ಬಿಗ್ ಬಾಸ್-12: 'ಇವರೇ' ನೋಡಿ ವಿಚಿತ್ರ ಜೋಡಿಗಳು, ಸೆಲೆಬ್ರಿಟಿ ಸ್ಪರ್ಧಿಗಳು.!
ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ಶೋ 'ಬಿಗ್ ಬಾಸ್' ಮತ್ತೊಮ್ಮೆ ನಿಮ್ಮ ಮುಂದೆ ಬಂದಿದೆ. 'ಬಿಗ್ ಬಾಸ್-12' ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಕಲರ್ಸ್ ವಾಹಿನಿಯಲ್ಲಿ 'ಬಿಗ್ ಬಾಸ್-12' ಗ್ರ್ಯಾಂಡ್ ಓಪನ್ನಿಂಗ್ ಪ್ರಸಾರ ಆಗಿದ್ದು, ಸ್ಪರ್ಧಿಗಳನ್ನ 'ಬಿಗ್ ಬಾಸ್' ಮನೆಯೊಳಗೆ ಸಲ್ಮಾನ್ ಖಾನ್ ಕಳುಹಿಸಿಕೊಟ್ಟರು.
ಪೂಣೆಯ ಲೋನಾವಾಲದಲ್ಲಿ ಇರುವ 'ಬಿಗ್ ಬಾಸ್' ಮನೆ ಈ ಬಾರಿ ಬೀಚ್ ಥೀಮ್ ನಿಂದ ಸಿಂಗಾರಗೊಂಡಿದೆ. ಬೀಚ್ ಸೈಡ್ ರೆಸಾರ್ಟ್ ನಂತೆ ಕಾಣುವ 'ಬಿಗ್ ಬಾಸ್' ಮನೆಯೊಳಗೆ ನಿನ್ನೆ 17 ಸ್ಪರ್ಧಿಗಳು ಪ್ರವೇಶಿಸಿದರು.
ಹೇಳಿ ಕೇಳಿ ಈ ಬಾರಿ 'ಬಿಗ್ ಬಾಸ್'ನಲ್ಲಿ ವಿಚಿತ್ರ ಜೋಡಿ ಕಾನ್ಸೆಪ್ಟ್ ಇದೆ. ಹೀಗಾಗಿ ಐದು 'ವಿಚಿತ್ರ' ಜೋಡಿಗಳು 'ಬಿಗ್ ಬಾಸ್' ಮನೆಯೊಳಗೆ ಬಲಗಾಲಿಟ್ಟು ಹೋಗಿದ್ದಾರೆ. ಇವರೊಂದಿಗೆ ಐದು ಸೆಲೆಬ್ರಿಟಿ ಸ್ಪರ್ಧಿಗಳು ಸಿಂಗಲ್ ಆಗಿ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ.
ಬನ್ನಿ ಹಾಗಾದ್ರೆ, ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಹೋಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ....

ಕರಣ್ ವೀರ್ ಬೋಹ್ರಾ
ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಮೊದಲು ಕಾಲಿಟ್ಟವರು ಹಿಂದಿ ಕಿರುತೆರೆ ನಟ ಕರಣ್ ವೀರ್ ಬೋಹ್ರಾ. 'ಕಸೌತಿ ಝಿಂದಗಿ ಕೇ', 'ನಾಗಿನ್-2' ಮುಂತಾದ ಧಾರಾವಾಹಿಗಳಲ್ಲಿ ಕರಣ್ ವೀರ್ ಅಭಿನಯಿಸಿದ್ದಾರೆ. ಅಲ್ಲದೇ, ಹಲವು ಡ್ಯಾನ್ಸ್ ಶೋಗಳಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈಗ 'ಬಿಗ್ ಬಾಸ್' ಮೂಲಕ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ ಕರಣ್ ವೀರ್ ಬೋಹ್ರಾ.

