'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳು.!

ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಆರನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಓಪನ್ನಿಂಗ್ ಪ್ರಸಾರ ಆಗಿದ್ದು, ಸ್ಪರ್ಧಿಗಳನ್ನ 'ದೊಡ್ಮನೆ'ಯೊಳಗೆ ಕಳುಹಿಸಿಕೊಡುವ ಕಾರ್ಯವನ್ನ ಸುದೀಪ್ ನಿರ್ವಹಿಸಿದರು.

ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೊರಗಿನಿಂದ 'ಅರಮನೆ'ಯಂತೆ ಕಾಣುವ 'ಬಿಗ್ ಬಾಸ್' ಮನೆಯೊಳಗೆ ಇಂದು 18 ಸ್ಪರ್ಧಿಗಳು ಬಲಗಾಲಿಟ್ಟು ಒಳಗೆ ಹೋಗಿದ್ದಾರೆ.

'ಬಿಗ್ ಬಾಸ್' ಮನೆಯ ಗಾರ್ಡನ್ ಏರಿಯಾದಲ್ಲಿ 'ದಿ ವಿಲನ್' ಚಿತ್ರದ ಹಾಡಿಗೆ ಪರ್ಫಾರ್ಮ್ ಮಾಡುವ ಮೂಲಕ 'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಓಪನ್ನಿಂಗ್ ಗೆ ಸುದೀಪ್ ಎಂಟ್ರಿಕೊಟ್ಟರು.

ಹೊಸದಾಗಿ ತಲೆಯೆತ್ತಿರುವ 'ಬಿಗ್ ಬಾಸ್' ಮನೆ ಮುಂದೆ ನಿಂತು ಕಾರ್ಯಕ್ರಮಕ್ಕೆ ಸುದೀಪ್ ಚಾಲನೆ ಕೊಟ್ಟರು. ಈ ಬಾರಿ ಯಾರ್ಯಾರನ್ನ 'ಬಿಗ್ ಬಾಸ್' ಮನೆಯೊಳಗೆ ಸುದೀಪ್ ಕಳುಹಿಸಿದರು ಎಂಬುದನ್ನ ತಿಳಿಯುವ ಕುತೂಹಲ ಇದ್ದರೆ, ಒಮ್ಮೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....

'ಬಿಗ್ ಬಾಸ್' ಮನೆ ಪರಿಚಯಿಸಿದ ಸುದೀಪ್

'ಬಿಗ್ ಬಾಸ್' ಮನೆ ಪರಿಚಯಿಸಿದ ಸುದೀಪ್

ನೂತನವಾಗಿ, ಬೃಹತ್ ಆಗಿ ನಿರ್ಮಾಣಗೊಂಡಿರುವ 'ಬಿಗ್ ಬಾಸ್' ಮನೆಯೊಳಗೆ ಕಿಚ್ಚ ಸುದೀಪ್ ಎಂಟ್ರಿಕೊಟ್ಟರು. 'ಬಿಗ್ ಬಾಸ್' ಮನೆಯ ಒಳಾಂಗಣ ಹೇಗಿದೆ ಎಂಬುದನ್ನ ವೀಕ್ಷಕರಿಗೆ ಸುದೀಪ್ ಪರಿಚಯ ಮಾಡಿಕೊಟ್ಟರು. ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಜೈಲು ಹಾಗೂ ಮೇಕಪ್ ರೂಮ್ ಕೂಡ ಇದೆ ಕಣ್ರೀ. 'ಬಿಗ್ ಬಾಸ್' ಮನೆಯನ್ನ ಎಲ್ಲರಿಗೂ ದರ್ಶನ ಮಾಡಿಸಿದ ಬಳಿಕ ಸ್ಪರ್ಧಿಗಳನ್ನ ಪರಿಚಯಿಸಲು ಸುದೀಪ್ ಆರಂಭಿಸಿದರು.

