ಬಿಗ್ ಬಾಸ್ ಮನೆಗೆ ಬಂದ 16 ಜನ ಯಾರು ? ಇವರ ಹಿನ್ನೆಲೆ ಏನು ? ಇಲ್ಲಿದೆ ಅವರ ಪರಿಚಯ

ಪ್ರತಿ ವರ್ಷ ''ಬಿಗ್‌ಬಾಸ್'' ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಈ ಶೋ ಅಪೂರ್ಣವೆನಿಸುತ್ತದೆ. ಕಾರ್ಯಕ್ರಮದ ಆಯೋಜಕರಿಗೆ.. ವಾಹಿನಿಯವರಿಗೆ.. ಕೂಡ ಈ ವಿಚಾರ ಚೆನ್ನಾಗೇ ಗೊತ್ತು. ಹೀಗಾಗಿಯೇ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ. ಇನ್ನು ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ..

ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ಬಿಗ್ ಬಾಸ್‌ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು.. ಕಾರ್ಯಕ್ರಮ ನೋಡಲು ಬಂದು ಕೂರಬೇಕು.

ಸದ್ಯ ಈ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ಮಲಯಾಳಂನ ಬಿಗ್ ಬಾಸ್ ಮನೆಗೆ 19ಜನರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಆ 18 ಜನರು ಯಾರು.. ? ಅವರ ಹಿನ್ನೆಲೆ ಏನು ? ಎನ್ನುವುದರ ವಿವರ ಇಲ್ಲಿದೆ.

1 ಆಶ್ನೂರ್ ಕೌರ್

ತಿಂದು ಆಡಿ ಬೆಳೆಯುವ ವಯಸ್ಸಿನಲ್ಲಿಯೇ ಬಾಲ ಕಲಾವಿದೆಯಾಗಿ ಕಿರುತೆರೆಯನ್ನು ಪ್ರವೇಶಿಸಿದ ಆಶ್ನೂರ್ ಕೌರ್, ಆ ನಂತರ ಝಾನ್ಸಿ ಕೀ ರಾಣಿ.. ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಮತ್ತು ಪಟಿಯಾಲಾ ಬೇಬ್ಸ್‌ನಂತಹ ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡರು. ತಮ್ಮ ಅಭಿನಯದಿಂದ ಜನ ಮನ ಗೆದ್ದರು. ಈಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

2. ಗೌರವ್ ಖನ್ನಾ

ಅನುಪಮಾ ಧಾರಾವಾಹಿಯ ಮೂಲಕ ಪ್ರಸಿದ್ಧರಾದ ಗೌರವ್ ಖನ್ನಾ ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಆ ಸುದ್ದಿ ನಿಜವಾಗಿದ್ದು ಗೌರವ್ ಖನ್ನಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ಧಾರೆ. ಸಿಐಡಿ.. ದಿಲ್ ಸೇ ದಿಯಾ ವಚನ್.. ಹೀಗೆ ಎರಡು ದಶಕಗಳಲ್ಲಿ ಹಲವಾರು ಧಾರಾವಾಹಿಗಳಲ್ಲಿ ಮಿಂಚಿರುವ ಇವರು ಸೆಲೆಬ್ರಿಟಿ ಮಾಸ್ಟರ್‌ಚೆಫ್ ನ ವಿನ್ನರ್ ಕೂಡ ಇವರು ಹೌದು ಎನ್ನುವುದು ವಿಶೇಷ.

3. ಫರ್ಹಾನ್ ಭಟ್

ಕಾಶ್ಮೀರ ಮೂಲದ ಚೆಲುವೆ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಫರ್ಹಾನ್ ಭಟ್ ಕೂಡ ಈ ಬಾರಿ ಮನೆಗೆ ಬಂದಿದ್ದಾರೆ. ಬಾಲಿವುಡ್‌ನಲ್ಲಿ ತೆರೆಗೆ ಬಂದ ನೋಟ್‌ಬುಕ್ ಮತ್ತು ಲೈಲಾ ಮಜ್ನು ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿರುವ ಫರ್ಹಾನ್ ಭಟ್ ನ್ಯಾಷನಲ್ ಲೆವಲ್ ಪ್ಲೇಯರ್ ಕೂಡ ಹೌದು.

Meet the Bigg Boss 19 Final 16 Amaal Mallik Gaurav Khanna and More Revealed

4. ಅಮಾಲ್ ಮಲ್ಲಿಕ್

ಒಂದು ಮಳೆ ಬಿಲ್ಲು ಸೇರಿ ಕನ್ನಡದಲ್ಲಿ ಹಲವು ಚಾರ್ಟ್ ಬಸ್ಟರ್ ಹಾಡುಗಳನ್ನು ಹಾಡಿರುವ ಅರ್ಮಾನ್ ಮಲ್ಲಿಕ್ ಅವರ ಸಹೋದರ ಅಮಾಲ್ ಮಲ್ಲಿಕ್ ಕೂಡ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ನೀಡಿದ್ದಾರೆ. ಸಂಗೀತ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅಮಾಲ್ ಅವರ ಮೊದಲ ಚಿತ್ರ ಸಲ್ಮಾನ್ ಖಾನ್ ಅವರದ್ದೇ ಆದ 'ಜೈ ಹೋ' (2014) ಎನ್ನುವುದು ವಿಶೇಷ. 'ಸೋಚ್ ನಾ ಸಕೆ', 'ಬೋಲ್ ದೋ ನಾ ಜರಾ' ಮತ್ತು 'ಮೈ ರಹೂಂ ಯಾ ನಾ ರಹೂಂ' ಇವರ ಉಳಿದ ಜನಪ್ರಿಯ ಹಾಡುಗಳು.

