ಜೀ ಕನ್ನಡ ಕಾರ್ಯಕ್ರಮಗಳ ಹಿನ್ನೆಲೆ ಧ್ವನಿ ಇವ್ರದ್ದೆ; ಮೋಕ್ಷಿತಾ ಪರಿಚಯ ಮಾಡಿಸಿದ್ರು!

By ಎಸ್ ಸುಮಂತ್

ಮನರಂಜನೆಯ ಚಾನೆಲ್ ಗಳಲ್ಲಿ ಧಾರಾವಾಹಿಯ ಪ್ರೋಮೋಗಳಿಗೆ ನೀಡುವ ವಾಯ್ಸ್ ಬಹಳ ಮುಖ್ಯವಾಗುತ್ತದೆ. ವಾಯ್ಸ್‌ನಿಂದಾನೇ ಧಾರಾವಾಹಿಯ ಬಗ್ಗೆ ಕುತೂಹಲವೂ ಜಾಸ್ತಿ ಆಗುತ್ತದೆ. ಆದರೆ ಅವರ್ಯಾರು ತೆರೆಯ ಮೇಲೆ ಕಾಣಿಸುವುದಿಲ್ಲ. ತೆರೆಯ ಹಿಂದೆಯೇ ಇದ್ದು ಜನರನ್ನು ಸೆಳೆಯುತ್ತಾರೆ.

ಜೀ ಕನ್ನಡದಲ್ಲೂ ಪ್ರತಿಯೊಂದು ಧಾರಾವಾಹಿ, ರಿಯಾಲಿಟಿ ಶೋ, ಇವೆಂಟ್‌ಗಳ ಅಪ್ಡೇಟ್ ಕೊಡೋದಕ್ಕೆ ಒಂದು ವಾಯ್ಸ್ ಇದೆ. ಬಹಳ ವರ್ಷಗಳಿಂದ ಒಂದೇ ವಾಯ್ಸ್ ವೀಕ್ಷಕರ ಕಿವಿಗೆ ಇಂಪಾಗಿ ಕೇಳಿಸ್ತಾ ಇರೋದು. ಆ ಇಂಪಾದ ಧ್ವನಿಯ ವ್ಯಕ್ತಿಯನ್ನ 'ಪಾರು' ಅಲಿಯಾಸ್ ಮೋಕ್ಷಿತಾ ಪರಿಚಯ ಮಾಡಿಕೊಟ್ಟಿದ್ದಾರೆ ನೋಡಿ.

Meet the talent Chethan Solagi who gave voice for Zee kannada tv programs

ಪಾರು ಪರಿಚಯಿಸಿದ ಚೇತನ್

ಜೀ ಕನ್ನಡದಲ್ಲಿ 'ಶ್ರಾವಣಿ ಸುಬ್ರಮಣ್ಯ', 'ಅಮೃತಧಾರೆ', 'ಪುಟ್ಟಕ್ಕನ ಮಕ್ಕಳು', 'ಸೀತರಾಮ'ನ ಸೇರಿದಂತೆ ಎಲ್ಲಾ ಧಾರಾವಾಹಿಗಳಲ್ಲಿ ಅಂದಿನ ದಿನದ ಪ್ರೋಮೋಗಳಲ್ಲಿ ಬರುವ ವಾಯ್ಸ್ ಸೂಪರ್ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವರ್ಯಾರು ಎಂಬ ಮುಖ ಪರಿಚಯ ಇರಲಿಲ್ಲ. ಇದೀಗ ಮೋಕ್ಷಿತಾ ಅವರನ್ನ ಪರಿಚಯ ಮಾಡಿಕೊಟ್ಟಿದ್ದಾರೆ. 'ಪಾರು' ಸೀರಿಯಲ್ ಮುಗಿಯುವ ಸಮಯಕ್ಕೆ ಪರಿಚಯ ಮಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.

ಚೀತನ್ ಸೊಲಗಿ ಯಾರು..?

