'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!

By Harshitha

ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಐದನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಓಪನ್ನಿಂಗ್ ಪ್ರಸಾರ ಆಗಿದ್ದು, ಸ್ಪರ್ಧಿಗಳನ್ನ 'ದೊಡ್ಮನೆ'ಯೊಳಗೆ ಕಳುಹಿಸಿಕೊಡುವ ಕಾರ್ಯವನ್ನ ಸುದೀಪ್ ನಿರ್ವಹಿಸಿದರು.

ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೊರಗಿನಿಂದ 'ಅರಮನೆ'ಯಂತೆ ಕಾಣುವ 'ಬಿಗ್ ಬಾಸ್' ಮನೆಯೊಳಗೆ ಇಂದು 17 ಸ್ಪರ್ಧಿಗಳು ಬಲಗಾಲಿಟ್ಟು ಒಳಗೆ ಹೋಗಿದ್ದಾರೆ.

'ಮನಸೇ.. ಮನಸೇ.. ಥ್ಯಾಂಕ್ಯು..' ಹಾಡನ್ನು ಹಾಡುತ್ತಾ 'ಬಿಗ್ ಬಾಸ್ ಕನ್ನಡ-5' ವೇದಿಕೆಗೆ ಕಾಲಿಟ್ಟ ಕಿಚ್ಚ ಸುದೀಪ್, ಈ ಬಾರಿ ಯಾರ್ಯಾರನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಿದರು ಎಂಬುದನ್ನ ತಿಳಿಯುವ ಕುತೂಹಲ ಇದ್ದರೆ, ಒಮ್ಮೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....

'ಬಿಗ್ ಬಾಸ್' ಗೃಹಪ್ರವೇಶ ಮಾಡಿದ ಸುದೀಪ್

'ಬಿಗ್ ಬಾಸ್' ಗೃಹಪ್ರವೇಶ ಮಾಡಿದ ಸುದೀಪ್

ಸ್ಪರ್ಧಿಗಳು 'ಬಿಗ್ ಬಾಸ್' ಮನೆಯೊಳಗೆ ಬಲಗಾಲಿಡುವ ಮುನ್ನ ಕಿಚ್ಚ ಸುದೀಪ್ ಗೃಹಪ್ರವೇಶ ಮಾಡಿದರು. ಈ ಬಾರಿ 'ಬಿಗ್ ಬಾಸ್' ಮನೆಯ ಒಳಾಂಗಣ ಹೇಗಿದೆ ಎಂಬುದನ್ನ ವೀಕ್ಷಕರಿಗೆ ಸುದೀಪ್ ಪರಿಚಯ ಮಾಡಿಕೊಟ್ಟರು. ಹಿಂದೆಂದಿಗಿಂತಲೂ ದೊಡ್ಡದಾಗಿ ಕಾಣಿಸುತ್ತಿರುವ 'ಬಿಗ್ ಬಾಸ್' ಮನೆಯನ್ನ ಎಲ್ಲರಿಗೂ ದರ್ಶನ ಮಾಡಿಸಿದ ಬಳಿಕ ಸ್ಪರ್ಧಿಗಳನ್ನ ಪರಿಚಯಿಸಲು ಸುದೀಪ್ ಆರಂಭಿಸಿದರು.

ಜ್ಯೋತಿಷಿ ಜಯಶ್ರೀನಿವಾಸನ್

ಜ್ಯೋತಿಷಿ ಜಯಶ್ರೀನಿವಾಸನ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊಟ್ಟ ಮೊದಲ ಸ್ಪರ್ಧಿಯಾಗಿ 'ದೊಡ್ಮನೆ'ಯೊಳಗೆ ಎಂಟ್ರಿ ಕೊಟ್ಟವರು ಕನ್ನಡದ ಕಿರುತೆರೆಯ ಜನಪ್ರಿಯ ಜ್ಯೋತಿಷಿ ಜಯಶ್ರೀನಿವಾಸನ್. ಸಂಖ್ಯಾಶಾಸ್ತ್ರದ ಪ್ರಕಾರ, ಜಯಶ್ರೀನಿವಾಸನ್ ರವರಿಗೆ ನಂಬರ್ 6 ಲಕ್ಕಿ. 'ಬಿಗ್ ಬಾಸ್' ಕಾರ್ಯಕ್ರಮ ಶುರು ಆಗುತ್ತಿರುವುದು 15ನೇ ತಾರೀಖು (1+5=6). ಹೀಗಾಗಿ, ಗೆದ್ದೆ ಗೆಲ್ಲುವೆ ಎಂಬ ವಿಶ್ವಾಸದ ಮೇಲೆ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ.

