'ಬಿಗ್ ಬಾಸ್' ಮನೆ ಸೇರಿರುವ ಅನೂಪ್ ಜಲೋಟ ಮೇಲಿದೆ ಕಾಸ್ಟಿಂಗ್ ಕೌಚ್ ಆರೋಪ.!

'ಭಜನೆಗಳ ಸಾಮ್ರಾಟ' ಎಂದು ಕರೆಯಿಸಿಕೊಳ್ಳುವ ಪ್ರಖ್ಯಾತ ಗಾಯಕ ಅನೂಪ್ ಜಲೋಟ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದ್ದಾರೆ. ಅದಕ್ಕೆ ಕಾರಣ 'ಬಿಗ್ ಬಾಸ್-12'.

'ಬಿಗ್ ಬಾಸ್-12' ಕಾರ್ಯಕ್ರಮಕ್ಕೆ ಅನೂಪ್ ಜಲೋಟ ಸಿಂಗಲ್ ಆಗಿ ಬಂದಿದ್ದರೆ, ಇಷ್ಟೊಂದು ಅವಾಂತರ ಆಗುತ್ತಿರಲಿಲ್ಲ. 65 ವರ್ಷ ವಯಸ್ಸಿನ ಅನೂಪ್ ಜಲೋಟ, 28 ವರ್ಷದ ತಮ್ಮ ಶಿಷ್ಯೆ ಹಾಗೂ ಪ್ರೇಯಸಿ ಜಸ್ಲೀನ್ ಜೊತೆಗೆ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದು ಎಲ್ಲರ ಕಣ್ಣರಳಿಸಿದೆ.

ಅನೂಪ್ ಜಲೋಟ ರಸಿಕರ ರಾಜ ಎಂದೇ ಜನ ಆಡಿಕೊಂಡು ನಗುತ್ತಿದ್ದಾರೆ. ಸದ್ಯ ಜಸ್ಲೀನ್ ಜೊತೆಗೆ ಪ್ರಣಯ ಗೀತೆ ಹಾಡುತ್ತಿರುವ ಅನೂಪ್ ಜಲೋಟಗೆ ಅದಾಗಲೇ ಮೂರು ಮದುವೆ ಆಗಿದೆ ಅನ್ನೋದು ಹಲವರಿಗೆ ಗೊತ್ತೇ ಇಲ್ಲ.!

ಅಷ್ಟೇ ಅಲ್ಲ, ಇದೇ ಅನೂಪ್ ಜಲೋಟ ವಿರುದ್ಧ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪವನ್ನೂ ಮಾಡಿದ್ದರು. 'ಪದ್ಮಶ್ರೀ' ಪುರಸ್ಕೃತ ಅನೂಪ್ ಜಲೋಟ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ, ಓದಿರಿ...

ಉತ್ತರಾಖಂಡ್ ನಲ್ಲಿ ಹುಟ್ಟಿದ ಅನೂಪ್ ಜಲೋಟ

ಉತ್ತರಾಖಂಡ್ ನಲ್ಲಿ ಹುಟ್ಟಿದ ಅನೂಪ್ ಜಲೋಟ

1953, ಜುಲೈ 29 ರಂದು ಜನಸಿದ ಅನೂಪ್ ಜಲೋಟ ಬೆಳೆದಿದ್ದು ಉತ್ತರಖಂಡ್ ನಲ್ಲಿ. ಲಕ್ನೌನಲ್ಲಿ ವಿದ್ಯಾಭ್ಯಾಸ ಮುಗಿಸಿದ ಅನೂಪ್ ಜಲೋಟಗೆ ಸಂಗೀತ ರಕ್ತದಲ್ಲಿಯೇ ಬಂದಿದೆ. ಅನೂಪ್ ತಂದೆ ಪುರುಶೋತ್ತಮ್ ದಾಸ್ ಜಲೋಟ ಕೂಡ ಪ್ರಖ್ಯಾತ ಗಾಯಕ.

