»   » ಕಡೆಗೂ ಸಪ್ತಪದಿ ತುಳಿದ 'ಮೀರಾ ಮಾಧವ' ಜೋಡಿ

ಕಡೆಗೂ ಸಪ್ತಪದಿ ತುಳಿದ 'ಮೀರಾ ಮಾಧವ' ಜೋಡಿ

Posted By:
Subscribe to Filmibeat Kannada

ಕಿರುತೆರೆ ವೀಕ್ಷಕ ಬಳಗ ಬಲು ಕಾತುರ, ನಿರೀಕ್ಷೆಗಳಿಂದ ಎದುರು ನೋಡುತ್ತಿರುವ ಮದುವೆ ಇದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಅಂತಿಂಥಹ ಮದುವೆಯಲ್ಲ. 'ಮೀರಾ ಮಾಧವ'ರ ಮಹಾ ಮದುವೆ. ಯಾರು ಈ ಮೀರಾ ಮಾಧವ ಅಂತೀರಾ.

ಸ್ಟಾರ್ ನೆಟ್ ವರ್ಕ್ಸ್ ಗ್ರೂಪ್ ನ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಕನ್ನಡ ಕಿರುತೆರೆಯಲ್ಲಿಯೇ ಬಹು ನೀರೀಕ್ಷೆಯಲ್ಲಿರುವ ಮದುವೆ 'ಮೀರಾ ವೆಡ್ಸ್ ಮಾಧವ' ಮಹಾ ಮದುವೆಯನ್ನು ಇದೇ ಮೇ 1 ರಂದು ಪ್ರಸಾರ ಮಾಡುತ್ತಿದೆ. ಈ ಕಾರ್ಯಕ್ರಮ 2 ಕಂತುಗಳಲ್ಲಿ ಪ್ರಸಾರವಾಗುತ್ತಿದೆ. [ಸುವರ್ಣದಲ್ಲಿ ಮೀರಾ ಮಾಧವರ ಲವ್ ಸ್ಟೋರಿ]

ಆರತಕ್ಷತೆ ಸಮಾರಂಭ ಸಂಜೆ 4.30 ರಿಂದ 8 ಗಂಟೆಯವರೆಗೆ ಮತ್ತು ಮೂಹೂರ್ತ ರಾತ್ರಿ 10 ರಿಂದ 11 ರವರೆಗೆ ಪ್ರಸಾರವಾಗಲಿದೆ. ಈ ಮದುವೆಯನ್ನು ಅದ್ಧೂರಿಯಾಗಿ ಚೀತ್ರಿಕರಿಸಿದ್ದು ಕನ್ನಡ ಚಿತ್ರರಂಗ ಮತ್ತು ಸುವರ್ಣ ಪರಿವಾರದ ತಾರೆಗಳ ಬಳಗ ನೆರೆದಿತ್ತು.

ರಂಗೇರಿದ ವೇದಿಕೆಯಲ್ಲಿ ಅದ್ದೂರಿ ಮದುವೆ

ಅಮೃತವರ್ಷಿಣಿಯ ಅಮೃತ, ಅರಗಿಣಿಯಿಂದ ಖುಷಿ, ಮಿಲನ ಧಾರಾವಾಹಿಯಿಂದ ಸಮರ್ಥ ಮತ್ತು ಐಶ್ವರ್ಯಾ ಇವರೆಲ್ಲರು ಹಾಕಿದ ವಿಶೇಷ ಹೆಜ್ಜೆಗೆ ವೇದಿಕೆ ರಂಗೇರಿತ್ತು.

'ಉಳಿದವರು ಕಂಡಂತೆ' ಮೀರಾ ಮಾಧವ ಮದುವೆ

'ಉಳಿದವರು ಕಂಡಂತೆ' ಖ್ಯಾತಿಯ ರಕ್ಷಿತ್ ಶೆಟ್ಟಿ, ನೀತೂ ಮತ್ತು ಶುಭಾ ಪೂಂಜಾ ಅದ್ದೂರಿ ಮದುವೆಗೆ ಮತ್ತಷ್ಟು ಗ್ಲಾಮರ್ ನೀಡಿದ್ದರು. ಕನ್ನಡ ಕಿರುತೆರೆ ಪ್ರಪಂಚದಲ್ಲೇ ಮೀರಾ ಮಾಧವ ಮದುವೆ ಬಹುದೊಡ್ಡ ಮದುವೆ ಎಂದು ಕರೆಯುವಂತಹದ್ದು.

ವೀಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಮೀರಾ ಮಾಧವ

ಒಟ್ಟಿನಲ್ಲಿ ಮದುವೆ ಸಮಾರಂಭ ಗ್ಲಾಮರ್, ಸ್ಪಷ್ಟವಾದ ಚಿತ್ರಕಥೆ, ಸುಂದರವಾದ ನಿರೂಪಣೆ, ವೀಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಂತಹ ಅತ್ಯುತ್ತಮವಾದ ಕಥೆಯನ್ನು ಹೊಂದಿದೆ.

ಮಾಧವನಿಗೆ ಮನಸೋಲುವ ಮೀರಾ

ಸುವರ್ಣ ವಾಹಿನಿಯಲ್ಲಿ 'ಮೀರಾ ಮಾಧವ' ಒಂದು ಜನಪ್ರೀಯ ಧಾರಾವಾಹಿಯಾಗಿದೆ. ಇದೊಂದು ಪ್ರೇಮಕಥೆಯಾಗಿದೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಹುಡುಗಿ ಮೀರಾ ಮಧ್ಯಮವರ್ಗದ ಹುಡುಗ ಮಾಧವನ ಮೇಲೆ ಮನಸೋಲುತ್ತಾಳೆ. ಆದರೆ ಮಾಧವನ ಮನ ಒಲಿಸಲು ಮೀರಾ ಪಟ್ಟ ಕಷ್ಟ ಹಾಗೂ ನಂತರ ಅವರಿಬ್ಬರ ಪ್ರೇಮಕ್ಕೆ ಎರಡೂ ಕುಟುಂಬದವರಿಂದ ಬಂದ ವಿರೋಧ ಸಾಕಷ್ಟು.

ಕಿರುತೆರೆಯ ಟ್ರೆಂಡ್ ಸೆಟ್ ಧಾರಾವಾಹಿ

ಒಟ್ಟಿನಲ್ಲಿ ಈ ಕಥೆ ಒಂದು ರೀತಿಯಲ್ಲಿ ಸಿನೀಮಿಯವಾದ ಸ್ಕ್ರೀನ್ ಪ್ಲೇ ಮತ್ತು ಡ್ರಾಮಾವನ್ನೊಳಗೊಂಡಿದೆ. ಕಥೆ ಇಲ್ಲಿಯವರೆಗೂ ಸಾಕಷ್ಟು ತಿರುವುಗಳನ್ನು ಪಡೆಯುತ್ತಲೇ ಸಾಗಿದ್ದು ಇದು ಕನ್ನಡ ಕಿರುತೆರೆಯಲ್ಲಿ ಒಂದು ರೀತಿಯ ಟ್ರೆಂಡ್ ಸೆಟ್ ಮಾಡಿದ ಧಾರಾವಾಹಿ.

English summary
The biggest wedding event of 'Meera Madhava' which will telecast on May 1st 2014 4-30 pm to 8-00 Pm & 10 pm to 11 PM on Star Network's Kannada offering, Suvarna Channel. The daily soap 'Meera Madhava' run Monday to Friday at the 10 pm slot.
Please Wait while comments are loading...