ರೋಮಿಲ್ ಚೌಧರಿ, ನಿರ್ಮಲ್ ಸಿಂಗ್
'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಎರಡನೇ ವಿಚಿತ್ರ ಜೋಡಿ - ಪೊಲೀಸ್ ಹಾಗೂ ವಕೀಲ. ವೃತ್ತಿಯಲ್ಲಿ ನಿರ್ಮಲ್ ಸಿಂಗ್ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದರೆ, ರೋಮಿಲ್ ಚೌಧರಿ ವಕೀಲ. ಇವರಿಬ್ಬರೂ ಕೂಡ ಕ್ಲೋಸ್ ಫ್ರೆಂಡ್ಸ್. 'ಬಿಗ್ ಬಾಸ್' ಮನೆಯಲ್ಲಿ ಪೊಲೀಸ್ ಖದರ್, ವಕೀಲನ ವಾದ ಹೇಗಿರುತ್ತೆ, ನೋಡಬೇಕು.

ನೇಹಾ ಪೆಂಡ್ಸೆ
ಮರಾಠಿ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನೇಹಾ ಪೆಂಡ್ಸೆ ನಟಿಸಿದ್ದಾರೆ. ಹಿಂದಿಯ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನೇಹಾ ಪೆಂಡ್ಸೆ ಇದೀಗ 'ಬಿಗ್ ಬಾಸ್' ಕದ ತಟ್ಟಿದ್ದಾರೆ.

ದೀಪಿಕಾ
'ಸಸುರಾಲ್ ಸಿಮರ್ ಕಾ' ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ದೀಪಿಕಾ 'ಬಿಗ್ ಬಾಸ್' ಮನೆ ಪ್ರವೇಶಿಸಿದ್ದಾರೆ. ವರದಿಗಳ ಪ್ರಕಾರ, 'ಬಿಗ್ ಬಾಸ್' ಈಕೆಗೆ ವಾರಕ್ಕೆ 14-15 ಲಕ್ಷ ಸಂಭಾವನೆ ಕೊಡುತ್ತಿದ್ದಾರಂತೆ.

ಅನೂಪ್ ಜಲೋಟ, ಜಸ್ಲೀನ್ ಮಥಾರು
ಇವರೇ ನೋಡಿ 'ಬಿಗ್ ಬಾಸ್' ಮನೆಯ ಅತಿ ವಿಚಿತ್ರ ಜೋಡಿ. ಅನೂಪ್ ಪ್ರಖ್ಯಾತ ಗಾಯಕ. ಇವರ ಶಿಷ್ಯೆ ಜಸ್ಲೀನ್. ಇವರಿಬ್ಬರ ಮಧ್ಯೆ ಇರುವುದು ಕೇವಲ ಗುರು-ಶಿಷ್ಯೆ ಸಂಬಂಧ ಅಲ್ಲ. ಮೂರು ವರ್ಷಗಳಿಂದ ಅನೂಪ್-ಜಸ್ಲೀನ್ ಪ್ರೇಮಿಸುತ್ತಿದ್ದಾರೆ. ಇವರಿಬ್ಬರ ಪ್ರೀತಿ 'ಬಿಗ್ ಬಾಸ್' ಮನೆಯಲ್ಲೂ ಮುಂದುವರೆಯುತ್ತಾ ಅನ್ನೋದೇ ಸದ್ಯದ ಕುತೂಹಲ.

ಸೃಷ್ಟಿ ರೋಡ್
'ಚೋಟಿ ಬಹು' ಧಾರಾವಾಹಿಯಲ್ಲಿ ನಟಿಸಿದ ಬೆಡಗಿ ಸೃಷ್ಟಿ ರೋಡ್. ಪ್ರಪ್ರಥಮ ಬಾರಿಗೆ ಈಕೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಬೇರೆ ಇದೆ. ಸೃಷ್ಟಿಯಿಂದ ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಏನೇನು ಅವಾಂತರ ಸೃಷ್ಟಿ ಆಗುತ್ತೋ.?