ಮೂರು ವಿಶೇಷ ಅತಿಥಿ

ಮೂರು ವಿಶೇಷ ಅತಿಥಿ

'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಓಪನ್ನಿಂಗ್ ನಲ್ಲಿ 'ಬಿಗ್ ಬಾಸ್' ವಿನ್ನರ್ ನಟಿ ಶ್ರುತಿ, ಅರುಣ್ ಸಾಗರ್ ಹಾಗೂ ನಿವೇದಿತಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಸೋನು ಪಾಟೀಲ್

ಸೋನು ಪಾಟೀಲ್

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪುಟ್ಟ ಗ್ರಾಮದ ಬಡ ರೈತನ ಮಗಳು ಸೋನು ಪಾಟೀಲ್. ನೋಡಲು ಖಡಕ್ ಆಗಿ ಇರುವ ಸೋನು ಪಾಟೀಲ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. ನೀರು ಕುಡಿದಷ್ಟೇ ಸಲೀಸಾಗಿ ಬುಲೆಟ್ ಓಡಿಸುವ ಸೋನು ಪಾಟೀಲ್ ಜರ್ನಲಿಸಂ ಓದಿದ್ದಾರೆ. ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. 'ಆಟಂ ಬಾಂಬ್' ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದಿರುವ ಸೋನು ಪಾಟೀಲ್ ಯಾವ್ಯಾವ ಬಾಂಬ್ ಸಿಡಿಸುತ್ತಾರೋ, ನೋಡಬೇಕು.

ಆಂಡ್ರ್ಯೂ

ಆಂಡ್ರ್ಯೂ

140 ಕೆ.ಜಿ ತೂಗುವ ಆಂಡ್ರ್ಯೂ ತಿಂಡಿಪೋತ. 'ಬಿಗ್ ಬಾಸ್' ಮನೆಯಲ್ಲಿ ಏನೇ ಟಾಸ್ಕ್ ಕೊಟ್ಟರೂ ಮಾಡಲು ಇವರು ರೆಡಿ. ಆದ್ರೆ ಟೈಮ್ ಗೆ ಸರಿಯಾಗಿ ಊಟ ಕೊಡಬೇಕು ಅಷ್ಟೇ. ಮೊದಲೇ 'ಬಿಗ್ ಬಾಸ್' ಮನೆಯಲ್ಲಿ ಊಟಕ್ಕೆ ಕಿತ್ತಾಟ ಜಾಸ್ತಿ. ಈ ಆಂಡ್ರ್ಯೂ ಇಂದ ಈ ಬಾರಿ ಎಷ್ಟು ಜಗಳ ಆಗುತ್ತೋ.?!

ಜಯಶ್ರೀ

ಜಯಶ್ರೀ

'ಮಾಯಾಮೃಗ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ ಜಯಶ್ರೀ ಈ ಬಾರಿ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ದಾರೆ. ಚಿಟಪಟ ಅಂತ ಮಾತನಾಡುವ ನಟಿ ಜಯಶ್ರೀ 'ಬಿಗ್ ಬಾಸ್' ಮನೆಯಲ್ಲಿ ಹೇಗಿರ್ತಾರೆ, ನೋಡಬೇಕು.

ಎಂ.ಜೆ.ರಾಕೇಶ್

ಎಂ.ಜೆ.ರಾಕೇಶ್

ಹನ್ನೆರಡು ವರ್ಷಗಳಿಂದ ರೇಡಿಯೋ ಜಾಕಿ ಆಗಿ ಕೆಲಸ ಮಾಡುತ್ತಿರುವ ಎಂ.ಜೆ.ರಾಕೇಶ್ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ. ಸಿಂಗಲ್ ಆಗಿರುವ ರಾಕೇಶ್ ರೆಡಿ ಟು ಮಿಂಗಲ್. ರಾಜಸ್ಥಾನದಲ್ಲಿ ಹುಟ್ಟಿದ್ದರೂ ರಾಕೇಶ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಸರಾಗವಾಗಿ ಕನ್ನಡ ಮಾತನಾಡುವ ರಾಕೇಶ್ 'ಬಿಗ್ ಬಾಸ್' ಮನೆಯಲ್ಲಿ ಎಷ್ಟು ದಿನ ಇರ್ತಾರೋ, ನೋಡೋಣ.