ಕೊಡಗಿನ ಕುವರಿ ಮೇಘ

ಕೊಡಗಿನ ಕುವರಿ ಮೇಘ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ 'ಜನಸಾಮಾನ್ಯ ಸ್ಪರ್ಧಿ'ಯಾಗಿ ಎಂಟ್ರಿ ಕೊಟ್ಟವರು ಕೊಡಗಿನ ಕುವರಿ, ಶನಿವಾರಸಂತೆಯ ಸುಂದರಿ ಮೇಘ. 'ಡೆವಿಲ್ ಈಸ್ ಹಿಯರ್' ಎನ್ನುತ್ತಲೇ 'ಬಿಗ್' ಮನೆಗೆ ಕಾಲಿಟ್ಟಿದ್ದಾರೆ ಮೇಘ.

ದಯಾಳ್ ಪದ್ಮನಾಭನ್

ದಯಾಳ್ ಪದ್ಮನಾಭನ್

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ದಯಾಳ್ ಪದ್ಮನಾಭನ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೂರನೇ ಸ್ಪರ್ಧಿಯಾಗಿ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದಾರೆ.

ಸಿಹಿ ಕಹಿ ಚಂದ್ರು

ಸಿಹಿ ಕಹಿ ಚಂದ್ರು

ಬೊಂಬಾಟ್ ಭೋಜನ ಮಾಡುವುದರಲ್ಲಿ ಪರ್ಫೆಕ್ಟ್ ಆಗಿರುವ ಸಿಹಿ ಕಹಿ ಚಂದ್ರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

ಶ್ರುತಿ ಪ್ರಕಾಶ್

ಶ್ರುತಿ ಪ್ರಕಾಶ್

ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ಸ್ಪರ್ಧಿ. ಬೆಳಗಾವಿಯಲ್ಲಿ ಹುಟ್ಟಿದ ಶ್ರುತಿ ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುವ ಆಸೆ ಶ್ರುತಿ ಪ್ರಕಾಶ್ ರವರಿಗಿದೆ. ಹೀಗಾಗಿ ಅವರಿಗೆ 'ಬಿಗ್ ಬಾಸ್' ಒಂದು ಒಳ್ಳೆಯ ವೇದಿಕೆ.

'ಅಕ್ಕ' ಅನುಪಮಾ ಗೌಡ

'ಅಕ್ಕ' ಅನುಪಮಾ ಗೌಡ

'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಆರನೇ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ.

'ಕಾಮನ್ ಮ್ಯಾನ್' ರಿಯಾಝ್ ಬಾಷಾ

'ಕಾಮನ್ ಮ್ಯಾನ್' ರಿಯಾಝ್ ಬಾಷಾ

ರಿಯಾಝ್ ಬಾಷಾ ಮಧ್ಯಮ ವರ್ಗದ ಹುಡುಗ. ಮುಂಬೈನಲ್ಲಿ ಕೆಲಸ ಮಾಡಿ ಇದೀಗ ಬೆಂಗಳೂರಿನಲ್ಲಿ ನೆಲೆಯೂರಿರುವ ಪ್ರತಿಭಾವಂತ ಈತ. ಎಷ್ಟೋ ಕಾರ್ಪೋರೇಟ್ ಶೋಗಳನ್ನ ಮಾಡಿದ್ದರೂ, ಕಾಮನ್ ಮ್ಯಾನ್ ಆಗಿ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ ರಿಯಾಝ್. ಸ್ವಂತ ಮನೆ ಕಟ್ಟುವ ಉದ್ದೇಶದಿಂದ ಇವರು 'ಬಿಗ್ ಬಾಸ್' ವಿಜೇತರಾಗಲು ಛಲ ತೊಟ್ಟಿದ್ದಾರೆ.

ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ

ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ

''ಡಬ್ ಸ್ಮ್ಯಾಶ್ ಅನ್ನೋದು ಒಂದು ಕಲೆ. ಅದನ್ನ ಯಾವುದೇ ಸ್ಟೈಲ್ ನಲ್ಲಿ ಮಾಡಬಹುದು'' ಅಂತ ಹೇಳುವ ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ 'ಬಿಗ್ ಬಾಸ್' ಕಾರ್ಯಕ್ರಮದ ಎಂಟನೇ ಸ್ಪರ್ಧಿ. ಮೈಸೂರಿನಲ್ಲಿ ಹುಟ್ಟಿ ಬೆಳೆದ ನಿವೇದಿತಾ ಗೌಡಗಿನ್ನೂ ಹದಿನೆಂಟು ವರ್ಷ. 'ಬಿಗ್ ಬಾಸ್' ಕನ್ನಡದ ಐದು ಆವೃತ್ತಿಗಳಲ್ಲಿ ನಿವೇದಿತಾ ಗೌಡ ಅತಿ ಕಿರಿಯ ಸ್ಪರ್ಧಿ. 'ಬಿಗ್ ಬಾಸ್'ಗಾಗಿ ಬಿ.ಸಿ.ಎ ಸೆಮಿಸ್ಟರ್ ಪರೀಕ್ಷೆಯನ್ನೇ ಬಿಟ್ಟು ಬಂದಿದ್ದಾರೆ ಈ ನಿವೇದಿತಾ ಗೌಡ.

ಅರ್ಚಕ ಸಮೀರಾಚಾರ್ಯ

ಅರ್ಚಕ ಸಮೀರಾಚಾರ್ಯ

ಕಿರಿಯರು ತಪ್ಪದೆ ನೋಡುವ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಸಂಸ್ಕಾರ, ಸಹನೆ, ಬಾಂಧವ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 'ಬಿಗ್ ಬಾಸ್' ಮನೆಗೆ ಒಂಬತ್ತನೇ ಸ್ಪರ್ಧಿಯಾಗಿ ಬಂದಿದ್ದಾರೆ ಹುಬ್ಬಳ್ಳಿಯ ಪಂಡಿತ್ ಸಮೀರಾಚಾರ್ಯ.

'ಸೂಪರ್ ಸ್ಟಾರ್' ಜೆ.ಕೆ

'ಸೂಪರ್ ಸ್ಟಾರ್' ಜೆ.ಕೆ

ಸಿಸಿಎಲ್ ಆಟಗಾರ, ಕಿರುತೆರೆಯ 'ಸೂಪರ್ ಸ್ಟಾರ್', 'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಜೆ.ಕೆ 'ಬಿಗ್ ಬಾಸ್' ಕಾರ್ಯಕ್ರಮದ ಹತ್ತನೇ ಸ್ಪರ್ಧಿಯಾಗಿ 'ದೊಡ್ಮನೆ'ಗೆ ಕಾಲಿಟ್ಟಿದ್ದಾರೆ.

ಆಶಿತಾ ಚಂದ್ರಪ್ಪ

ಆಶಿತಾ ಚಂದ್ರಪ್ಪ

'ಜೊತೆ ಜೊತೆಯಲಿ' ಹಾಗೂ 'ನೀಲಿ' ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಆಶಿತಾ ಚಂದ್ರಪ್ಪ 'ಬಿಗ್ ಬಾಸ್' ಮನೆಗೆ ಹನ್ನೊಂದನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.

