೇ ಕಮಲ್ಲಮ್ಮನಿಗೆ ಕಷ್ಟವಾಗುತ್ತದೆ. ಆಚಾರ-ವಿಚಾರ, ಮಡಿ ಇರುವ ಮನೆಯಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ, ಕೆಲವೊಮ್ಮೆ ಸಣ್ಣ-ಪುಟ್ಟ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾ ಸುಳ್ಳನ್ನು ಹೇಳಲಾಗದೇ ಒದ್ದಾಡುವ ಕಮಲಮ್ಮನ ಅಭಿನಯ ಅದ್ಭುತ ಎಂದರೆ ಸುಳ್ಳಾಗುವುದಿಲ್ಲ.

    ಶಾಸ್ತ್ರಿಗಳಿಲ್ಲದೇ ಕಮಲಮ್ಮನ ಒದ್ದಾಟ

    ಶಾಸ್ತ್ರಿಗಳಿಲ್ಲದೇ ಕಮಲಮ್ಮನ ಒದ್ದಾಟ

    ಈಗ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಶಾಸ್ತ್ರಿಗಳು ತೀರ್ಥಯಾತ್ರೆಗೆ ಕಮಲಮ್ಮನನ್ನು ಬಿಟ್ಟು ಹೋಗಿದ್ದಾರೆ. ಪತಿಗಾಗಿ ಕ್ಷಣ ಕ್ಷಣವೂ ಮಿಡಿಯುವ ಜೀವ ಕಮಲಮ್ಮನವರು ಈಗ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಆದರೆ ಕಮಲಮ್ಮನನ್ನು ನೆಮ್ಮದಿಯಾಗಿಡಬೇಕು, ಸುಖವಾಗಿ ನೋಡಿಕೊಳ್ಳಬೇಕು ಎಂದು ಶ್ಯಾಮ್‌ ಪ್ರಯತ್ನ ಪಡುತ್ತಿದ್ದಾನೆ. ಆದರೆ ಅಮ್ಮನಿಗೆ ಅವರ ಮನೆಯನ್ನು ಬಿಟ್ಟು ಬರಲು ಇಷ್ಟವಿಲ್ಲ. ಹೀಗೆ ತಮ್ಮ ನಟನೆಯನ್ನು ಮುಂದುವರಿಸಿದ್ದು, ಇವರ ವೈಯಕ್ತಿಕ ವಿಚಾರವನ್ನು ತಿಳಿಯೋಣ ಬನ್ನಿ.

    ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ

    ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ

    ಹಾಸನದಲ್ಲಿ ಜನಿಸಿದ ಲಕ್ಷ್ಮೀ ಚಂದ್ರಶೇಖರ್‌ ಅವರು ಚನ್ನರಾಯ ಪಟ್ಟಣದ ನವೋದಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು. ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ಪದವಿ ಮುಗಿಸಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್‌ ಸ್ನಾತಕೋತ್ತರ ಪದವಿಯನ್ನು ಮಾಡಿದರು. ಬಳಿಕ ಯುಕೆ ಯುನಿವರ್ಸಿಟಿಯಲ್ಲಿ ಇಂಗ್ಲೀಷ್‌ ವ್ಯಾಸಂಗ ಮಾಡಿರುವ ಲಕ್ಷ್ಮಿ ಚಂದ್ರಶೇಖರ್‌ ಅವರು ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕೆಲ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಇನ್ನು 2002ರಲ್ಲಿ ಲಕ್ಷ್ಮೀ ಚಂದ್ರಶೇಖರ್‌ ಅವರು 'ಗೃಹಭಂಗ' ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಆರ್ಯಭಟ್ಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಳಿಕ 2014ರಲ್ಲಿ ನಾಟಕಗಳಲ್ಲಿ ನಟಿಸಿ ಕರ್ನಾಟಕ ನಾಟಕ ಅಕಾಡೆಮಿಯಿಂದಲೂ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಿಷ್ಟೇ ಅಲ್ಲದೇ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.

    ಸಾಕ್ಷ್ಯ ಚಿತ್ರಗಳಲ್ಲಿ ಲಕ್ಷ್ಮೀ ಅಭಿನಯ

    ಸಾಕ್ಷ್ಯ ಚಿತ್ರಗಳಲ್ಲಿ ಲಕ್ಷ್ಮೀ ಅಭಿನಯ

    1987 ರಲ್ಲಿ 'ಅವಸ್ಥೆ', 2001 ರಲ್ಲಿ 'ಮಾತಾಡಣ', 2002ರಲ್ಲಿ 'ಅತಿಥಿ', 2005ರಲ್ಲಿ 'ಬೇರು', 2006ರಲ್ಲಿ 'ತನನಂ ತನನಂ', 2016 ರಲ್ಲಿ 'ಕಿರಗೂರಿನ ಗಯ್ಯಾಳಿಗಳು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 10ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದು, ಸಾಕ್ಷ್ಯ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. 'ಮಾಲ್ಗುಡಿ ಡೇಸ್‌', 'ಕಾಮನಬಿಲ್ಲು', 'ನೀನಡೆವ ದಾರಿಯಲ್ಲಿ', 'ಸ್ತ್ರೀ', 'ಬಾಂಧವ್ಯ', 'ಸಾಹಸ ಲಕ್ಷ್ಮೀಯರು', 'ಮಂಥನ, 'ಬೃಂದಾವನ' ಮುಂತಾದ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. 35ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ಪ್ರೇಕ್ಷಕರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    English summary
    Mathe Mayamruga Serial Fame Actress Lakshmi Chandrashekar personal life and other details. She Acted in Some of the notable films Like Atithi, Avasthe, Sp Sangaliyana- 2 and many more. know more.
    Friday, January 27, 2023, 18:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X