ಒಗ್ಗರಣೆ ಡಬ್ಬಿ ಮುರಳಿ

ಒಗ್ಗರಣೆ ಡಬ್ಬಿ ಮುರಳಿ

'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ಮೂಲಕ ಖ್ಯಾತಿ ಗಳಿಸಿರುವ ಮುರಳಿ 'ಬಿಗ್ ಬಾಸ್' ಗೃಹ ಪ್ರವೇಶ ಮಾಡಿದ್ದಾರೆ. ಬಗೆಬಗೆಯ ಅಡುಗೆಯ ರುಚಿ ನೋಡುವ ಮುರಳಿಗೆ ಅಡುಗೆ ಮಾಡಲು ಬರಲ್ವಂತೆ.! 'ಬಿಗ್ ಬಾಸ್' ಮನೆಯಲ್ಲಿ ಮುರಳಿ ಹೇಗೆ ರಸದೌತಣ ನೀಡ್ತಾರೋ.?

ಅಕ್ಷತಾ ಪಾಂಡವಪುರ

ಅಕ್ಷತಾ ಪಾಂಡವಪುರ

ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಆರನೇ ಸ್ಪರ್ಧಿ. ನೀನಾಸಂ ನಲ್ಲಿ ರಂಗಶಿಕ್ಷಣ ಮುಗಿಸಿರುವ ಅಕ್ಷತಾ ಪಾಂಡವಪುರ ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ರಂಗಮಂದಿರ ಕಟ್ಟಬೇಕು ಎಂಬುದು ಈಕೆಯ ದೊಡ್ಡ ಕನಸು. 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ 'ಡ್ರಾಮಾ' ನಡೆಯುತ್ತಾ.?

ರಕ್ಷಿತಾ ರೈ

ರಕ್ಷಿತಾ ರೈ

ಮಂಗಳೂರು ಬೆಡಗಿ ರಕ್ಷಿತಾ ರೈ ಕ್ರಿಕೆಟರ್. ವಿದ್ಯಾಭ್ಯಾಸ ಮುಗಿಸಿರುವ ರಕ್ಷಿತಾ ರೈ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿದ್ದಾರೆ. ಎಂಟು-ಒಂಬತ್ತು ವರ್ಷಗಳಿಂದ ತಂದೆ-ತಾಯಿ ಜೊತೆ ಮಾತನಾಡದ ರಕ್ಷಿತಾ ರೈ ಆಟ 'ಬಿಗ್ ಬಾಸ್' ಮನೆಯಲ್ಲಿ ಹೇಗಿರುತ್ತೋ.?

Rapid ರಶ್ಮಿ

Rapid ರಶ್ಮಿ

ಹನ್ನೆರಡು ವರ್ಷಗಳಿಂದ ರೇಡಿಯೋ ಜಾಕಿ ಆಗಿ ಕೆಲಸ ಮಾಡುತ್ತಿರುವ Rapid ರಶ್ಮಿ ಕನ್ನಡ ಚಿತ್ರ ನಟಿ ಕೂಡ ಹೌದು. ತಮ್ಮ ನೇರ ಮಾತುಗಳಿಂದಲೇ ಫೇಮಸ್ ಆಗಿರುವ Rapid ರಶ್ಮಿ ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದ ಸ್ಪರ್ಧಿ. ತಮ್ಮ ಚಾಟ್ ಶೋಗಳಿಂದ ವಿವಾದಗಳನ್ನ ಹುಟ್ಟು ಹಾಕಿರುವ ರಶ್ಮಿ 'ಬಿಗ್ ಬಾಸ್' ಮನೆಯಲ್ಲಿ ವಿವಾದದ ಕೇಂದ್ರಬಿಂದು ಆಗ್ತಾರಾ.?