ಜೈಪುರದ ಸಹೋದರಿಯರು
'ಬಿಗ್ ಬಾಸ್-12'ಗೆ ಜೈಪುರದ ಸಹೋದರಿಯರಾದ ಸಬಾ ಖಾನ್ ಮತ್ತು ಸೋಮಿ ಖಾನ್ ಎಂಟ್ರಿಕೊಟ್ಟಿದ್ದಾರೆ. ಹೆಸರಿಗೆ ಅಕ್ಕ-ತಂಗಿ ಆದರೂ, ಇವರಿಬ್ಬರ ಮಧ್ಯೆ ಸ್ಪರ್ಧಾತ್ಮಕ ಮನೋಭಾವ ತುಸು ಜಾಸ್ತಿಯೇ ಇದೆ.

ಗಾಯಕ ಮತ್ತು ಅಭಿಮಾನಿ
'ಗ್ಯಾಂಗ್ಸ್ ಆಫ್ ವಸ್ಸೇಪುರ್' ಚಿತ್ರದಲ್ಲಿ ಹಾಡಿರುವ ಗಾಯಕ ದೀಪಕ್ ಠಾಕುರ್ ಮೂಲತಃ ಬಿಹಾರದವರು. ಇವರ ಅಪ್ಪಟ ಅಭಿಮಾನಿ ಊರ್ವಶಿ ವಾಣಿ ಜೊತೆಗೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ. ದೀಪಕ್ ಕಂಡ್ರೆ ಊರ್ವಶಿಗೆ ಇಷ್ಟ. ಇಬ್ಬರ ನಡುವಿನ ಪ್ರೀತಿ 'ಬಿಗ್ ಬಾಸ್' ಮನೆಯೊಳಗೆ ಮೊಳಕೆಯೊಡೆಯುತ್ತಾ.?

ಶ್ರೀಶಾಂತ್
ಅಂತೂ ಈ ಬಾರಿ 'ಬಿಗ್ ಬಾಸ್' ಮನೆಗೆ ಕ್ರಿಕೆಟರ್ ಶ್ರೀಶಾಂತ್ ಎಂಟ್ರಿಕೊಟ್ಟಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ರೊಚ್ಚಿಗೆದ್ದು ಬೌಲ್ ಮಾಡುತ್ತಿದ್ದ ಶ್ರೀಶಾಂತ್ 'ಬಿಗ್ ಬಾಸ್' ಮನೆಯಲ್ಲಿ ಶಾಂತವಾಗಿ ಇರುತ್ತಾರಾ.?

ಜನ ವೋಟ್ ಮಾಡಿದ ಜೋಡಿ
'ಬಿಗ್ ಬಾಸ್' ಪ್ರೀಮಿಯರ್ ಆಗುವುದಕ್ಕೂ ಮುನ್ನವೇ ಔಟ್ ಹೌಸ್ ಗೆ ರೋಶ್ಮಿ-ಮಿತ್ತಲ್ ಹಾಗೂ ಸುರ್ಭಿ-ಕ್ರಿತಿ ಜೋಡಿ ಎಂಟ್ರಿಕೊಟ್ಟಿದ್ದರು. ಈ ಜೋಡಿಗಳ ನಡುವೆ ಇಬ್ಬರಿಗೆ ಜನ ವೋಟ್ ಮಾಡಬೇಕಿತ್ತು. ಅತಿ ಹೆಚ್ಚು ಮತ ಪಡೆದ ರೋಶ್ಮಿ ಬಾನಿಕ್ ಮತ್ತು ಕ್ರಿತಿ ವರ್ಮಾ 'ಬಿಗ್ ಬಾಸ್' ಮನೆಯೊಳಗೆ ಜನ ಮೆಚ್ಚಿದ ಜೋಡಿಯಾಗಿ ಎಂಟ್ರಿಕೊಟ್ಟಿದ್ದಾರೆ.


Click it and Unblock the Notifications











