twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಮಾಯಾಮೃಗದ ರಾಜಮ್ಮ ಶಿಕ್ಷಕಿಯಿಂದ ನಟಯಾಗಿದ್ದು ಹೇಗೆ?

    By ಪ್ರಿಯಾ ದೊರೆ
    |

    ಕೆಲ ವರ್ಷಗಳಿಂದ ಪೋಷಕ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಮಧುಮತಿ ಅವರು ನಟನೆಯ ಕನಸನ್ನು ಮಗುವಾಗಿದ್ದಾಗಲೇ ಕಂಡವರು. ನಟಿಸುವ ಆಸೆ ಇದ್ದರೂ ಮದುಮತಿ ಅವರಿಗೆ ನಟಿಸುವ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅವಕಾಶ ಸಿಕ್ಕಾಗ ಸುಮ್ಮನಿರದೇ, ನಟಿಸಿ ಪ್ರೇಕ್ಷರ ಮನ ಗೆದ್ದಿದ್ದಾರೆ.

    ಮಧುಮತಿ ಅವರು ತಾವೂ ನಟಿಯಾಗಬೇಕೆಂಬ ಆಸೆಯನ್ನು ರಮೇಶ್ ಅರವಿಂದ್ ಅವರ ಬಳಿ ಹೇಳಿಕೊಂಡಾಗ ಅವರು ಸಲಹೆ ಒಂದನ್ನು ನೀಡಿದ್ದರಂತೆ. ಆ ಸಲಹೆಯನ್ನು ಕೇಳಿದ ಮಧುಮತಿ ಮತಿ ಅವರು ಮುಂದೇನು ಮಾಡಿದರು ಗೊತ್ತಾ?

    ಕಿರುತೆರೆಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಮಧುಮತಿ ಅವರ ವಯಕ್ತಿಕ ಜೀವನ ಮತ್ತು ಬಣ್ಣದ ಲೋಕದ ಪಯಣ ಆರಂಭವಾಗಿದ್ದು ಹೇಗೆ ಎಂಬುದನ್ನು ನೋಡೋಣ ಬನ್ನಿ..

    ರಮೇಶ್ ಅರವಿಂದ್ ಬಳಿ ನಟಿಸುವ ಆಸೆ ಹೇಳಿಕೊಂಡ ನಟಿ

    ರಮೇಶ್ ಅರವಿಂದ್ ಬಳಿ ನಟಿಸುವ ಆಸೆ ಹೇಳಿಕೊಂಡ ನಟಿ

    ನಟಿ ಮಧುಮತಿ ಅವರು ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರು ನಟಿಯಾಗಬೇಕೆಂದು ಹಲವು ವರ್ಷಗಳ ಕಾಲ ಕನಸು ಕಂಡವರು. ಆದರೆ ಅದು ನನಸಾಗಿದ್ದು ಮಾತ್ರ ಇತ್ತೀಚೆಗೆ. ಅದಕ್ಕೆ ಕಾರಣವೂ ಇದೆ. ಮಧುಮತಿ ಅವರ ತಂದೆ ಕೂಡ ಕಲಾವಿದರಂತೆ. ಆದರೆ, ಅವರು ಮಧುಮತಿ ಅವರ ತಾಯಿ ಗರ್ಭದಲ್ಲಿದ್ದಾಗಲೇ ತೀರಿಕೊಂಡರಂತೆ. ಇನ್ನು ಶಾಲೆಗಳಲ್ಲಿ ನಾಟಕ ಆಡುವುದು ಎಂದರೆ ಮಧುಮತಿ ಅವರಿಗೆ ಇಷ್ಟವಂತೆ. ಕುದುರೆ ಮುಖದಲ್ಲಿದ್ದಾಗ ಅಲ್ಲೇ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ರಮೇಶ್ ಅರವಿಂದ್ ಅವರ ಬಳಿ ತಮಗೂ ನಟಿಸುವ ಆಸೆ ಇದೆ ಎಂದು ಹೇಳಿದರಂತೆ. ಅದಕ್ಕೆ ರಮೇಶ್ ಅರವಿಂದ್ ಈಗ ಓದು, ಮೊದಲು ಓದಬೇಕು ಆಮೇಲೆ ಆಕ್ಟಿಂಗ್ ಎಂದು ಬುದ್ಧಿವಾದ ಹೇಳಿದ್ದರಂತೆ.