ಆಡಮ್ ಪಾಶಾ

ಆಡಮ್ ಪಾಶಾ

ಬೆಂಗಳೂರಿನಲ್ಲಿ ಹುಟ್ಟಿ ಇಂಗ್ಲೆಂಡ್ ನಲ್ಲಿ ಬೆಳೆದಿರುವ ಆಡಮ್ ಪಾಶಾ ತೃತೀಯ ಲಿಂಗಿ. 35 ವರ್ಷದ ಆಡಮ್ ಪಾಶಾಗೆ ತಮ್ಮ 13ನೇ ವಯಸ್ಸಿನಲ್ಲಿ ತಾವು ತೃತೀಯ ಲಿಂಗಿ ಅನ್ನೋದು ಗೊತ್ತಾಗಿದೆ. ಡ್ಯಾನ್ಸರ್ ಆಗಿರುವ ಆಡಮ್ ಪಾಶಾ 'ಬಿಗ್ ಬಾಸ್' ಕಾರ್ಯಕ್ರಮದ ಸ್ಪರ್ಧಿ. 'ಬಿಗ್ ಬಾಸ್' ಮನೆಗೆ ತೃತೀಯ ಲಿಂಗಿ ಎಂಟ್ರಿಕೊಟ್ಟಿರುವುದು ಇದೇ ಮೊದಲು.

ಕವಿತಾ ಗೌಡ

ಕವಿತಾ ಗೌಡ

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ (ಲಚ್ಚಿ/ಚಿನ್ನು) ಕವಿತಾ ಗೌಡ ಈ ಬಾರಿ 'ಬಿಗ್ ಬಾಸ್' ಮನೆಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. 'ಶ್ರೀನಿವಾಸ ಕಲ್ಯಾಣ' ಸೇರಿದಂತೆ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಕವಿತಾ ಗೌಡ 'ಬಿಗ್ ಬಾಸ್' ಮನೆಯಲ್ಲಿ ಕಮಾಲ್ ಮಾಡ್ತಾರಾ.?

ಜಿಮ್ ರವಿ

ಜಿಮ್ ರವಿ

ಕನ್ನಡ ಚಿತ್ರಗಳಲ್ಲಿಯೂ ನಟಿಸಿರುವ ಬಾಡಿ ಬಿಲ್ಡರ್ ಜಿಮ್ ರವಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಹನ್ನೊಂದನೇ ಸ್ಪರ್ಧಿ. ಹದಿನೈದು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ ಎ.ವಿ.ರವಿ ಅಲಿಯಾಸ್ ಜಿಮ್ ರವಿ. ಮಿಸ್ಟರ್ ಇಂಡಿಯಾ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಜಿಮ್ ರವಿ ಬಾಚಿಕೊಂಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ಚಿತ್ರರಂಗದ ಹಲವರಿಗೆ ರವಿ ಜಿಮ್ ಟ್ರೈನಿಂಗ್ ಕೊಟ್ಟಿದ್ದಾರೆ. ಇಂತಿಪ್ಪ ರವಿ 'ಬಿಗ್ ಬಾಸ್' ಮನೆಯಲ್ಲಿ ಹೇಗಿರ್ತಾರೆ.?

ಶಶಿ ಕುಮಾರ್

ಶಶಿ ಕುಮಾರ್

26 ವರ್ಷ ವಯಸ್ಸಿನ ಶಶಿ ಕುಮಾರ್ ರೈತ. ಎಂ.ಎಸ್ಸಿ ಇನ್ ಅಗ್ರಿಕಲ್ಚರ್ ಮಾಡಿರುವ ಶಶಿ ಕುಮಾರ್ ಕಲಾವಿದ ಕೂಡ ಹೌದು. ಈ ಬಾರಿ 'ಬಿಗ್ ಬಾಸ್' ಮನೆಯ ಕಾಮನ್ ಮ್ಯಾನ್ ಸ್ಪರ್ಧಿಗಳ ಪೈಕಿ ಶಶಿ ಕುಮಾರ್ ಕೂಡ ಒಬ್ಬರು.