ಪದ್ಮಶ್ರೀ ಪುರಸ್ಕೃತ

ಪದ್ಮಶ್ರೀ ಪುರಸ್ಕೃತ

ಭಜನೆಗಳು, ಭಕ್ತಿಗೀತೆಗಳು ಹಾಗೂ ಗಝಲ್ ಗಳನ್ನ ಹಾಡಿ ಜನಪ್ರಿಯತೆ ಪಡೆದ ಅನೂಪ್ ಜಲೋಟ 'ಭಜನೆಗಳ ಸಾಮ್ರಾಟ' ಎಂದೇ ಪ್ರಖ್ಯಾತಿ ಪಡೆದರು. ಇವರಿಗೆ 2012 ರಲ್ಲಿ 'ಪದ್ಮಶ್ರೀ' ಪುರಸ್ಕಾರ ಲಭಿಸಿದೆ.

ಮೂರ್ಮೂರು ಮದುವೆ ಆದ ಅನೂಪ್ ಜಲೋಟ.!

ಮೂರ್ಮೂರು ಮದುವೆ ಆದ ಅನೂಪ್ ಜಲೋಟ.!

ಅಂದಿನ ತಮ್ಮ ಶಿಷ್ಯೆ ಸೊನಾಲಿ ರನ್ನ ಕುಟುಂಬದ ಒಪ್ಪಿಗೆ ಇಲ್ಲದೆ ಅನೂಪ್ ಜಲೋಟ ಮದುವೆ ಆದರು. ಬಳಿಕ ಬೀನಾ ಭಾಟಿಯಾ ಎಂಬುವರನ್ನ ಅನೂಪ್ ವಿವಾಹ ಮಾಡಿಕೊಂಡರು. ಆದ್ರೆ, ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಎರಡನೇ ಮದುವೆಯಿಂದ ವಿಚ್ಛೇದನ ಪಡೆದ ನಂತರ ಮೇಧಾ ಗುಜ್ರಾಲ್ ಎಂಬುವರನ್ನ ಅನೂಪ್ ಜಲೋಟ ವರಿಸಿದರು. 2014 ರಲ್ಲಿ ಮೇಧಾ ಅಸುನೀಗಿದರು. ಇದೀಗ ಜಸ್ಲೀನ್ ರನ್ನ ಅನೂಪ್ ಪ್ರೇಮಿಸುತ್ತಿದ್ದಾರೆ.

ಕಾಸ್ಟಿಂಗ್ ಕೌಚ್ ಆರೋಪ

ಕಾಸ್ಟಿಂಗ್ ಕೌಚ್ ಆರೋಪ

ಅನೂಪ್ ಜಲೋಟ ವಿರುದ್ಧ ನಟಿ ರೀನಾ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ತಮ್ಮೊಂದಿಗೆ ಸದಾ ಇರುವಂತೆ ನಟಿ ರೀನಾ ರನ್ನ ಅನೂಪ್ ಜಲೋಟ ಒತ್ತಾಯ ಮಾಡುತ್ತಿದ್ದರಂತೆ. ಆದ್ರೆ, ಇದೆಲ್ಲ ಸುಳ್ಳು ಎಂದು ಅನೂಪ್ ಜಲೋಟ ಹೇಳಿದ್ದರು.

ಶಿಷ್ಯೆ ಜೊತೆಗೆ 'ಪ್ಯಾರ್'

ಶಿಷ್ಯೆ ಜೊತೆಗೆ 'ಪ್ಯಾರ್'

ಇದೀಗ ಜಸ್ಲೀನ್ ಮಥಾರು ಎಂಬ ತಮ್ಮ ಶಿಷ್ಯೆ ಜೊತೆಗೆ ಅನೂಪ್ ಜಲೋಟ ಪ್ರೀತಿಯಲ್ಲಿ ಮುಳುಗಿದ್ದಾರೆ. 'ಬಿಗ್ ಬಾಸ್' ವೇದಿಕೆ ಮೂಲಕ ಇವರಿಬ್ಬರ ಪ್ರೀತಿಯ ಗುಟ್ಟು ರಟ್ಟಾಗಿದೆ. ಗುರುವನ್ನ ತಮ್ಮ ಪುತ್ರಿ ಪ್ರೀತಿಸುತ್ತಿರುವ ವಿಷಯ ಜಸ್ಲೀನ್ ತಂದೆಗೆ ಶಾಕ್ ತಂದಿದೆ.

More from Filmibeat

English summary
All About Bigg Boss 12 contestant, Singer Anup Jalota.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X