Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ 'ಬಿಗ್ ಬಾಸ್' ಸ್ಪರ್ಧಿ ಜಸ್ಲೀನ್ ಯಾರು.?
ಸರಿಯಾಗಿ ಎರಡು ದಿನಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ, ಜಸ್ಲೀನ್ ಮಥಾರು ಯಾರು ಅನ್ನೋದೇ ಜನರಿಗೆ ಗೊತ್ತಿರಲಿಲ್ಲ. ಆದ್ರೀಗ, ಯಾರ ಬಾಯಲ್ಲಿ ನೋಡಿದ್ರೂ, ಜಸ್ಲೀನ್ ಬಗ್ಗೆಯೇ ಮಾತು.!
ಸೋಷಿಯಲ್ ಮೀಡಿಯಾದಲ್ಲಿ ಜಸ್ಲೀನ್ ಮಥಾರು ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದ್ದಾರೆ. ಅದಕ್ಕೆ ಕಾರಣ 'ಬಿಗ್ ಬಾಸ್-12'.!
ಸಲ್ಮಾನ್ ಖಾನ್ ನಿರೂಪಣೆ ಇರುವ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬಿಗ್ ಬಾಸ್-12'ನಲ್ಲಿ ಜಸ್ಲೀನ್ ಮಥಾರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. 'ವಿಚಿತ್ರ ಜೋಡಿ' ವಿಭಾಗದಲ್ಲಿ ಪ್ರಖ್ಯಾತ ಗಾಯಕ ಅನೂಪ್ ಜಲೋಟ ಜೊತೆಗೆ ಜಸ್ಲೀನ್ ಮಥಾರು 'ಬಿಗ್ ಬಾಸ್' ಮನೆಯ ಹೊಸ್ತಿಲು ತುಳಿದಿದ್ದಾರೆ.
'ಭಜನೆಗಳ ಸಾಮ್ರಾಟ' ಅನೂಪ್ ಜಲೋಟ ಬಳಿ ಶಿಷ್ಯೆ ಆಗಿ ಜಸ್ಲೀನ್ ಮಥಾರು ಸಂಗೀತ ಕಲಿಯುತ್ತಿದ್ದಾರೆ. ಇವರಿಬ್ಬರ ನಡುವೆ ಕೇವಲ ಗುರು-ಶಿಷ್ಯೆ ಸಂಬಂಧ ಮಾತ್ರ ಇಲ್ಲ. ಪ್ರೀತಿ, ಪ್ರೇಮ, ಪ್ರಣಯ ಇದೆ ಎಂಬ ವಿಚಾರವನ್ನ ಇದೇ ಜಸ್ಲೀನ್ 'ಬಿಗ್ ಬಾಸ್' ವೇದಿಕೆ ಮೇಲೆ ಬಹಿರಂಗ ಪಡಿಸಿದ್ದರು.
65 ವರ್ಷದ ಅನೂಪ್ ಜಲೋಟ ಹಾಗೂ 28 ವರ್ಷದ ಜಸ್ಲೀನ್ ಮಥಾರು ಪ್ರೇಮ ಕಹಾನಿಯನ್ನ ಕಂಡು ವೀಕ್ಷಕರು ದಂಗಾಗಿದ್ದರು. ಅಸಲಿಗೆ, ಯಾರೀ ಜಸ್ಲೀನ್ ಮಥಾರು.? ಆಕೆಯ ಹಿನ್ನಲೆ ಏನು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ....
ವೃತ್ತಿಪರ ಗಾಯಕಿ ಜಸ್ಲೀನ್ ಮಥಾರು
ಜಸ್ಲೀನ್ ಮಥಾರು ಸಾಮಾನ್ಯ ಯುವತಿ ಅಲ್ಲ. ಆಕೆ ವೃತ್ತಿಪರ ಗಾಯಕಿ. 'ಚೈಯ್ಯ ಚೈಯ್ಯ' ಗಾಯಕ ಸುಖ್ವಿಂದರ್ ಸಿಂಗ್, ಮಿಕಾ ಸಿಂಗ್ ಸೇರಿದಂತೆ ಹಲವು ಗಾಯಕರ ಜೊತೆಗೆ ಜಸ್ಲೀನ್ ಮಥಾರು ಗಾನ ಸುಧೆ ಹರಿಸಿದ್ದಾರೆ.