ರೀಮಾ

ರೀಮಾ

ಬೆಂಗಳೂರಿನ ಐ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪುತ್ತೂರು ಮೂಲದ ರೀಮಾ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ. ಚೆನ್ನಾಗಿ ಡ್ಯಾನ್ಸ್ ಮಾಡುವ ರೀಮಾ 'ಬಿಗ್ ಬಾಸ್' ಕೊಡುವ ಎಲ್ಲಾ ಟಾಸ್ಕ್ ಗಳನ್ನೂ ಮಾಡ್ತಾರಂತೆ.

ನವೀನ್ ಸಜ್ಜು

ನವೀನ್ ಸಜ್ಜು

ಜನಪ್ರಿಯ ಕನ್ನಡ ಗೀತೆಗಳಿಗೆ ದನಿಯಾಗಿರುವ ಗಾಯಕ ನವೀನ್ ಸಜ್ಜು 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಅಂದ್ಮೇಲೆ, ಇನ್ಮೇಲೆ 'ಬಿಗ್ ಬಾಸ್' ಮನೆಯಲ್ಲೂ ನವೀನ್ ಸಜ್ಜು ಗಾನಸುಧೆಯನ್ನ ಕೇಳಬಹುದು, ನೋಡಬಹುದು.

ಸ್ನೇಹಾ ಆಚಾರ್ಯ

ಸ್ನೇಹಾ ಆಚಾರ್ಯ

ಕನ್ನಡ ನಟಿ, ಡ್ಯಾನ್ಸರ್, ಕೊರಿಯೋಗ್ರಾಫರ್ ಆಗಿರುವ ಸ್ನೇಹಾ ಆಚಾರ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಹದಿನೈದನೇ ಸ್ಪರ್ಧಿ.

ಆನಂದ್ ಮಾಲಗತ್ತಿ

ಆನಂದ್ ಮಾಲಗತ್ತಿ

ಯಾದಗಿರಿ ಜಿಲ್ಲೆಯ ಆನಂದ್ ಮಾಲಗತ್ತಿ ವೃತ್ತಿಯಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್. ತಾಯಿ ಇಲ್ಲದ ಆನಂದ್ ಮಾಲಗತ್ತಿ ಸಾಧನೆ ಮಾಡಲು 'ಬಿಗ್ ಬಾಸ್' ಮನೆಗೆ ಸ್ಪರ್ಧಿಯಾಗಿ ಬಂದಿದ್ದಾರೆ.

ನಯನ ಪುಟ್ಟಸ್ವಾಮಿ

ನಯನ ಪುಟ್ಟಸ್ವಾಮಿ

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದ ನಯನ ಪುಟ್ಟಸ್ವಾಮಿ ಇದೀಗ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದಾರೆ. ಕನ್ನಡ ಚಿತ್ರಗಳಲ್ಲೂ ನಟಿಸಿರುವ ನಯನ ಪುಟ್ಟಸ್ವಾಮಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ಯಾಟೆ ಹುಡ್ಗಿಯ 'ಬಿಗ್ ಬಾಸ್' ಜರ್ನಿ ಹೇಗಿರುತ್ತೆ.?

ಧನರಾಜ್

ಧನರಾಜ್

ಕುಂದಾಪುರದ ಕುವರ ಧನರಾಜ್ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಹದಿನೆಂಟನೇ ಸ್ಪರ್ಧಿ. ಇವರು ಕಂಠದಾನ ಕಲಾವಿದರು ಹಾಗೂ struggling ಆಕ್ಟರ್. ಅದೃಷ್ಟವನ್ನ ಅರಸಿ ಧನರಾಜ್ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ. ಇವರಿಗೆ ಇಲ್ಲಿ ಅದೃಷ್ಟ ಖುಲಾಯಿಸುತ್ತಾ.?

More from Filmibeat

English summary
Read the article to know the complete details of the Contestants of Bigg Boss Kannada 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X