'ಸೇಲ್ಸ್ ಮ್ಯಾನ್' ದಿವಾಕರ್

'ಸೇಲ್ಸ್ ಮ್ಯಾನ್' ದಿವಾಕರ್

ಸೊಂಟ ನೋವು, ತಲೆನೋವು... ದೇಹದ ಯಾವುದೇ ನೋವಿರಲಿ... ನೆಗಡಿ, ಶೀತ, ಕೆಮ್ಮು.. ನಿಮಗೆ ಏನೇ ಆದರೂ... ಇವರ ಹತ್ತಿರ ಇದೆ ಔಷಧಿ. ಇವರೇ ಆಯುರ್ವೇದ ಪ್ರಾಡೆಕ್ಟ್ ಸೇಲ್ಸ್ ಮ್ಯಾನ್ ದಿವಾಕರ್. ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದಿರುವ ದಿವಾಕರ್ ಹೊಟ್ಟೆ ಪಾಡಿಗಾಗಿ ಮಾಡದ ಕೆಲಸ ಇಲ್ಲ. ಎಮ್ಮೆ ಮೇಯಿಸುವುದರಿಂದ ಹಿಡಿದು ಹೋಟೆಲ್ ನಲ್ಲಿ ಕೆಲಸ, ಕೂಲಿ ಕೆಲಸ, ಗಾರೆ ಕೆಲಸ ಕೂಡ ಮಾಡಿರುವ ದಿವಾಕರ್ ಹೊಟ್ಟೆ ಹಸಿವಾದಾಗ ಭಿಕ್ಷೆ ಕೂಡ ಬೇಡಿದ್ದಾರಂತೆ. ಇಂತಿಪ್ಪ ದಿವಾಕರ್ 'ಬಿಗ್ ಬಾಸ್' ಕಾರ್ಯಕ್ರಮದ ಹನ್ನೆರಡನೇ ಸ್ಪರ್ಧಿ.

ನಟಿ ತೇಜಸ್ವಿನಿ

ನಟಿ ತೇಜಸ್ವಿನಿ

'ಸವಿ ಸವಿ ನೆನಪು' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಗೂ 'ನಿಹಾರಿಕ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿರುವ ತೇಜಸ್ವಿನಿ ಇದೀಗ 'ಬಿಗ್ ಬಾಸ್' ಕಾರ್ಯಕ್ರಮದ ಹದಿಮೂರನೇ ಸ್ಪರ್ಧಿ ಆಗಿದ್ದಾರೆ.

'ಮೂರು ಪೆಗ್' ಚಂದನ್ ಶೆಟ್ಟಿ

'ಮೂರು ಪೆಗ್' ಚಂದನ್ ಶೆಟ್ಟಿ

''ಮೂರೇ ಮೂರು ಪೆಗ್ ಗೆ...'' ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ರ್ಯಾಪರ್ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹದಿನಾಲ್ಕನೇ ಸ್ಪರ್ಧಿ.

ಗೃಹಿಣಿ 'ಮಹಾರಾಣಿ' ಸುಮಿತ್ರಾ ದೇವಿ

ಗೃಹಿಣಿ 'ಮಹಾರಾಣಿ' ಸುಮಿತ್ರಾ ದೇವಿ

ಬೊಂಬೆ ಮಾತನಾಡಿಸುವ, ಮ್ಯಾಜಿಕ್ ಶೋ ಮಾಡುವ, ಮೈಸೂರಿನ ಗೃಹಿಣಿ ಸುಮಾ ರಾಜಕುಮಾರ್ ಅಲಿಯಾಸ್ ಮಹಾರಾಣಿ ಸುಮಿತ್ರಾ ದೇವಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹದಿನೈದನೇ ಸ್ಪರ್ಧಿ.

ಜಗನ್ನಾಥ್ ಚಂದ್ರಶೇಖರ್

ಜಗನ್ನಾಥ್ ಚಂದ್ರಶೇಖರ್

ಜನಪ್ರಿಯ ಧಾರಾವಾಹಿ 'ಗಾಂಧಾರಿ' ನಾಯಕ ಜಗನ್ನಾಥ್ ಚಂದ್ರಶೇಖರ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹದಿನಾರನೆಯ ಸ್ಪರ್ಧಿ.

ಕೃಷಿ ತಾಪಂಡ

ಕೃಷಿ ತಾಪಂಡ

'ಅಕಿರ' ಚಿತ್ರದ ನಾಯಕಿ ಕೊಡಗಿನ ಕುವರಿ ಕೃಷಿ ತಾಪಂಡ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17ನೇ ಸ್ಪರ್ಧಿ.

More from Filmibeat

English summary
Read the article to know the complete details of the Contestants of Bigg Boss Kannada 5. ಬಿಗ್ ಬಾಸ್ ಕನ್ನಡ 5 ಕಾರ್ಯಕ್ರಮದ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X