BBK10: ಬರೋಬ್ಬರಿ 93% ವೋಟ್ ಪಡೆದು ದೊಡ್ಮನೆಗೆ ತುಕಾಲಿ ಸಂತು ಎಂಟ್ರಿ

'ಕಾಮಿಡಿ ಕಿಲಾಡಿಗಳು ಸೀಸನ್- 3' ಶೋನಲ್ಲಿ ಸ್ಪರ್ಧಿಯಾಗಿ ವೀಕ್ಷಕರನ್ನು ನಗಿಸಿದ್ದ ಸಂತು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. 'ಜೋಡಿ ನಂ 1' ಶೋನಲ್ಲಿ ಸಂತು ಪತ್ನಿ ಮಾನಸಾ ಜೊತೆ ಭಾಗವಹಿಸಿದ್ದರು. ಇನ್ನು ಕಾಮಿಡಿ ಕಿಲಾಡಿಗಳು ಸೀಸನ್-3ರ ರನ್ನರ್ ಅಪ್ ಆಗಿದ್ದ ಸಂತು, ತುಕಾಲಿ ಸ್ಟಾರ್ ಸಂತು ಅಂತ್ಲೇ ಫೇಮಸ್ ಆಗಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಉದ್ದೂರು ಹೊಸಹಳ್ಳಿಯವರು ಸಂತೋಷ್. ತಮ್ಮ ಮಿಮಿಕ್ರಿ ಪ್ರತಿಭೆಯಿಂದ ಗುರ್ತಿಸಿಕೊಂಡಿದ್ದ ಸಂತು ಕಾಮಿಡಿ ಕಿಲಾಡಿಗಳು ಶೋಗೆ ಆಡಿಷನ್ ಕೊಟ್ಟು ಗೆದ್ದಿದ್ದರು. ಬಳಿಕ ಜೀ ಕನ್ನಡ ವೇದಿಕೆಯಲ್ಲಿ ಹಾಸ್ಯದ ಹೊನಲು ಹರಿಸಿ ವೀಕ್ಷಕರ ಗಮನ ಸೆಳೆದರು. ತೀರ್ಪುಗಾರರಾಗಿದ್ದ ಜಗ್ಗೇಶ್, ಯೋಗರಾಜ್‌ ಭಟ್ ಹಾಗೂ ರಕ್ಷಿತಾ ಪ್ರೇಮ್ ಮೆಚ್ಚುಗೆ ಗಳಿಸಿದ್ದರು.

Meet Bigg Boss Kannada season 10th contestant Thukali Santhu

ಒಂದಷ್ಟು ಸಿನಿಮಾಗಳಲ್ಲಿ ಸಂತು ಹಾಸ್ಯ ಕಲಾವಿದನಾಗಿ ನಟಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾನಸ ಎಂಬುವವರ ಜೊತೆ ಸಂತು ಮದುವೆ ನಡೆದಿತ್ತು. ಕಾಮಿಡಿ ಕಿಲಾಡಿಗಳು ಸೀಸನ್‌ 3ರಲ್ಲಿ ಸಂತು ಗೆಲ್ತಾರೆ ಅಂತ್ಲೇ ವೀಕ್ಷಕರು ಅಂದುಕೊಂಡಿದ್ದರು. ಆದರೆ ರಾಕೇಶ್ ಪೂಜಾರಿ ಗೆದ್ದಿದ್ದರು. ಸಂತು ರನ್ನರ್ ಅಪ್ ಆಗಿದ್ದರು.

ಕಾಮಿಡಿ ಕಿಲಾಡಿಗಳು ಬಳಿಕ ಸಿನಿಮಾಗಳ ಅವಕಾಶಗಳು ಬರಲು ಶುರುವಾಯಿತು. ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಗೆ ಮಡದಿ ಮಾನಸ ಜೊತೆಗೆ ಸಂತು ಎಂಟ್ರಿ ಕೊಟ್ಟರು. ಇಬ್ಬರು 'ಜಯಾ ಜಯಾ ಜಾಕೆಟ್ಟು' ಹಾಡಿಗೆ ಹೆಜ್ಜೆ ಹಾಕಿದ್ದರು. ಬಳಿಕ ತುಕಾಲಿ ಸಂತು ಎನ್ನುವ ಹೆಸರು ಯಾಕೆ ಎಂದು ಸುದೀಪ್ ಮುಂದೆ ವಿವರಿಸಿದರು.

ಬಿಗ್‌ಬಾಸ್ ಬಳಿ ಮಾತನಾಡಿ ಇಬ್ಬರನ್ನು ಒಳಗೆ ಕಳುಹಿಸಲಾ ಎಂದು ಸುದೀಪ್ ಕೇಳಿದ್ದರು. ಆದರೆ ಸಂತು ನಾನು ಒಬ್ಬನೇ ಹೋಗ್ತೀನಿ ಅಂದ್ರು. ಇಬ್ಬರು ಒಳಗೆ ಹೋಗಬೇಕು ಎಂದು ಅಲ್ಲಿದ್ದ ವೀಕ್ಷಕರನ್ನು ಕೇಳಿದಾಗ ಬಹಳಷ್ಟು ಜನ ಕೈ ಎತ್ತಿ ಒಳಗೆ ಹೋಗಬೇಕು ಎಂದರು. ಜೊತೆಗೆ ಹೋಗಲು ಮಾನಸ ಕೂಡ ಒಪ್ಪಲಿಲ್ಲ.

ಇಬ್ಬರು ಒಳಗೆ ಹೋಗಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದು ಸುದೀಪ್ ಹೇಳಿದರು. ಇನ್ನು ವೋಟಿಂಗ್‌ನಲ್ಲಿ 93%ರಷ್ಟು ವೋಟ್ ಪಡೆದು ಸಂತು ಹಿರಿಹಿರಿ ಹಿಗ್ಗಿದರು. ಬಿಗ್‌ಬಾಸ್ ಮನೆಗೆ 5ನೇ ಸ್ಪರ್ಧಿಯಾಗಿ ಸಂತು ಎಂಟ್ರಿ ಕೊಟ್ಟರು.

More from Filmibeat

English summary
Bigg Boss Kannada season 10: contestant Thukali Santhu biography
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X