5. ತನ್ಯಾ ಮಿತ್ತಲ್

ಉದ್ಯಮಿಯಾಗಿ, ಭಾಷಣಗಾರ್ತಿಯಾಗಿ, ಮಾಡೆಲ್‌ ಆಗಿ ಗುರುತಿಸಿಕೊಂಡಿರುವ 2.5 ಮಿಲಿಯನ್ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ಗಳನ್ನು ಹೊಂದಿರುವ ತನ್ಯಾ ಮಿತ್ತಲ್ ಈ ಬಾರಿಯ ಬಿಗ್ ಬಾಸ್‌ ಮನೆಯನ್ನು ಪ್ರವೇಶಿಸಿದ್ದಾರೆ. ಮಹಾಕುಂಭ ಮೇಳದಲ್ಲಿ ಕಾಲ್ತುಳಿತವಾದಾಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸುದ್ದಿಯಾಗಿದ್ದ ತನ್ಯಾ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾದಾಗ ಭಯೋತ್ಫಾದಕರಿಗೆ ಧರ್ಮ ಇರುವುದಿಲ್ಲ ಎಂದು ಹೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು.

6. ಕುನಿಕಾ ಸದಾನಂದ್

''ಹಮ್ ಹೈ ರಾಹಿ ಪ್ಯಾರ್ ಕೇ'' ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ 90ರ ದಶಕದ ಖ್ಯಾತ ನಟಿ ಕುನಿಕಾ ಸದಾನಂದ್ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ನಟನೆಯಿಂ ಅಂತರವನ್ನು ಕಾಪಾಡಿಕೊಂಡಿರುವ ಇವರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ವಕೀಲರಾಗಿ ಕೂಡ ಕೆಲಸ ಮಾಡುತ್ತಿದ್ಧಾರೆ.

7. ನೀಲಂ ಗಿರಿ

ಭೋಜ್‌ಪುರಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ನೀಲಂ ಗಿರಿಯವರಿಗೆ ಕೂಡ ಈ ಬಾರಿಯ ಬಿಗ್ ಬಾಸ್ ಟಿಕೆಟ್ ನೀಡಲಾಗಿದೆ. ಈ ವರ್ಷದ ಪ್ರಬಲ ಸ್ಫರ್ಧಿಯಾಗಬಹುದು ಇವರು ಎಂದು ಕೂಡ ಹೇಳಲಾಗುತ್ತಿದೆ.

8. ನಗ್ಮಾ ಮಿರಜ್ಕರ್ ಮತ್ತು ಆವೇಜ್ ದರ್ಬಾರ್

ರಿಯಲ್ ಲೈಫಿನಲ್ಲಿ ಪ್ರೇಮದ ಅಮಲನ್ನೇರಿಸಿಕೊಂಡಿರುವ ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಾಜ್ಕರ್ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. 30 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಈ ಜೋಡಿ ಯಾವ ರೀತಿಯ ಮೋಡಿ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಆವೇಜ್ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದು ನಗ್ಮಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ.

meet-the-bigg-boss-19-final-16-amaal-mallik-gaurav-khanna-and-more-revealed

9.ನಟಾಲಿಯಾ ಜನೋಜೆಕ್

ಪೋಲೆಂಡ್‌ನಲ್ಲಿ ಹುಟ್ಟಿ ಸದ್ಯ ಭಾರತದಲ್ಲಿ ನಟಿಯಾಗಿ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿರುವ ಹಲವಾರು ಅಂತಾರಷ್ಟ್ರೀಯ ಸೌಂದರ್ಯ ಸ್ಫರ್ಧೆಗಳಲ್ಲಿ ಕೂಡ ಭಾಗವಹಿಸಿರುವ ನಟಾಲಿಯಾ ಜನೋಜೆಕ್ ಅವರನ್ನು ಕೂಡ ಬಿಗ್ ಬಾಸ್‌ ಮನೆಯೊಳಗೆ ಕಳುಹಿಸಲಾಗಿದೆ.

10. ನೆಹಲ್ ಚುಡಾಸಮಾ

2018ರ ಮಿಸ್ ಯೂನಿವರ್ಸ್ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, ಫಿಟ್ನೆಸ್ ಸಲಹೆಗಾರರಾಗಿ ಕೂಡ ಕೆಲಸ ಮಾಡುತ್ತಿರುವ ನೆಹಲ್ ಚುಡಾಸಮಾ ಕೂಡ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.

ಕೇವಲ ಇವರಷ್ಟೇ ಅಲ್ಲ ಇವರ ಜೊತೆ ಮೃದುಲ್ ತಿವಾರಿ, ಝೇಜಾನ್ ಖಾದ್ರಿ, ಪ್ರಣೀತ್ ಮೊರೆ, ಅಭಿಷೇಕ್ ಬಜಾಜ್, ಬೇಸಿರ್ ಅಲಿ ಕೂಡ ಈ ಬಾರಿ ಸ್ಫರ್ಧೆಯಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಯಾರು ಈ ಬಾರಿ ಪ್ರೇಕ್ಷಕರ ಹೃದಯ ಗೆಲ್ತಾರೆ..? ಟ್ರೋಪಿ ಮುಡಿಗೇರಿಸಿಕೊಳ್ತಾರೆ..? ವೈಲ್ಡ್ ಕಾರ್ಡ್ ಮೂಲಕ ಮನೆಯನ್ನು ಯಾರು ಪ್ರವೇಶ ಮಾಡುತ್ತಾರೆ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The wait is over! The final list of Bigg Boss 19 contestants is out. Find out all 16 names, including celebrity participants like Ashnoor Kaur and Amaal Mallik, revealed during the grand premiere.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X