ಚೇತನ್ ಸೊಲಗಿ, ಹುಟ್ಟಿದ್ದು ಬೆಳೆದದ್ದು ಗದಗ ಜಿಲ್ಲೆಯ ಮುಂಡರಗಿಯಲ್ಲಿ. ಚಿಕ್ಕಂದಿನಿಂದ ಹಾಡು, ನಾಟಕ ಅಂತ ಮುಂದಿದ್ದ ಚೇತನ್‌ಗೆ ಪತ್ರಿಕೋದ್ಯಮದಲ್ಲಿ ವಿಪರೀತ ಆಸಕ್ತಿ. ಧರ್ಮಸ್ಥಳದ ಉಜಿರೆ ಕಾಲೇಜಿನಲ್ಲಿ ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಚೇತನ್ ಸೊಲಗಿಯವರ ಧ್ವನಿ ಅದ್ಭುತವಾಗಿದ್ದ ಕಾರಣ ಕಾಲೇಜು ದಿನಗಳಲ್ಲಿಯೇ ಡಾಕ್ಯುಮೆಂಟರಿಗಳಿಗೆಲ್ಲಾ ತಮ್ಮದೇ ಧ್ವನಿ ನೀಡುತ್ತಿದ್ದರು. ಅಷ್ಟೇ ಅಲ್ಲ ಪತ್ರಿಕೆಗಳಿಗೆ ಆರ್ಟಿಕಲ್‌ಗಳನ್ನು ಬರೆಯುವ ಹವ್ಯಾಸ ಇವರದ್ದಾಗಿತ್ತು. ಎಫ್ಎಂನಲ್ಲೂ ಧ್ವನಿ ನೀಡಿ ಗಮನ ಸೆಳೆದಿದ್ದರು.

ಶಿಕ್ಷಣ ಮುಗಿಸಿ ಜೀಯಲ್ಲಿ ಕೆಲಸ

ಶಿಕ್ಷಣ ಮುಗಿಸಿ ಬೆಂಗಳೂರಿಗೆ ಚೇತನ್ ಸೊಲಗಿ, ಜೀ ಕನ್ನಡದಲ್ಲಿ ಇಪಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಶುರು ಮಾಡಿದರು. ಕೆಲ ಧಾರಾವಾಹಿಗಳಿಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ ಚೇತನ್, ಸದ್ಯಕ್ಕೆ ಜೀ ಕನ್ನಡದಲ್ಲಿ ವಾಯ್ಸ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಧಾರಾವಾಹಿಗಳ ಪ್ರೋಮೋಗಳಿಗೆ ಇವರದ್ದೇ ವಾಯ್ಸ್, ಧಾರಾವಾಹಿಗಳ ಸಮಯ ಬದಲಾವಣೆ ಮತ್ತೇನೋ ಮಾಹಿತಿ ನೀಡಬೇಕೆಂದರೆ ಇವರೇ ಅದನ್ನ ಮಾಡುವುದು. ಈ ವಾಯ್ಸ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ.

ಚೇತನ್ ವಿಡಿಯೋಗೆ‌ ಬೆಂಕಿ ಕಮೆಂಟ್

ಸದ್ಯ ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಆದರೆ ಮೋಕ್ಷಿತಾ ಅಂದು ಮಾಡಿದ್ದ ವಿಡಿಯೋ ಇಂದು ವೈರಲ್ ಆಗಿದೆ. 'ಪಾರು' ಸೆಟ್‌ನಲ್ಲಿ ಮಾಡಿದ ವಿಡಿಯೋ ಇದಾಗಿದೆ. ಆ ವಿಡಿಯೋಗೆ ಉತ್ತರ ಕರ್ನಾಟಕದ ಮಂದಿ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಳ್ಳೊಳ್ಳೆ ಕಮೆಂಟ್‌ ಹಾಕುತ್ತಿದ್ದಾರೆ. ನಮ್ಮೂರಿನ ಪ್ರತಿಭೆ, ಮುಂಡರಗಿಯವರು, ನಾನು ಚೇತನ್ ಜೊತೆಗೆ ಓದಿದ್ದು ಅಂತೆಲ್ಲ ಬರೆದುಕೊಂಡಿದ್ದಾರೆ. ಮೋಕ್ಷಿತಾ ಹಂಚಿಕೊಂಡಿರುವ ವಿಡಿಯೋದಲ್ಲಿ ಚೇತನ್ ಅವರನ್ನು ನೋಡಿದರೆ ಅಷ್ಟು ಖಡಕ್ ಧ್ವನಿ ಇವರದ್ದೇನಾ? ಎಂಬ ಅನುಮಾನ ಬಾರದೆ ಇರುವುದಿಲ್ಲ. ಜೊತೆಗೆ ತುಂಬಾ ಇನೊಸೆಂಟ್ ವ್ಯಕ್ತಿ ಕೂಡ.

More from Filmibeat

English summary
When Bigg boss Fame Mokshita introduced Zee Kannada voice over artist Chethan Solagi;
Read more about: tv serial bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X