ಸಿನಿಮಾಗೆ ಜಿಗಿದರೂ ಕಿರುತೆರೆ ನಂಟು ಬಿಡದ ಮೇಘಾ ಶೆಟ್ಟಿ; ಸೀರಿಯಲ್ ಮತ್ತೆ ಪ್ರತ್ಯಕ್ಷ!

By ಫಿಲ್ಮಿಬೀಟ್ ಡೆಸ್ಕ್

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಬಳಿಕ ಬೆಳಕಿಗೆ ಬಂದವರು ಮೇಘಾ ಶೆಟ್ಟಿ. ಇದೊಂದು ಸೀರಿಯಲ್ ಇವರನ್ನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವಂತೆಯೂ ಮಾಡಿದೆ. ಈ ಧಾರಾವಾಹಿ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹೀಗಿದ್ದರೂ ಮೇಘಾ ಶೆಟ್ಟಿ ಕಿರುತೆರೆಯಿಂದ ದೂರ ಉಳಿದಿಲ್ಲ.

ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಕಿರುತೆರೆಯ ನಂಟನ್ನು ಹಾಗೇ ಉಳಿಸಿಕೊಂಡಿದ್ದಾರೆ. ಮೇಘಾ ಶೆಟ್ಟಿ ಅತ್ತ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ಇತ್ತ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿ ಬ್ಯುಸಿಯಾಗಿದ್ದಾರೆ. ಸದ್ಯ ಇವರು ನಿರ್ಮಾಣ ಮಾಡಿರುವ ಸಿನಿಮಾ ಇಂದು (ಏಪ್ರಿಲ್ 14) ಪ್ರಸಾರ ಆಗುತ್ತಿದೆ. ಇಷ್ಟೇ ಅಲ್ಲ, ಈ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

Megha Shetty coming back to serial with Muddu Sose as producer telecasting from April 14th

ಕೆಲವು ದಿನಗಳ ಹಿಂದಷ್ಟೇ ಮೇಘಾ ಶೆಟ್ಟಿ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿದ್ದರು. ಈಗ ಅದೇ ಧಾರಾವಾಹಿ ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ಹಾಗಿದ್ದರೆ, ಆ ಸೀರಯಲ್ ಯಾವುದು? ಮೇಘಾ ಶೆಟ್ಟಿ ಅತಿಥಿಯಾಗಿ ನಟಿಸುತ್ತಿದ್ದಾರಾ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಕಿರುತೆರೆಯಲ್ಲಿ ಮೇಘಾ ಶೆಟ್ಟಿ

ಮೇಘಾ ಶೆಟ್ಟಿಯನ್ನು ಕಿರುತೆರೆ ವೀಕ್ಷಕರು ಮಿಸ್ ಮಾಡಿಕೊಂಡಿದ್ದರು. 'ಜೊತೆ ಜೊತೆಯಲಿ' ಬಳಿಕ ಮೇಘಾ ಶೆಟ್ಟಿ ಸಿನಿಮಾ ಕಡೆಗೆ ವಾಲಿದ್ದರಿಂದ ಕಿರುತೆರೆಯಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಆದ್ರೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಎರಡೆರಡು ಜವಾಬ್ದಾರಿಯನ್ನು ಹೊತ್ತು ಕಿರುತೆರೆಗೆ ಮರಳಿದ್ದಾರೆ. ಅಂದ್ಹಾಗೆ ಆ ಧಾರಾವಾಹಿ ಯಾವುದು ಅಂದರೆ, 'ಮುದ್ದು ಸೊಸೆ'. ಈ ಧಾರಾವಾಹಿಯ ನಿರ್ಮಾಪಕಿ ಇವರೇ. ಅಲ್ಲದೆ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

'ಮುದ್ದು ಸೊಸೆ' ಯಾರು?

ನಟಿ ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದೇ ಹೋದರೂ, ಅತಿಥಿ ಪಾತ್ರದಲ್ಲಿ ಕಿರುತೆರೆ ವೀಕ್ಷಕರಿಗೆ ದರ್ಶನ ನೀಡಲಿದ್ದಾರೆ. 'ಮುದ್ದು ಸೊಸೆ'ಯನ್ನು ಮೇಘಾ ಶೆಟ್ಟಿಯವರೇ ನಿರ್ಮಾಣ ಮಾಡುತ್ತಿರುವುದರಿಂದ ಈ ಧಾರಾವಾಹಿಯ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇದು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Megha Shetty coming back to serial with Muddu Sose as producer telecasting from April 14th

ಬಿಗ್‌ಬಾಸ್ ತ್ರಿವಿಕ್ರಮ್ ಹೀರೋ

ಬಿಗ್‌ಬಾಸ್ ಮೂಲಕ ಖ್ಯಾತಿ ಗಳಿಸಿರುವ ತ್ರಿವಿಕ್ರಮ್ ಮುಂದಿನ ಹಾದಿ ಏನು ಅನ್ನೋದು ತಿಳಿದಿರಲಿಲ್ಲ. ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ? ಇಲ್ಲವೇ ಸೀರಿಯಲ್ ಅನ್ನು ಒಪ್ಪಿಕೊಳ್ಳುತ್ತಾರಾ? ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿಯೇ ಇತ್ತು. ಅದಕ್ಕೆ ತಕ್ಕಂತೆ 'ಮುದ್ದು ಸೊಸೆ' ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇಂದಿನಿಂದ ಕನ್ನಡಿಗರ ಮನೆಯ ಕಿರುತೆರೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಬಿಗ್‌ಬಾಸ್‌ ಮೂಲಕ ಕನ್ನಡಿಗರ ಮನಗೆದ್ದಂತೆ, ಈ ಧಾರಾವಾಹಿ ಮೂಲಕವೂ ಗೆಲ್ಲುತ್ತಾರಾ? ನೋಡಬೇಕಿದೆ.

ಮೇಘಾ ಶೆಟ್ಟಿ ಸಿನಿಮಾದಲ್ಲೂ ಬ್ಯುಸಿ

ಮೇಘಾ ಶೆಟ್ಟಿಗೆ ಇದು ಮೊದಲನೇ ಧಾರಾವಾಹಿಯೇನೂ ಅಲ್ಲ. ಈಗಾಗಲೇ 'ಕೆಂಡಸಂಪಿಗೆ', 'ಗೌರಿಶಂಕರ' ಅಂತಹ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಒಂದ್ಕಡೆ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರೆ, ಇನ್ನೊಂದು ಕಡೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಇವರ ಕೈಯಲ್ಲಿ 'ಆಫ್ಟರ್‌ ಆಪರೇಷನ್ ಲಂಡನ್ ಕೆಫೆ', 'ಚೀತಾ' ಹಾಗೂ 'ಗ್ರಾಮಾಯಣ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೂವರೆಗೂ ಸಿನಿಮಾದಲ್ಲಿ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಈ ಮೂರು ಸಿನಿಮಾಗಳು ಯಶಸ್ಸು ತಂದುಕೊಡುತ್ತಾ? ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Megha Shetty coming back to serial with Muddu Sose as producer telecasting from April 14th;
Read more about: megha shetty actress tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X