65'ರ ಹಿರಿ ಜೀವಕ್ಕೆ 28 ವರ್ಷದ ಪ್ರೇಯಸಿ, 'ವಿಚಿತ್ರ ಜೋಡಿ' ಕಂಡು ವೀಕ್ಷಕರು ಕಕ್ಕಾಬಿಕ್ಕಿ.!
ಉತ್ತಮ ನೃತ್ಯಗಾರ್ತಿ
ಬರೀ ಗಾಯಕಿ ಮಾತ್ರ ಅಲ್ಲ, ಜಸ್ಲೀನ್ ಮಥಾರು ಉತ್ತಮ ನೃತ್ಯಗಾರ್ತಿ ಕೂಡ ಹೌದು. ಹಿಪ್-ಹಾಪ್, ಸಾಲ್ಸಾ, ಭರತನಾಟ್ಯಂ ಹಾಗೂ ಬೆಲ್ಲಿ ಡ್ಯಾನ್ಸ್ ಗಳನ್ನ ಜಸ್ಲೀನ್ ಮಥಾರು ಕರಗತ ಮಾಡಿಕೊಂಡಿದ್ದಾರೆ.
ಗುರು ಅನೂಪ್ ಜೊತೆಗೆ ಶಿಷ್ಯೆ ಪ್ರೇಮ ಪುರಾಣ: ಆಘಾತಗೊಂಡ ಜಸ್ಲೀನ್ ತಂದೆ.!
ಇನ್ಸ್ಟಾಗ್ರಾಮ್ ನಲ್ಲಿ ಫೇಮಸ್
ಬಾಲಿವುಡ್ ನಲ್ಲಿ ತಕ್ಕಮಟ್ಟಿಗೆ ಗುರುತಿಸಿಕೊಂಡಿರುವ ಜಸ್ಲೀನ್ ಮಥಾರುಗೆ ಇನ್ಸ್ಟಾಗ್ರಾಮ್ ನಲ್ಲಿ 59 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಬಿಗ್ ಬಾಸ್-12: 'ಇವರೇ' ನೋಡಿ ವಿಚಿತ್ರ ಜೋಡಿಗಳು, ಸೆಲೆಬ್ರಿಟಿ ಸ್ಪರ್ಧಿಗಳು.!
ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ
28 ವರ್ಷದ ಜಸ್ಲೀನ್ ಮಥಾರು ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ವೃತ್ತಿಯಲ್ಲಿ ನಟಿ ಹಾಗೂ ಗಾಯಕಿ ಆಗಿರುವ ಜಸ್ಲೀನ್ ಕ್ಲಾಸಿಕಲ್ ಹಾಗೂ ವೆಸ್ಟರ್ನ್ ಮ್ಯೂಸಿಕ್ ಕಲಿತಿದ್ದಾರೆ. ಈಕೆಯ ತಂದೆ ಕೇಸರ್ ಮಥಾರು. ಇವರೂ ಕೂಡ ನಟ, ನಿರ್ದೇಶಕ ಹಾಗೂ ಸ್ಕ್ರಿಪ್ಟ್ ರೈಟರ್.
ಕಿಕ್ ಬಾಕ್ಸಿಂಗ್ ಪಟು
ಕಳೆದ ಏಳು ವರ್ಷಗಳಿಂದ ಕಿಕ್ ಬಾಕ್ಸಿಂಗ್ ಕಲಿಯುತ್ತಿರುವ ಜಸ್ಲೀನ್, ಅದರಲ್ಲಿ ಬ್ರೌನ್ ಬೆಲ್ಟ್ ಪಡೆದಿದ್ದಾರೆ.
ಮೂರು ವರ್ಷಗಳಿಂದ ಪ್ರೀತಿ
ಅನೂಪ್ ಜಲೋಟ ಬಳಿ ಸಂಗೀತ ಕಲಿಯುತ್ತಿರುವ ಜಸ್ಲೀನ್ ಮಥಾರು, ಕಳೆದ ಮೂರುವರೆ ವರ್ಷಗಳಿಂದ ಅವರ ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ. ತಮ್ಮ ಪ್ರೀತಿ ವಿಚಾರವನ್ನ ಗುಟ್ಟಾಗಿ ಇಟ್ಟಿದ್ದ ಜಸ್ಲೀನ್, 'ಬಿಗ್ ಬಾಸ್' ವೇದಿಕೆ ಮೇಲೆ ರಟ್ಟು ಮಾಡಿದರು.