For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರು

  |

  ಹಿಂದಿ ಬಿಗ್‌ಬಾಸ್ ಸೀಸನ್ 16 ಎರಡು ದಿನದ ಹಿಂದೆಯಷ್ಟೆ ಶುರುವಾಗಿದೆ. ಹಲವು ಭಿನ್ನ ವ್ಯಕ್ತಿತ್ವಗಳ ಸೆಲೆಬ್ರಿಟಿಗಳನ್ನು ಒಂದು ಮನೆಯಲ್ಲಿ ಕೂಡಿಹಾಕಲಾಗಿದೆ.

  ಪ್ರತಿ ಬಾರಿಯಂತೆ ಈ ಬಾರಿಯೂ ಹಿಂದಿ ಬಿಗ್‌ಬಾಸ್‌ನಲ್ಲಿ ಕೆಲವು ವಿವಾದಾತ್ಮಕ ವ್ಯಕ್ತಿಗಳನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಈ ಬಾರಿ ಒಬ್ಬ ಸ್ಪರ್ಧಿಯ ಬಗ್ಗೆ ಮಾತ್ರ ತೀವ್ರ ಅಸಮಾಧಾನ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

  ಸಿನಿಮಾ ನಿರ್ದೇಶಕ ಸಾಜಿದ್ ಖಾನ್ ಈ ಬಾರಿ ಸ್ಪರ್ಧಿಯಾಗಿ ಮನೆ ಸೇರಿದ್ದು ಸಾಜಿದ್ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯ ಆರೋಪವಿರುವುದೇ ಇದಕ್ಕೆ ಕಾರಣ.

  ಸಾಜಿದ್ ಖಾನ್‌ರ ಬಳಿ ಸಹಾಯಕ ನಿರ್ದೇಶಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಲೋನಿ ಚೋಪ್ರಾ, ಸಾಜಿದ್ ಖಾನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ 2018 ರಲ್ಲಿಯೇ ಆರೋಪ ಮಾಡಿದ್ದರು. ಸಾಜಿದ್ ವಿರುದ್ಧ ದೂರು ಸಹ ದಾಖಲಾಗಿತ್ತು.

  2018 ರಲ್ಲಿ ಸಾಜಿದ್, ತಮ್ಮ ಮೇಲೆಸಗಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರವಾಗಿ ಬರೆದಿದ್ದ ಸಲೋನಿ ಚೋಪ್ರಾ, ಸಾಜಿದ್‌ಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಗ ಸಾಜಿದ್ ಹೇಗೆಲ್ಲ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ವಿವರವಾಗಿ ಬರೆದಿದ್ದರು.

  ಸಾಜಿದ್ ಆಡುತ್ತಿದ್ದ ಮಾತುಗಳು, ವರ್ತಿಸುತ್ತಿದ್ದ ರೀತಿ, ಮುಟ್ಟುತ್ತಿದ್ದ ವಿಧಾನದ ಬಗ್ಗೆ ವಿವರವಾಗಿ ಸಲೋನಿ ಬರೆದಿದ್ದರು. ಅಲ್ಲದೆ, ಸಾಜಿದ್, ತಮ್ಮ ಜನನಾಂಗವನ್ನು ಮುಟ್ಟುವಂತೆ ಸಲೋನಿಗೆ ಹೇಳಿದ್ದಾಗಿಯೂ ಸಲೋನಿ ಬರೆದಿದ್ದರು. ಸಲೋನಿ ಸಾಜಿದ್ ಬಗ್ಗೆ ಮಾತ್ರವೇ ಅಲ್ಲದೆ, ನಟ ಜೈನ್ ಧುರಾನಿ ಹಾಗೂ 'ಎನ್‌ಎಚ್‌ 10', 'ದೇವ್ ಡಿ' ಇನ್ನೂ ಹಲವರು ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕ ಹಾಗೂ 'ಕ್ವೀನ್', 'ಚಿಲ್ಲರ್ ಪಾರ್ಟಿ', 'ಸೂಪರ್ 30' ಅಂಥಹಾ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ವಿಕಾಸ್ ಭಾಲ್ ಬಗ್ಗೆಯೂ ಬರೆದಿದ್ದರು. ಆದರೆ ಅತಿ ಹೆಚ್ಚು ದೌರ್ಜನ್ಯ ನಡೆಸಿದ್ದು ಸಾಜಿದ್ ಖಾನ್ ಎಂದು ಸಲೋನಿ ಹೇಳಿದ್ದರು. ಸಾಜಿದ್ ವಿರುದ್ಧ ದೂರು ಸಹ ದಾಖಲಾಗಿತ್ತು.

  ಇದೀಗ ಸಾಜಿದ್ ಖಾನ್, ಬಿಗ್‌ಬಾಸ್‌ ಸೀಸನ್ 16 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪಿಯನ್ನು ಸ್ಪರ್ಧೆಗೆ ಕರೆದುಕೊಂಡು ಬಂದಿರುವ ಬಗ್ಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  English summary
  Me Too accused Sajid Khan is contestant of Hindi Bigg Boss season 16. Saloni Chopra alleged against Sajid Khan.
  Tuesday, October 4, 2022, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X