    ರಂಗಭೂಮಿಯಲ್ಲಿ ಸಕ್ರಿಯ

    ರಂಗಭೂಮಿಯಲ್ಲಿ ಸಕ್ರಿಯ

    ಇನ್ನು ಕಾಲೇಜು ದಿನಗಳಲ್ಲೇ ಮಧುಮತಿ ಅವರು ಉದಯ ಟಿವಿಯಲ್ಲಿ ಮೂಡಿ ಬರುತ್ತಿದ್ದ 'ಹೃದಯದಿಂದ' ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರಂತೆ. ಆದರೆ, ನಂತರ ಮದುವೆ, ಮಕ್ಕಳು ಎಂದು ಸಂಸಾರದಲ್ಲಿ ಬ್ಯುಸಿಯಾಗಿಬಿಟ್ಟರಂತೆ. ಇವರಿಗೆ ಇಬ್ಬರು ಮುದ್ದು ಮಕ್ಕಳಿದ್ದಾರೆ. ಇವರ ಪತಿ ಸಂಜಯ್ ಕುಮಾರ್ ಅವರು ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಮಗಳು ಕೃತಿ, ಬಿಎ ವಿದ್ಯಾರ್ಥಿನಿ ಹಾಗೂ ಮಗ ಕೌಸ್ತುಭ್ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇನ್ನು ಇವರೆಲ್ಲರೂ ರಂಗಭೂಮಿಯಲ್ಲಿ ಪಳಗಿರುವುದರಿಂದ ಮನೆಯಲ್ಲಿ ಮಧುಮತಿ ಅವರ ನಟನೆಗೆ ಪ್ರೋತ್ಸಾಹವಿದೆಯಂತೆ.

    ಕಿರುತೆರೆಯಲ್ಲಿ ಪೋಷಕ ನಟಿ

    ಕಿರುತೆರೆಯಲ್ಲಿ ಪೋಷಕ ನಟಿ

    ಥಿಯೇಟರ್ ವಿಭಾಗದಲ್ಲಿ ಡಿಪ್ಲೊಮಾ ಮಾಡಿದ ಮಧುಮತಿ ಅವರು ಎನ್ ಪಿಎಸ್ ಎಂಬ ಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಕಾರಣಾಂತರಗಳೀಂದ ಕೆಲಸ ಬಿಟ್ಟಾಗ ನಟಿಯಾಗುವ ಆಸೆಯನ್ನು ವ್ಯಕ್ತಪಡಿಸಿದರಂತೆ. ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಾಗ ಅಲ್ಲಿ ಇಲ್ಲಿ ಅಂತ ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಂತೆ. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ 'ಜೀವ ಹೂವಾಗಿದೆ' ಧಾರಾವಾಹಿ ಮೂಲಕ ಪೋಷಕ ನಟಿಯಾಗಿ ಕಾಣಿಸಿಕೊಂಡರು. ಇದಾದ ಬಳಿಕ ಮಧುಮತಿ ಅವರು ಉದಯ ಟಿವಿಯಲ್ಲಿ ಸುಂದರಿ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಕನ್ನಡತಿ ಮತ್ತು ದೊರೆಸಾನಿ ಎಂಬ ಧಾರಾವಾಹಿಗಳಲ್ಲೂ ನಟಿಸಿದರು.

    ಮತ್ತೆ ಮಾಯಾಮೃಗದಲ್ಲಿ ರಾಜಮ್ಮ

    ಮತ್ತೆ ಮಾಯಾಮೃಗದಲ್ಲಿ ರಾಜಮ್ಮ

    ಇದರ ಜೊತೆಗೆ ಮೈನಸ್ 18 ಪ್ಲಸ್ ಎಂಬ ವೆಬ್ ಸಿರೀಸ್ ನಲ್ಲಿ ಹಾಸ್ಯಭರಿತ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆಯನ್ನು ಪಡೆದಿದ್ದಾರೆ. ಇದೀಗ ಮಧುಮತಿ ಅವರು ಟಿ ಎನ್ ಸೀತಾರಾಂ ಅವರ ನಿರ್ದೇಶನದ ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 24 ವರ್ಷದ ಬಳಿಕ ಮಾಯಾಮೃಗ ಧಾರಾವಾಹಿಯ ಮುಂದುವರಿದ ಭಾಗವನ್ನು ಪ್ರಸಾರ ಮಾಡಲಾಗುತ್ತಿದೆ. ಇದರಲ್ಲಿ ಹೊಸ ಪಾತ್ರವನ್ನು ಸೀತಾರಾಂ ಅವರು ಪರಿಚಯಿಸಿದ್ದಾರೆ. ರಾಜಮ್ಮ ಪಾತ್ರದಲ್ಲಿ ಮಧುಮತಿ ಅವರು ನಟಿಸುತ್ತಿದ್ದಾರೆ.

    English summary
    bala tries to escape from house. But divya doesn’t agree to go. Now bala is in risk.
    Wednesday, November 9, 2022, 18:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X